More

    ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ : ಬೆಂಗಳೂರಿನ ನವೀನ್‌ಜಾನ್ ಐತಿಹಾಸಿಕ ಸಾಧನೆ

    ವಿಜಯಪುರ: ಮುಂಬೈಯಲ್ಲಿ ಭಾರತೀಯ ಸೈಕ್ಲಿಂಗ್ ೆಡರೇಶನ್ ಸಹಯೋಗದೊಂದಿಗೆ ನಡೆಯುತ್ತಿರುವ 25ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಮೊದಲ ದಿನದ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಒಂದು ಚಿನ್ನ, ಮೂರು ಬೆಳ್ಳಿ ಹಾಗೂ ಶನಿವಾರ 2 ಬೆಳ್ಳಿ, 2 ಕಂಚಿನ ಪದಕ ಪಡೆದಿದೆ.

    * ಬೆಂಗಳೂರಿನ ನವೀನ್‌ಜಾನ್‌ಗೆ ಚಿನ್ನ

    ಶುಕ್ರವಾರ ನಡೆದ ಮೊದಲ ದಿನದ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಒಂದು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ಪಡೆದುಕೊಂಡಿದೆ. ಬೆಂಗಳೂರಿನ ನವೀನ್‌ಜಾನ್ ಪುರುಷರ ವಿಭಾಗದಲ್ಲಿ 40 ಕಿ.ಮೀ. ವೈಯಕ್ತಿಯ ಟೈಂ ಟ್ರಯಲ್‌ನಲ್ಲಿ (53 ನಿ,35.533 ಸೆ.) ನಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು 2014ರಿಂದ ಈವರೆಗೆ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪಡೆದ 6ನೇ ಚಿನ್ನದ ಪದಕ ಇದಾಗಿದ್ದು, ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಜಮಖಂಡಿಯ ಚೈತ್ರಾ ಬೋರ್ಜಿ, 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಜಮಖಂಡಿಯ ಹುನ್ನೂರಿನ ಅನುಪಮಾ ಗುಳೇದ, ಬಾಲಕರ ವಿಭಾಗದಲ್ಲಿ ವಿಜಯಪುರದ ಕ್ರೀಡಾ ಹಾಸ್ಟೆಲ್‌ನ ಸುಜಲ್ ಜಾಧವ ಬೆಳ್ಳಿ ಪದಕ ಪಡೆದಿದ್ದಾರೆ. ಶನಿವಾರ ನಡೆದ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 20 ಕಿ.ಮೀ. ಟೀಮ್ ಟೈಂ ಟ್ರಯಲ್‌ನಲ್ಲಿ ಚೈತ್ರಾ ಬೋರ್ಜಿ, ಕೀರ್ತಿ ರಂಗಸ್ವಾಮಿ, ಭಾಗ್ಯಶ್ರೀ ಮಠಪತಿ ಮತ್ತು ನಿವೇದಿತಾ ಕೊಕ್ಕನವರ ಅವರನ್ನೊಳಗೊಂಡ ತಂಡ (33 ನಿ. 07.264 ಸೆ.) ಗುರಿ ತಲುಪಿ ಬೆಳ್ಳಿಯ ಪದಕ ಪಡೆದಿದೆ. 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿಜಯಪುರದ ಅಕ್ಷತಾ ಭೂತನಾಳ 20 ಕಿ.ಮೀ ಸಾಮೂಹಿಕ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ. ಪುರುಷರ ವಿಭಾಗದಲ್ಲಿ 40 ಕಿ. ಮೀ. ಟೀಮ್ ಟೈಂ ಟ್ರಯಲ್‌ನಲ್ಲಿ ನವೀನ ಜಾನ್, ನವೀನ್ ರಾಜ್, ವಿಶ್ವನಾಥ ಗಡಾದ ಮತ್ತು ಯಲಗೂರಪ್ಪ ಗಡ್ಡಿ ಅವರನ್ನೊಳಗೊಂಡ ತಂಡ (52 ನಿ. 35.464 ಸೆ.)ನಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದಿದೆ. ಮಹಿಳೆಯರ ವಿಭಾಗದಲ್ಲಿ 30 ಕಿ. ಮೀ. ಟೀಮ್ ಟೈಂ ಟ್ರಯಲ್‌ನಲ್ಲಿ ಸಾವಿತ್ರಿ ಹೆಬ್ಬಾಳಟ್ಟಿ, ಸೌಮ್ಯಾ ಅಂತಾಪುರ, ಕಾವೇರಿ ಮುರನಾಳ ಮತ್ತು ದಾನಮ್ಮ ಚಿಚಖಂಡಿ ಅವರನ್ನೊಳಗೊಂಡ ರಾಜ್ಯ ತಂಡ (47 ನಿ. 46.302 ಸೆ.) ಗುರಿ ತಲುಪಿ ಕಂಚಿನ ಪದಕ ಪಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts