More

    ರುದ್ರಭೂಮಿಗೆ ತಡೆಗೋಡೆ ನಿರ್ವಿುಸಿ

    ಕಲಘಟಗಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೆಂಡಿಗೇರಿ ಓಣಿಯ ಜಂಗಮ ಸಮಾಜದ ರುದ್ರಭೂಮಿಗೆ ತಡೆಗೋಡೆ ನಿರ್ವಿುಸಬೇಕು ಎಂದು ತಾಲೂಕು ಜಂಗಮ ಸಮಾಜ ಬಾಂಧವರು, ಜಂಗಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಸಮುದಾಯ ಸಂಘಟನಾ ಅಧಿಕಾರಿ ಎ.ಕೆ. ಚವ್ಹಾಣ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಸಂಘದ ನಗರ ಘಟಕದ ಅಧ್ಯಕ್ಷ ಶಿವಯ್ಯ ತೇಗೂರಮಠ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜಂಗಮ ಸಮಾಜದ ರುದ್ರಭೂಮಿಗೆ ಹಲವು ವರ್ಷಗಳಿಂದ ಸಮರ್ಪಕವಾದ ಗೇಟ್ ವ್ಯವಸ್ಥೆ, ಸುತ್ತ ತಡೆಗೋಡೆ ನಿರ್ಮಾಣ ಮಾಡಿಲ್ಲ. ಇದರಿಂದ ಅಂತ್ಯ ಸಂಸ್ಕಾರಕ್ಕೆ ಬರುವ ಜನರಿಗೆ ತೊಂದರೆ ಉಂಟಾಗುತ್ತಿದೆ. ಪಟ್ಟಣದ ಬಹುತೇಕ ಓಣಿಗಳಿಂದ ಗಟಾರದ ನೀರು ರುದ್ರಭೂಮಿಯ ಒಳಗೆ ಪ್ರವೇಶಸುತ್ತಿದೆ. ಸುತ್ತಲೂ ನೀರು ನಿಂತು ರುದ್ರಭೂಮಿಯಲ್ಲಿ ದುರ್ವಾಸನೆ ಹರಡುತ್ತಿದ್ದು, ಅಂತ್ಯ ಸಂಸ್ಕಾರಕ್ಕೆ ಬರಲು ಕಷ್ಟ ಪಡುವಂತಾಗಿದೆ. ಆದ್ದರಿಂದ ಅಧಿಕಾರಿಗಳು ಕೂಡಲೆ ತಡೆಗೋಡೆ ಹಾಗೂ ಗೇಟ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ನಂದಯ್ಯ ತೇಗೂರಮಠ, ಶಿವಪುತ್ರಯ್ಯ ತೇಗೂರಮಠ, ಎಂ.ಎಸ್. ವಿರಕ್ತಿಮಠ, ಎಂ.ಎಸ್. ಅಮರಗೋಳ ಹಾಗೂ ಜಂಗಮ ಸಮಾಜ ಬಾಂಧವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts