More

    ರೇಣುಕಾಚಾರ್ಯರ ತತ್ತ್ವಾದರ್ಶ ಪಾಲಿಸಿ – ಎಂ.ಜಿ.ಹಿರೇಮಠ

    ಬೆಳಗಾವಿ: ಸಮಾಜದಲ್ಲಿ ಶಾಂತಿ ನೆಲೆಸಲಿ ಮಾನವಕುಲಕ್ಕೆ ಜಯವಾಗಲಿ ಎಂದು ಪ್ರತಿಪಾದನೆ ಮಾಡಿರುವ ರೇಣುಕಾಚಾರ್ಯರ ತತ್ತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಹೇಳಿದರು.

    ಗುರುವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಯುಗಮಾನೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಜಗದ್ಗುರು ರೇಣುಕಾಚಾರ್ಯರು ಹಾಗೂ ಬಸವೇಶ್ವರರ ತತ್ತ್ವಾದರ್ಶಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಕೇವಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾತ್ರ ರೇಣುಕಾಚಾರ್ಯರು ಸೀಮಿತವಾಗಿಲ್ಲ. ಎಲ್ಲ ಸಮುದಾಯದ ಏಳಿಗೆಗಾಗಿ ಶ್ರಮಿಸಿದರು. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
    ಭಾರತ ಶಾಂತಿ ಬಯಸುತ್ತದೆ. ಅದು ರೇಣುಕಾಚಾರ್ಯರ ವಿಚಾರವೂ ಆಗಿತ್ತು. ಜಗದ್ಗುರು ರೇಣುಕಾಚಾರ್ಯರ ಜಯಂತಿ ಪ್ರತಿ ವರ್ಷ ಮಾ. 5ರಂದು ಆಚರಿಸಲು ಸರ್ಕಾರ ಸೂಚನೆ ನೀಡಿದೆ. ಅದರಂತೆ ರೇಣುಕಾಚಾರ್ಯರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

    ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರನ್ನು ಜಂಗಮ ಸಮುದಾಯಕ್ಕೆ ಸೀಮಿತ ಮಾಡುವುದು ಸರಿಯಲ್ಲ ಎಂದರು. ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಬೋಧಿಸಿದರು. ರೇಣುಕಾಚಾರ್ಯ ಅಗಸ್ತ್ಯ ಮಹರ್ಷಿಗೆ ಬೋಧಿಸಿದ ಮಹಾನ್ ಗ್ರಂಥವನ್ನು ಮುದ್ರಿಸಿದ ಕೀರ್ತಿ ಕಾರಂಜಿಮಠದ ಶ್ರೀಗಳಿಗೆ ಸಲ್ಲುತ್ತದೆ. ರೇಣುಕಾಚಾರ್ಯರು ರೇವಣ ಸಿದ್ಧರಾಗಿ ಅವಾತರ ತಾಳಿದವರು. ನಮಗೆ ಜಾತಿ, ಪಂಥ, ಭೇದ ಭಾವ ಇರಬಾರದು ಎಂದು ಹೇಳಿದರು.

    ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಿರೂಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರ ಸವಡಿಮಠ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಶಿವನಗೌಡ ಪಾಟೀಲ, ಮುಕ್ತಾರ ಪಠಾಣ, ಮಹಾಂತ ವಕ್ಕುಂದ, ಮಹಾಂತೇಶ ರಣಗಟ್ಟಿಮಠ, ಗಣೇಶ ಮಠಪತಿ ಸೇರಿ ಇತರರಿದ್ದರು.
    ರೇಣುಕಾಚಾರ್ಯರ ಭವ್ಯ ಮೆರವಣಿಗೆ ಕಿಲ್ಲಾ ಕೋಟೆ, ಅಶೋಕ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸಮಾಪ್ತಿಯಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts