More

    ರೈತರಿಂದ ಪ್ರತಿಭಟನೆ

    ನರೇಗಲ್ಲ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಜೇಜ್ ಹಿಂಬದಿಯ ತೋಟಗಳಿಗೆ ವಿದ್ಯುತ್ ಪೊರೈಸುವ ಟಿಸಿ ಸುಟ್ಟು ಐದು ದಿನಗಳಾದರೂ ಅದನ್ನು ಸರಿಪಡಿಸದ ಕಾರಣ ತೋಟದಲ್ಲಿನ ಬೆಳೆಗಳು ಒಣಗುತ್ತಿವೆ ಎಂದು ಆರೋಪಿಸಿ ಇಲ್ಲಿನ ರೈತರು ಜಕ್ಕಲಿ ರಸ್ತೆಯ ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ರೈತ ಶೇಖಪ್ಪ ಲಕ್ಕನಗೌಡ್ರ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಪದೇ ಪದೆ ಟಿಸಿ ಸುಟ್ಟು ಹೋಗುತ್ತಿದ್ದು, ಅದನ್ನು ಬದಲಾ ಯಿಸಲು ಹೆಸ್ಕಾಂ ಅಧಿಕಾರಿಗಳು ವಾರಗಟ್ಟೆಲೇ ಸತಾಯಿಸುತ್ತಿದ್ದಾರೆ. ಇದರಿಂದಾಗಿ ಜಮೀನಿನಲ್ಲಿನ ಉಳಾಗಡ್ಡಿ, ಬಾಳೆ, ಗೋವಿನ ಜೋಳದ ಬೆಳೆಗಳು ಒಣಗುತ್ತಿವೆ. 25 ಕೆವಿ ಟಿಸಿ ಬದಲಾಗಿ 63 ಕೆವಿ ಟಿಸಿ ಹಾಕುವಂತೆ ಶಾಖಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪದೇ ಪದೆ 25 ಕೆವಿ ಟಿಸಿ ಹಾಕುತ್ತಿದ್ದಾರೆ. ಹೀಗಾಗಿ 4-5 ದಿನಗಳಲ್ಲಿ ಮತ್ತೆ ಟಿಸಿ ಸುಟ್ಟು ಹೋಗುತ್ತಿದೆ. ಈ ಹಿಂದೆ ನಿರಂತರ ವಿದ್ಯುತ್ ಪೊರೈಕೆಯಾಗುತ್ತಿತ್ತು. ಆದರೆ, ಕಳೆದ ಒಂದು ವಾರದ ಹಿಂದೆ ನಿರಂತರ ವಿದ್ಯುತ್ ಸಂಪರ್ಕದಿಂದ ಬೇರ್ಪಡಿಸಲಾಗಿದ್ದು, ದಿನಕ್ಕೆ 7 ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಅದರ ಮಧ್ಯೆ ಲೈನ್ ದುರಸ್ತಿ ಎಂದು ಗಂಟೆಗಟ್ಟಲೆ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ ಬೆಳೆಗಳಿಗೆ ನೀರು ಹಾಯಿಸಲು ಸಾದ್ಯವಾಗುತ್ತಿಲ್ಲ. ಇನ್ನು ವಿದ್ಯುತ್ ಪೊರೈಕೆಯಲ್ಲಿ ಸಾಕಷ್ಟು ತೊಂದರೆಯಾಗುತ್ತಿರುವುದರಿಂದ ದಿಕ್ಕು ತೋಚದಂತ ಪರಿಸ್ಥಿತಿ ನಿರ್ವಣವಾಗಿದೆ. ಕೂಡಲೆ ಸಮಸ್ಯೆ ಬಗೆಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆ ಕೈಬಿಟ್ಟು ಕಚೇರಿ ಒಳಗೆ ಬನ್ನಿ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ ಎಂದು ಸ್ಥಳೀಯ ಸಿಬ್ಬಂದಿ ಮನವಿ ಮಾಡಿದರು. ಆದರೆ, ‘ಈಗಾಗಲೇ ಸಾಕಷ್ಟು ಸಮಯ ನೀಡಲಾಗಿತ್ತು. ಅದರೂ ನೀವು ಸಮಸ್ಯೆ ಬಗೆಹರಿಸಿಲ್ಲ. ನಿಮ್ಮ ಮೇಲೆ ನಮಗೆ ವಿಶ್ವಾಸವಿಲ್ಲ. ಮೇಲಾಧಿಕಾರಿಗಳು ಬಂದು ಉತ್ತರ ನೀಡುವವರೆಗೂ ಎದ್ದೇಳುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

    ಸ್ಥಳಕ್ಕಾಗಮಿಸಿದ ರೋಣ ವಿಭಾಗದ ಎಇಇ ಚೇತನ ಹಾದಿಮನಿ, 15 ಕೊಳವೆ ಬಾವಿಗಳಿಗೆ 25 ಕೆವಿ ಟಿಸಿ ಸಾಮರ್ಥ್ಯ ಸಾಕಾಗುವುದಿಲ್ಲ. ಆದ್ದರಿಂದ 25 ಕೆವಿ ಟಿಸಿ ಬದಲಾಗಿ 63 ಕೆವಿ ಟಿಸಿ ಹಾಕಲು ಈಗಾಗಲೇ ಮನವಿ ಸಲ್ಲಿಸಲಾಗಿದ್ದು, 15 ದಿನಗಳಲ್ಲಿ ಟಿಸಿ ಬರಲಿದ್ದು, ಬಂದ ತಕ್ಷಣ ಅಳವಡಿಸಲಾಗುವುದು. ಸದ್ಯ ಸುಟ್ಟಿರುವ ಟಿಸಿ ಬದಲಾಯಿಸಿ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ನಿಂಗನಗೌಡ ಲಕ್ಕನಗೌಡ್ರ, ಶೇಖಪ್ಪ ಕಳಕಣ್ಣವರ, ಶೇಖರಗೌಡ ಲಕ್ಕನಗೌಡ್ರ, ವೀರಪ್ಪ ಕುಂಬಾರ, ವಿರಪನಗೌಡ ಲಕ್ಕನಗೌಡ್ರ, ವೀರಬಸನಗೌಡ ಲಕ್ಕನ ಗೌಡ್ರ, ಚಂದ್ರಶೇಖರ ಕಳಕಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts