More

    ರೇಬಿಸ್ ರೋಗದ ಬಗ್ಗೆ ಅರಿವಿರಲಿ

    ಬೆಟ್ಟದಪುರ: ರೇಬಿಸ್ ಗುಣಮುಖವಾಗುವ ಕಾಯಿಲೆ ಆಗಿದ್ದು, ಇದಕ್ಕೆ ಆಸ್ಪತ್ರೆಗಳಲ್ಲಿ ಔಷಧಳು ಲಭ್ಯವಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರತಿಯೊಬ್ಬರು ಅರಿವು ಹೊಂದಬೇಕು ಎಂದು ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಬಿ.ಎಂ ಸುಜಾತಾ ಲಕ್ಷ್ಮೀ ತಿಳಿಸಿದರು.

    ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ರೇಬಿಸ್ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಬಿಸ್ ಕಾಯಿಲೆ ಇರುವ ನಾಯಿ ಮನುಷ್ಯನಿಗೆ ಕಚ್ಚಿದರೆ ದೇಹದ ನರವ್ಯೆಹದ ಮೂಲಕ ವೈರಸ್ ಸೇರಿ ರೋಗ ಹರಡುತ್ತದೆ. ಇಂತಹ ಮನುಷ್ಯರು ಕೆಲವೊಮ್ಮೆ ನೀರು, ಬೆಳಕು ಹಾಗೂ ಗಾಳಿಯನ್ನು ಹೆಚ್ಚಾಗಿ ಕಂಡಾಗ ಹೆದರುವುದು ಹಾಗೂ ಹೆಚ್ಚಿನ ಆತಂಕಕ್ಕೆ ಒಳಗಾಗಿ ವಿಚಿತ್ರವಾಗಿ ಆಡುತ್ತಾರೆ. ಹಾಗಾಗಿ ನಾಯಿ ಕಚ್ಚಿದ ತಕ್ಷಣ ಸಮೀಪದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆದುಕೊಂಡು ರೋಗ ಹರಡದಂತೆ ಪ್ರತಿಯೊಬ್ಬರು ಎಚ್ಚೆತ್ತು ಕೊಳ್ಳಬೇಕು ಎಂದು ಸಲಹೆ ನೀಡಿದರು.

    ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಎಸ್.ಸಿ. ರಾಜೇಶ್ವರಿ, ವಿಶ್ವನಾಥ್, ಸಮುದಾಯ ಆರೋಗ್ಯಾಧಿಕಾರಿಗಳಾದ ಎಂ.ಸಿ. ರಾಧೇಶ್, ಎಂ.ಕೆ. ಲಾವಣ್ಯ, ಸಿಬ್ಬಂದಿ ಮಂಜುಳಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts