More

    ರಿಪ್ಪನ್​ಪೇಟೆಗೆ ವೈದ್ಯರ ನಿಯೋಜಿಸಿದ್ದಕ್ಕೆ ಬೇಸರ

    ಹೊಸನಗರ: ತಾಲೂಕಿನ ಸೊನಲೆ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯ ವೈದ್ಯರನ್ನು ರಿಪ್ಪನ್​ಪೇಟೆಗೆ ನಿಯೋಜಿಸಿರುವುದನ್ನು ಖಂಡಿಸಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.

    ವರ್ಷಗಳಿಂದಲೂ ಸೊನಲೆ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಾಗಿ ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿರುವ ಡಾ. ಮಾರುತಿ ಅವರನ್ನು ಏಕಾಏಕಿ ರಿಪ್ಪನ್​ಪೇಟೆಗೆ ನಿಯೋಜಿಸಲಾಗಿದೆ. ಇದರಿಂದಾಗಿ ಇಲ್ಲಿನ ಜನರು ವೈದ್ಯರಿಲ್ಲದೆ ಪರದಾಡುವಂತಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ತಾಲೂಕು ವೈದ್ಯಾಧಿಕಾರಿಗಳ ಮೂಲಕ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್ ಮಾತನಾಡಿ, ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಿ ಗ್ರಾಮೀಣ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿರುವ ವೈದ್ಯರನ್ನು ಬೇರೆಡೆ ನಿಯೋಜಿಸುವ ಕ್ರಮ ಸರಿ ಅಲ್ಲ. ಇದರಿಂದಾಗಿ ಇಲ್ಲಿಯ ಆಸ್ಪತ್ರೆ ಅನಾಥವಾಗಲಿದೆ. ಹಾಗಾಗಿ ಈಗಾಗಲೇ ಮಾಡಿರುವ ನಿಯೋಜನೆಯ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

    ತಾಪಂ ಸದಸ್ಯ ವೀರೇಶ್ ಆಲವಳ್ಳಿ ಮಾತನಾಡಿ, ಐದು ದಿನಗಳ ನಿಯೋಜನೆ ಎನ್ನುವುದಾಗಿ ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಕುರಿತು ಯಾವುದೇ ಖಚಿತತೆ ಇಲ್ಲದಿರುವುದರಿಂದ ಇಂದು ಜನ ಪ್ರತಿಭಟನೆಗೆ ಮುಂದಾಗಿದ್ದಾರೆ. ಗುರುವಾರದವರೆಗೆ ಕಾದು ಒಂದೊಮ್ಮೆ ನಂತರವೂ ವೈದ್ಯರ ನಿಯೋಜನೆ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು. ನಂತರ ಸ್ಥಳಕ್ಕೆ ಆಮಿಸಿದ ತಾಲೂಕು ವೈದ್ಯಾಧಿಕಾರಿ ಸುರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷೆ ಸುಮಿತ್ರಾ, ಪ್ರಮುಖರಾದ ವಾಲೆಮನೆ ನಾಗೇಶ್, ಸುರೇಶ್, ಚನ್ನಪ್ಪ ಗೌಡ, ಮಹೇಶ್ ಗೌಡ, ಡಿ.ರವಿ, ಸತೀಶ್, ಗಂಗಾಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts