More

    ರೇಷ್ಮೆಗೆ ಬಂಗಾರದ ಬೆಲೆ ಇದ್ದರೂ ಬೆಳೆ ಇಲ್ಲ!

    ಕೋಲಾರ: ಜಿಲ್ಲೆಯ ಜನರ ಜೀವನಾಡಿಯಾಗಿದ್ದ ರೇಷ್ಮೆ ಕೃಷಿ ನೆಲಕಚ್ಚಿದ್ದು, ಗೂಡಿನ ಬೆಲೆ ಗಗನಕ್ಕೇರಿದೆ. ಜಿಲ್ಲೆಯಲ್ಲಿ 18,799 ಸಾವಿರ ಬೆಳೆಗಾರರಿದ್ದರೂ ವಾರುಕಟ್ಟೆಗಳಿಗೆ ಗೂಡು ತರುತ್ತಿರುವವರ ಸಂಖ್ಯೆ 100 ಸಹ ದಾಟುತ್ತಿಲ್ಲ.

    ಕೋಲಾರ ವಾರುಕಟ್ಟೆಯಲ್ಲಿ ಕೆಜಿ ಬೈವೋಲ್ಟಿನ್ ಗೂಡು ಬುಧವಾರ ದಾಖಲೆ ಎಂಬಂತೆ 999 ರೂ.ಗೆ ವಾರಾಟವಾಗಿದ್ದು, ಗುರುವಾರ 964 ರೂ.ಗೆ ವಾರಾಟವಾಗಿದೆ. ಮಿಶ್ರತಳಿ ಗೂಡು ಸಹ ಕ್ರಮವಾಗಿ 807 ಮತ್ತು 800ರೂ.ಗೆ ವಾರಾಟವಾಗಿದೆ. ನಿತ್ಯ 7ರಿಂದ 8 ಟನ್ ಗೂಡು ಬರುತ್ತಿದ್ದ ಕಡೆ ಪ್ರಸ್ತುತ ಬೈವೋಲ್ಟಿನ್ 1.8 ಟನ್ ಮತ್ತು ಮಿಶ್ರತಳಿ ಅರ್ಧಟನ್ ವಾತ್ರ ಸರಬರಾಜಾಗಿದೆ.

    ಹಳದಿ ಚಿನ್ನ ಎಂದೇ ಪ್ರಸಿದ್ಧಿ ಪಡೆದಿದ್ದ ರೇಷ್ಮೆಗೆ ಚಿನ್ನದಂತಹ ಬೆಲೆ ಬಂದಿದ್ದರೂ ರೈತರಿಗೆ ಸಂತಸವಾಗಿಲ್ಲ. ಏಕೆಂದರೆ ಶೇ.90ಕ್ಕೂ ಹೆಚ್ಚು ಬೆಳೆಗಾರರು ರೇಷ್ಮೆ ಹುಳು ಸಾಕಾಣಿಕೆಯಿಂದ ಹಿಂದೆ ಸರಿದಿದ್ದಾರೆ. ಇಡೀ ಜಿಲ್ಲೆಯಲ್ಲಿ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೊಡಗಿರುವವರ ಸಂಖ್ಯೆ ಪ್ರಸ್ತುತ ಲೆಕ್ಕಾಚಾರ ನೋಡಿದರೆ ಶೇ.10ರಿಂದ 15ರೊಳಗೇ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

    ಮಳೆಯಿಂದ ಹಿಪ್ಪುನೇರಳೆ ತೋಟಗಳು ಹಾನಿಗೊಳಗಾಗಿದ್ದು, ಸೊಪ್ಪು ಸರಿಯಾಗಿ ಬಾರದ ಕಾರಣ ರೈತರು ಹುಳು ಸಾಕಾಣಿಕೆಯಿಂದ ಹಿಂದೆ ಸರಿದಿದ್ದಾರೆ. ಇದು ತಾತ್ಕಾಲಿಕ ಹಿನ್ನಡೆ ಅಷ್ಟೆ, ಹದಿನೈದು, ಇಪ್ಪತ್ತು ದಿನದಲ್ಲಿ ಎಲ್ಲ ಸರಿಹೋಗುತ್ತದೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ಹೇಳುತ್ತಾರಾದರೂ, ಇದಿಷ್ಟೇ ಕಾರಣವಲ್ಲ ಎಂಬುದು ರೈತರ ವಾದ.

    ಲಾಕ್‌ಡೌನ್‌ಗೂ ಮುಂಚೆ ಚೀನಾ ರೇಷ್ಮೆ ಬರುತ್ತಿತ್ತು. ಆಗ ಕೆಜಿ ಗೂಡಿನ ಬೆಲೆ 200ರಿಂದ 300 ರೂ. ಇರುತ್ತಿತ್ತು. ಹುಳು ಸಾಕಾಣಿಕೆಗೆ ತಗುಲುತ್ತಿದ್ದ ವೆಚ್ಚ ಗೂಡು ವಾರಾಟದಿಂದ ಬರುತ್ತಿದುದಕ್ಕಿಂತ ಅಧಿಕವಾಗಿರುತ್ತಿತ್ತು. ಹೀಗಾಗಿ ಕೆಲವರು ಹಿಪ್ಪುನೇರಳೆ ತೋಟ ಕಿತ್ತುಹಾಕಿದರು. ಮತ್ತೆ ಕೆಲವರು ಹಿಪ್ಪು ನೇರಳೆ ತೋಟಗಳ ಪಕ್ಕದ ತೋಟಗಳ ರೈತರು ಟೊವ್ಯಾಟೊ ಮತ್ತಿತರ ಬೆಳೆಗಳಿಗೆ ನಿರಂತರ ಕೀಟನಾಶಕ ಸಿಂಪಡಣೆ ವಾಡುತ್ತಿದ್ದುದರಿಂದ ರೇಷ್ಮೆ ಬೆಳೆಗೆ ಹಾನಿಯಾಗುತ್ತದೆ ಎಂದು ಹಿಪ್ಪುನೇರಳೆ ಬುಡ ಕಿತ್ತುಹಾಕಿದರು. ಇನ್ನು ಕೆಲವರು ಟೊವ್ಯಾಟೊ ಮತ್ತಿತರ ಬೆಳೆಗಳಲ್ಲಿ ಅಧಿಕ ಲಾಭ ಸಿಗುತ್ತದೆ ಎಂದು ಹಿಪ್ಪುನೇರಳೆಗೆ ಇತಿಶ್ರಿ ಹಾಡಿದರು. ಇನ್ನೂ ಕೆಲವರು ಕೂಲಿಕಾರ್ಮಿಕರು ಸಿಗದಿದ್ದರಿಂದ ರೇಷ್ಮೆಕೃಷಿಯಿಂದ ದೂರ ಸರಿದರು. ಇದೆಲ್ಲದರ ಪರಿಣಾಮ ಈಗ ರೇಷ್ಮೆ ಕೃಷಿ ವಾಡುವ ಕುಟುಂಬಗಳು ಗ್ರಾಮಕ್ಕೊಂದು ಸಿಗುವುದು ಅಪರೂಪವಾಗಿದೆ.

    2020ರ ಡಿಸೆಂಬರ್‌ಲ್ಲಿ ಸಹ ಮಿಶ್ರತಳಿ ಗೂಡು 955 ರೂ., ಬೈವೋಲ್ಟಿನ್ 936 ರೂ.ಗೆ ವಾರಾಟವಾಗಿತ್ತಾದರೂ, ಕೋಲಾರ ವಾರುಕಟ್ಟೆಯಲ್ಲಿ ಕ್ರಮವಾಗಿ 428 ಮತ್ತು 489 ಲಾಟ್ ಗೂಡು ಬಂದಿತ್ತು. ಕಳೆದ ಡಿಸೆಂಬರ್‌ನಲ್ಲಿ ಮಿಶ್ರತಳಿ ಗೂಡಿಗೆ 837 ರೂ., ಬೈವೋಲ್ಟಿನ್‌ಗೆ 783 ರೂ. ದರ ಸಿಕ್ಕಿತ್ತು. ಕನಿಷ್ಠ 50 ಲಾಟ್ ಬರುತ್ತಿದ್ದವು. ಆದರೆ ಗುರುವಾರ ಕೇವಲ 33 ಲಾಟ್ ಬಂದಿದ್ದು, ಜಿಲ್ಲೆಯ ಶ್ರೀನಿವಾಸಪುರ, ಕ್ಯಾಲನೂರು ವಾರುಕಟ್ಟೆಗಳ ಲಾಟ್‌ಗಳು ಸರಿದರೂ 100 ಸಂಖ್ಯೆ ಮೀರುವುದಿಲ್ಲ. ತಿಂಗಳಿಗೆ 3000 ರೈತರೂ ಗೂಡು ತರುತ್ತಿಲ್ಲ ಎಂದರೆ ರೇಷ್ಮೆ ಕೃಷಿ ಜಿಲ್ಲೆಯಲ್ಲಿ ಯಾವ ಪರಿ ನಾವಾವಶೇಷವಾಗುವ ಹಾದಿ ಹಿಡಿದಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು.

    ಮಳೆಯಿಂದ ಹಾನಿಗೊಳಗಾಗಿರುವ ತೋಟಗಳಲ್ಲಿ ಈಗ ಚಿಗುರು ಕಾಣಿಸಿಕೊಳ್ಳುತ್ತಿದ್ದು, ವಾರ್ಚ್ ವೇಳೆಗೆ ರೇಷ್ಮೆ ಕೃಷಿ ಹಳಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ರೇಷ್ಮೆ ಇಲಾಖೆ, ವಾರುಕಟ್ಟೆ ಅಧಿಕಾರಿಗಳಿದ್ದಾರೆ. ರೈತರೂ ಬೆಲೆ ಏರಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಹಿಪ್ಪುನೇರಳೆ ತೋಟ ವಾಡುವತ್ತ ಒಲವು ತೋರಬಹುದು. ಆದರೆ ಅದು ಒಂದೆರಡು ತಿಂಗಳಲ್ಲಿ ಆಗುವ ಕೆಲಸವಲ್ಲ.

    ಕಳೆದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಮಳೆ ಹೆಚ್ಚಾಗಿ ಸುರಿದ ಪರಿಣಾಮ ಹಿಪ್ಪುನೇರಳೆ ಸೊಪ್ಪು ಸರಿಯಾಗಿ ಬರಲಿಲ್ಲ. ಇನ್ನು ಕೆಲ ರೈತರು ತೋಟಗಾರಿಕೆ ಬೆಳೆಗಳತ್ತ ಮುಖ ವಾಡಿ, ರೇಷ್ಮೆ ಕೃಷಿಯತ್ತ ಒಲವು ತೋರದೆ ಹೋಗಿದ್ದರಿಂದ ವಾರುಕಟ್ಟೆಗೆ ಬರುವ ಗೂಡಿನ ಪ್ರವಾಣ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.
    ವಿ.ಎಂ.ಕೆ. ಮಂಜು, ಆಲಹಳ್ಳಿ

    ಜಿಲ್ಲೆಯಲ್ಲಿ ಹೆಚ್ಚು ತೋಟಗಳು ಕೆರೆ ಅಚ್ಚುಕಟ್ಟು ಪ್ರದೇಶಗಳ ಕಾನೆ ಭೂಮಿಗಳಲ್ಲಿವೆ. ಮಳೆ ಹೆಚ್ಚಾದ್ದರಿಂದ ತೋಟಗಳು ಹಾನಿಗೊಳಗಾದವು. ಬಹುತೇಕ ರೈತರು ಗಿಡದ ದುಂಪೆ ಹೊಡೆದು ಸಾಲು ವಾಡಿ ಮಣ್ಣು ಹೇರಿರುವುದರಿಂದ ಮುಂದಿನ ದಿನಗಳಲ್ಲಿ ಸೊಪ್ಪು ಚೆನ್ನಾಗಿ ಬರುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಣದಲ್ಲಿ ರೇಷ್ಮೆ ಕೃಷಿಯಲ್ಲಿ ರೈತರು ಮುಂದುವರಿಯಲಿದ್ದಾರೆ.
    ಎಂ.ಮಂಜುನಾಥ್, ಸಹಾಯಕ ನಿರ್ದೇಶಕ, ರೇಷ್ಮೆ ಇಲಾಖೆ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts