More

    ರೈತರಿಗೆ ತಕ್ಷಣ ಬೆಳೆಹಾನಿ ಪರಿಹಾರ ನೀಡಿ

    ನವಲಗುಂದ: ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ತುಪ್ಪರಿಹಳ್ಳದಲ್ಲಿ ಪ್ರವಾಹ ಉಂಟಾಗಿ ತಾಲೂಕಿನ ಶಿರೂರ, ಆಹೆಟ್ಟಿ, ಬ್ಯಾಲ್ಯಾಳ, ಹನಸಿ, ಶಿರಕೋರ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಮುಂಗಾರು ಬೆಳೆಗಳು ಹಾನಿಗೀಡಾಗಿವೆ. ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಆಗ್ರಹಿಸಿದ್ದಾರೆ.

    ಭಾನುವಾರ ತುಪ್ಪರಿಹಳ್ಳದ ಪ್ರವಾಹದಿಂದ ಹಾನಿಗೊಳಗಾದ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ ಅವರು ಮಾತನಾಡಿದರು.

    ಪ್ರವಾಹದಿಂದ ಶಿರೂರ ಗ್ರಾಮಕ್ಕೆ 5 ದಿನ ರಸ್ತೆ ಸಂಚಾರವಿಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸಿದ್ದರು. ಹೆದ್ದಾರಿ ದುರಸ್ಥಿ ಕಾಮಗಾರಿಯನ್ನು ಗುತ್ತಿಗೆದಾರರು ಒಂದು ವರ್ಷವಾದರೂ ಇನ್ನೂ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದರು.

    ಬೆಣ್ಣಿಹಳ್ಳ ಪ್ರವಾಹದಿಂದ ಹಾನಿಗೊಳಗಾದ ಪಡೇಸೂರ, ಯಮನೂರ. ಆರೇಕುರಹಟ್ಟಿ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸಂಧ್ಯಾ ಸುರಕ್ಷಾ, ಅಂಗವಿಕಲ, ಪೈಲ್ವಾನರು, ಕಲಾವಿದರು, ಹಾಗೂ ವೃದ್ಧಾಪ್ಯ ಫಲಾನುಭವಿಗಳು ಮಾಸಾಶನ ದೊರೆಯದೇ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೆ ಅವರಿಗೆ ಮಾಸಾಶನ ಬಿಡುಗೊಳಿಸಬೇಕು. ರೈತರಿಗೆ ಸಕಾಲಕ್ಕೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

    ಮಲಪ್ರಭಾ ಜಲಾಶಯದಲ್ಲಿ ಗರಿಷ್ಠ 38 ಟಿಎಂಸಿ ನೀರು ಸಂಗ್ರಹವಾಗಬೇಕು. ಡ್ಯಾಂನಲ್ಲಿ ಸದ್ಯ 27 ಟಿಎಂಸಿ ನೀರು ಸಂಗ್ರಹವಿದೆ. ಅದಕ್ಕಾಗಿ ಮಲಪ್ರಭಾ ಡ್ಯಾಂನಿಂದ ಸದ್ಯ ನೀರು ಬಿಡಬಾರದು ಎಂದು ಕೋನರಡ್ಡಿ ಒತ್ತಾಯಿಸಿದರು.

    ಮಂಜು ಬಾಳಿ, ಈಶ್ವರ ಕಲ್ಲೂರ, ಸಂಗನಗೌಡ ತೋಟದ, ಬಸನಗೌಡ ರಾಯನಗೌಡರ, ಬಸವರಾಜ ರಾಗಿ, ಉಮೇಶ ಯಾದವಾಡ, ಚನ್ನಪ್ಪ ಶಿರಿಯಣ್ಣವರ, ಪರಪ್ಪ ಗಾಣಿಗೇರ, ಸುರೇಶ ಯಕ್ಕುಂಡಿ, ಮಾಬುಸಾಬ ಮುಲ್ಲಾ, ಸೋಮಪ್ಪ ಬಳಿಗೇರ. ಸುರೇಶ ಬೆಟಸೂರ, ಜಗದೀಶ ಉಗರಗೋಳ, ಮಲ್ಲಿಕಾರ್ಜುನ ಹೊಸಕೇರಿ, ಶಂಕರಗೌಡ ಪಾಟೀಲ, ಶರಣು ಯಮನೂರ, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts