More

    ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ: ಕಲಾ ಪ್ರಾಕಾರಗಳು ಮುಂದಿನ ಪೀಳಿಗೆಗೆ ತಲುಪಲಿ: ಶಾಸಕ ಹರತಾಳು ಹಾಲಪ್ಪ

    ಸಾಗರ: ಕಲೆಯ ವಿವಿಧ ಪ್ರಾಕಾರಗಳು ಪೀಳಿಗೆಯಿಂದ ಪೀಳಿಗೆಗೆ ತಲುಪಬೇಕು. ಆ ಕೆಲಸವನ್ನು ಯುವ ಜನರು ಅತ್ಯಂತ ಜವಾಬ್ದಾರಿತವಾಗಿ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ಇಂತಹ ಉತ್ಸವಗಳೇ ಸಾಕ್ಷಿ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ನಗರದಲ್ಲಿ ಭಾನುವಾರ ನಾಟ್ಯ ತರಂಗ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 11ನೇ ವರ್ಷದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಏಳು ದಿನಗಳ ಕಾಲ ನಡೆಯುವ ಸಂಸ್ಕೃತಿ ಸಪ್ತಾಹದಲ್ಲಿ ದೇಶ, ವಿದೇಶದ ಕಲಾವಿದರು ಪಾಲ್ಗೊಳ್ಳುವ ಮೂಲಕ ಸಂಸ್ಕೃತಿ ವಿನಿಮಯವಾಗುತ್ತದೆ. ನಾಟ್ಯತರಂಗ ಸಂಸ್ಥೆ ಹನ್ನೊಂದು ವರ್ಷಗಳಿಂದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ ನಡೆಸುವ ಮೂಲಕ ಹೊರಗಿನ ಕಲಾವಿದರ ಕಲೆಯನ್ನು ನಮ್ಮೂರಿನ ಜನರು ಆಸ್ವಾದಿಸುವಂತೆ ಮಾಡುವ ಶ್ರೇಷ್ಠ ಕೆಲಸ ಮಾಡುತ್ತಿದ್ದಾರೆ ಎಂದರು.
    ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಂ.ಆರ್.ವಿ.ಪ್ರಸಾದ್ ಮಾತನಾಡಿ, ಬೆಂಗಳೂರಿನಂತಹ ಪ್ರದೇಶಗಳಲ್ಲಿ ನೃತ್ಯ ಸಂಗೀತದಂತಹ ಕಲೆಗಳಿಗೆ ಅಷ್ಟು ಮಾನ್ಯತೆ ಇಲ್ಲ. ಗ್ರಾಮೀಣ ಭಾಗದಲ್ಲಿ ಕಲೆಯನ್ನು ಪೋಷಿಸುವ ಕೆಲಸ ಲಾಗಾಯ್ತಿನಿಂದ ಮಾಡಿಕೊಂಡು ಬರಲಾಗುತ್ತಿದೆ. ಸಾಗರ ಸಂಸ್ಕೃತಿಯ ಕೇಂದ್ರ ಬಿಂದುವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts