More

    ರಾಷ್ಟ್ರೀಯ ಹೆದ್ದಾರಿ ಬಳಿ ಪ್ಲಾಂಟೇಶನ್

    ಹುಬ್ಬಳ್ಳಿ: ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಆಜಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ 75 ಸ್ಥಳಗಳಲ್ಲಿ ನೆಡುತೋಪು ಅಭಿಯಾನ ಹಮ್ಮಿಕೊಂಡಿದ್ದು, ಭಾನುವಾರ ಇಲ್ಲಿಯ ಗಬ್ಬೂರ ಬಳಿ ಇದಕ್ಕೆ ಚಾಲನೆ ನೀಡಲಾಯಿತು.

    ದೇಶಾದ್ಯಂತ ಹೆದ್ದಾರಿಗಳಲ್ಲಿ ಒಂದೇ ದಿನದಲ್ಲಿ ಈ ಅಭಿಯಾನ ಆಯೋಜಿಸಲಾಗುತ್ತಿದ್ದು, ಭಾನುವಾರ ಬೆಳಗ್ಗೆ ಧಾರವಾಡದ ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಘಟಕವು ಎಲ್ಲ ನಿಮಾಣ ತಂಡಗಳ ಸಮನ್ವಯದೊಂದಿಗೆ ಸಾವಿರ ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ ನೀಡಿತು.

    ಗಬ್ಬೂರಿನ ಕೊ್ಲೕವರ್ ಲೀಫ್ ನೆಡುತೋಪು ಹೆಸರಿನ ಈ ಅಭಿಯಾನದಲ್ಲಿ ಸಾವಿರ ಗಿಡಗಳನ್ನು ನೆಡಲಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

    ಕೇಂದ್ರ ಸಚಿವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಪಾಟೀಲ, ಧಾರವಾಡ ಎನ್​ಎಚ್​ಎಐ ಉಪ ವ್ಯವಸ್ಥಾಪಕ ಯಶವಂತ, ಇಂಜಿನಿಯರ್​ಗಳಾದ ಅಜಿತ ಬೋಗಾರ, ಕಿರಣ ಗುಬ್ಬಣ್ಣವರ, ಸಚಿನ್ ಹೂಲಿ, ಪ್ರೊಜೆಕ್ಟ್ ಮ್ಯಾನೇಜರ್ ವಿಠ್ಠಲ ಪಡಸಲಗಿ, ರಾಜೇಂದ್ರ ಪ್ರಸಾದ, ಇತರರು ಪಾಲ್ಗೊಂಡಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts