More

    ಮಹನೀಯರಿಗೆ ಧರ್ಮ, ಜಾತಿಗಳ ಚೌಕಟ್ಟು ಸಲ್ಲ

    ಚಿಕ್ಕಮಗಳೂರು: ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ವಾಲ್ಮೀಕಿ ಮುಂತಾದ ಮಹಾನ್ ಪುರುಷರು ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಅವರೆಲ್ಲರೂ ಶೋಷಿತರು, ತುಳಿತಕ್ಕೊಳಗಾದ ಜನರ ಧ್ವನಿಯಾಗಿ ಸಮಾಜದ ಮುನ್ನೆಲೆಗೆ ತರಲು ಶ್ರಮಿಸಿದವರು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.

    ನಗರದ ಎಐಟಿ ಸರ್ಕಲ್ ಸಮೀಪ ವಾಲ್ಮೀಕಿ ಭವನದ ಸುತ್ತಲೂ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಂಪೌಂಡ್ ಮತ್ತಿತರ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸರ್ವಜನರ ಉನ್ನತಿಗಾಗಿ ಮಹಾನ್ ಪುರುಷರ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದರು.
    ವಾಲ್ಮೀಕಿ ಸಮುದಾಯ ಭವನ ಎಲ್ಲ ವರ್ಗದ ಬಡವರಿಗೆ ಕಡಿಮೆ ದರದಲ್ಲಿ ದೊರೆಯುವಂತಾಗಬೇಕು. ಆಗ ಆರ್ಥಿಕ ಸಮಾನತೆ ಕಾಣಲು ಸಾಧ್ಯ ಎಂದ ಅವರು, ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 63 ಸಾವಿರ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಸುಮಾರು 60 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 79 ಸಾವಿರ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, 20 ಕೋಟಿ ರೂ. ಅನುದಾನ ವ್ಯಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
    ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯ ಗುರುಮಲ್ಲಪ್ಪ, ಜಿಲ್ಲಾ ವಾಲ್ಮಿಕಿ ಯುವಕ ಸಂಘದ ಅಧ್ಯಕ್ಷ ಜಗದೀಶ್ ಕೋಟೆ, ಬಿಎಸ್‌ಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ, ಪ್ರಮುಖರಾದ ಹಿರೇಮಗಳೂರು ರಾಮಚಂದ್ರ, ಮಂಜೇಗೌಡ, ಶ್ರೀನಿವಾಸ್, ಗುಣವತಿ, ಐಟಿಡಿಪಿ ಅಧಿಕಾರಿ ಭಾಗಿರಥಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts