More

    ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಕಾಪಾಡಲು ಹೊಸ ಕ್ರಮ

    ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೂತನ ಕ್ರಮಕ್ಕೆ ಮುಂದಾಗಿದ್ದು, ಅದರಂತೆ ಪ್ರತಿ ಕಾಮಗಾರಿಯನ್ನು ನಿವೃತ್ತ ಸರ್ಕಾರಿ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.
    ದೇಶದಲ್ಲಿ 1 ಸಾವಿರ ಕಿ.ಮೀ.ಗೂ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವಾಗುತ್ತಿದೆ. ಅದರ ಜತೆಗೆ ಈಗಾಗಲೆ ನಿರ್ಮಾಣಗೊಂಡಿರುವ ಹೆದ್ದಾರಿಗಳ ನಿರ್ವಹಣೆಯನ್ನು ಮಾಡಲಾಗುತ್ತಿದೆ. ನಿರ್ಮಾಣಗೊಳ್ಳುತ್ತಿರುವ ಮತ್ತು ನಿರ್ಮಾಣಗೊಂಡಿರುವ ಹೆದ್ದಾರಿಗಳ ಗುಣಮಟ್ಟ ಕಾಪಾಡುವ ಸಲುವಾಗಿ ಸ್ವತಂತ್ರ್ಯ ವ್ಯಕ್ತಿಗಳಿಂದ ಕಾಮಗಾರಿ ಪರಿಶೀಲನೆ ನಡೆಸಲಾಗುತ್ತದೆ. ಅದಕ್ಕಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರನ್ನು ನೇಮಕ ಮಾಡಲಾಗುತ್ತದೆ.
    51 ಯೋಜನೆಗಳ ಮೇಲೆ ನಿಗಾ:
    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿರುವಂತೆ ಮೊದಲಿಗೆ 51 ಯೋಜನೆಗಳ ಗುಣಮಟ್ಟ ಪರಿಶೀಲಿಸಲು ನಿರ್ಧರಿಸಲಾಗಿದೆ. ಪ್ರಾಧಿಕಾರ ನೇಮಿಸುವ ನಿವೃತ್ತ ಅಧಿಕಾರಿಗಳ ತಂಡ ಆ ಯೋಜನೆಗಳ ಕಾಮಗಾರಿಯ ಮೇಲೆ ನಿಗಾವಹಿಸಬೇಕಿದೆ. ಅವರ ಜತೆಗೆ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
    ಮೂರು ಹಂತದ ಪರಿಶೀಲನೆ:
    ಗುಣಮಟ್ಟ ಪರಿಶೀಲನೆ ವೇಳೆ ಎನ್‌ಎಚ್‌ಎಐ ಗುತ್ತಿಗೆ ನೀಡುವ ಸಂದರ್ಭದಲ್ಲಿ ಉಲ್ಲೇಖಿಸಿದ ಅಂಶಗಳನ್ನು ಗುತ್ತಿಗೆದಾರರು ಪರಿಗಣಿಸಿ ಕಾಮಗಾರಿ ನಡೆಸುತ್ತಿದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕಿದೆ. ಮೂರು ಹಂತದಲ್ಲಿ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಮೊದಲಿಗೆ ಯೋಜನೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ, ಎರಡನೇ ಹಂತದಲ್ಲಿ ಸ್ಥಳ ಪರಿಶೀಲನೆ ಮಾಡಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆಯೇ? ಎಂಬ ಬಗ್ಗೆ ದೃಢಪಡಿಸಿಕೊಳ್ಳಬೇಕಿದೆ, ಮೂರನೇ ಹಂತದಲ್ಲಿ ಪದೇ ಪದೇ ಗುಣಮಟ್ಟ ಪರಿಶೀಲನೆ ನಡೆಸುವುದು, ಒಂದು ವೇಳೆ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ, ಗುತ್ತಿಗೆ ನಿಯಮ ಉಲ್ಲಂಸಿದ್ದರೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವೂ ಪರಿಶೀಲನಾ ತಂಡಕ್ಕಿರಲಿದೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts