More

    ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಿ: ಧಾರವಾಡ ಕೃಷಿ ವಿವಿ ಕುಲಪತಿ ಡಾ.ಎಂ.ಬಿ.ಚೆಟ್ಟಿ

    ವಿಜಯಪುರ: ರೈತರು ಒಂದೇ ಬೆಳೆಯನ್ನು ಬೆಳೆಯದೆ ವೈವಿಧ್ಯಮಯ ಕೃಷಿ, ತೋಟಗಾರಿಕೆ, ಬೆಳೆಗಳ ಜತೆಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣೆ ಯಿಂದ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾಲಂಬನೆ ಸಾಧಿಸಬಹುದಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚೆಟ್ಟಿ ಹೇಳಿದರು.
    ಇಂಡಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಜರುಗಿದ 22ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.
    ಈ ಭಾಗದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಾದ ನಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಯನ್ನು ರೈತರು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಅದೇ ರೀತಿ ಕೃಷಿ ಬೆಳೆಗಳಾದ ತೊಗರಿ, ಕಡಲೆ, ಜೋಳ, ಸಿರಿಧಾನ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಆದರೆ, ರೈತರು ಮೌಲ್ಯವರ್ಧನೆ ಮತ್ತು ಸಂಸ್ಕರಣೆಯಂತಹ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿಲ್ಲ. ಇದರಿಂದಾಗಿ ಅವರಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಪಡೆಯದೆ ತೊಂದರೆ ಅನುಭಿಸುತ್ತಿದ್ದಾರೆ. ಇಂಡಿ ಭಾಗದಲ್ಲಿ ನಿಂಬೆ ಬೆಳೆ ಬೆಳೆಯುತ್ತಿದ್ದು, ಇದರ ಬೀಜ ಮತ್ತು ತೊಗಟೆಯಲ್ಲಿ ಕ್ಯಾನ್ಸರ್ ರೋಗ ನಿರೋಧಕ ಶಕ್ತಿ ಇದೆ ಎಂದರು.
    ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್ ಮಾತನಾಡಿ, ಒಂದು ಜಿಲ್ಲೆ ಒಂದು ಉತ್ಪನ್ನದಡಿ ವಿಜಯಪುರ ಜಿಲ್ಲೆಗೆ ನಿಂಬೆ ಬೆಳೆ ಆಯ್ಕೆ ಮಾಡಿದ್ದು, ವೈಯುಕ್ತಿಕ ಅಥವಾ ಸಂಘ ಸಂಸ್ಥೆಗಳು ಮುಂದೆ ಬಂದರೆ, ಶೇ.50 ರಷ್ಟು ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದರು.
    ಬೆಂಗಳೂರಿನ ಡಾ.ವೆಂಕಟಸುಬ್ರಮಣ್ಯನ್ ಮಾತನಾಡಿ, ಕೆವಿಕೆಗಳು ಕೃಷಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಆದಾಯ ದ್ವಿಗುಣಗೊಳಿಸುವ ಚಟುವಟಿಕೆಗಳಾದ ಸಮಗ್ರ ಕೃಷಿ ಪದ್ಧತಿ, ಕೃಷಿ ಯಂತ್ರೋಪಕರಣಗಳ ಮಹತ್ವ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಇಂಡಿ ಕೆವಿಕೆ ಮುಖ್ಯಸ್ಥ ಡಾ.ರಾಜೀವಕುಮಾರ ಬಿ. ನೆಗಳೂರ, ವಿಜಯಪುರ ಕೆವಿಕೆ ಮುಖ್ಯಸ್ಥ ಡಾ.ಎಸ್.ಎ.ಬಿರಾದಾರ, ವಿಸ್ತರಣಾ ನಿರ್ದೇಶಕ ಡಾ. ರಮೇಶ ಬಾಬು, ನೋಡಲ್ ಅಧಿಕಾರಿ ಡಾ.ಶ್ರೀಪಾದ ಕುಲಕರ್ಣಿ, ಡೀನ್ ಡಾ. ಎಸ್. ಬಿ. ಕಲಘಟಗಿ, ಸಹ ಸಂಶೋಧನಾ ನಿರ್ದೇಶಕ ಡಾ. ಎ.ಕೆ. ಗುಗ್ಗರಿ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ, ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕ ಡಾ. ಟಿ. ಸಿದ್ದಣ್ಣ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ವಸಂತ ನಾಯಕ್, ಪ್ರಗತಿಪರ ರೈತರಾದ ಎಸ್.ಟಿ. ಪಾಟೀಲ್, ಮಳಸಿದ್ದ ಗುಡ್ಡೊಡಗಿ, ಸಂಜೀವ ಭೈರಶೆಟ್ಟಿ, ಸಿದ್ದಪ್ಪ ಬಾಸಗೊಂಡ, ಕೆ.ಎಲ್.ದಶವಂತ, ಮಲ್ಲಮ್ಮ ಶೆಟ್ಟಪ್ಪ ನಾವಿ, ಸುವರ್ಣ ಸಿದ್ರಾಮ ಬಿರಾದಾರ, ನಿಂಗನಗೌಡ ಎಸ್.ಪಾಟೀಲ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts