More

    ರೈತರಿಗೆ ಸೌಲಭ್ಯ ಸಿಕ್ಕರೆ ಕೃಷಿ ರಥ ಸಾರ್ಥಕ

    ಎನ್.ಆರ್.ಪುರ: ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಿಳಿಸುವ ಕೃಷಿ ರಥ ಒಳ್ಳೆಯ ಕಾರ್ಯಕ್ರಮ. ಆದರೆ ಮಾಹಿತಿ ನೀಡಿದಂತೆ ಎಲ್ಲ ಸವಲತ್ತುಗಳು ರೈತರಿಗೆ ಸಿಕ್ಕರೆ ಮಾತ್ರ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

    ಕೃಷಿ ಇಲಾಖೆ ಆವರಣದಲ್ಲಿ ಗುರುವಾರ ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ ಕೃಷಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದಿಂದ ಸಿಗುವ ಎಲ್ಲ ಮಾಹಿತಿಯನ್ನು ಕೃಷಿ ರಥದ ಮೂಲಕ ಪ್ರತಿ ಹಳ್ಳಿಗೂ ತಲುಪಿಸಲಾಗುವುದು. ಪಹಣಿಯಲ್ಲಿ ಬೆಳೆ ಕಾಲಂ ಬರುತ್ತಿಲ್ಲ ಎಂಬ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಕಳೆದ ವರ್ಷ ಹಾಗೂ ಈ ವರ್ಷದ ಬೆಳೆ ಹಾನಿ ಸೇರಿಸಿ ಸರ್ಕಾರವು ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ಸಹಾಯಕ ಕೃಷಿ ನಿರ್ದೇಶಕ ರಮೇಶ ಮಸ್ಕಲೆ ಮಾತನಾಡಿ, ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಕೃಷಿ ರಥದಲ್ಲಿ ಮೂರು ದಿನಗಳ ಕಾಲ ತಾಲೂಕಿನ 14 ಗ್ರಾಪಂಗಳಲ್ಲಿ ಧ್ವನಿವರ್ಧಕ ಹಾಗೂ ಕರಪತ್ರದ ಮೂಲಕ ಪ್ರಚಾರ ಮಾಡಲಿದ್ದೇವೆ. ಗ್ರಾಪಂ ಕಚೇರಿ ಮುಂದೆ ಹಾಗೂ ರಥ ಹಾದುಹೋಗುವ ಗ್ರಾಮಗಳಲ್ಲಿ ಪ್ರಚಾರ ಮಾಡುತ್ತೇವೆ. ಈ ರಥದಲ್ಲಿ ಒಬ್ಬರು ಕೃಷಿ ಅಧಿಕಾರಿ ಇರುತ್ತಾರೆ ಎಂದು ತಿಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts