More

    ರಾಷ್ಟ್ರೀಯ ಮೌಲ್ಯದ ರಾಜಕಾರಣ ಮಾಡಲಿ

    ಶಿವಮೊಗ್ಗ: ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮೌಲ್ಯದ ರಾಜಕಾರಣ ಮಾಡದ ಕಾರಣ ಬೆಂಗಳೂರು ಹೊತ್ತಿ ಉರಿಯುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಅಧೋಗತಿಗೆ ಇಳಿಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಅತ್ಯಂತ ಹೀನ ರಾಜಕಾರಣ ಮಾಡುತ್ತಿದ್ದಾರೆ. ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್​ಡಿಪಿಐ ಧ್ವಜ ಹಾರಿಸಿರುವುದು, ಬೆಂಗಳೂರಿನಲ್ಲಿ ಮತಾಂಧ ಗಲಭೆ ಕುರಿತು ಇದುವರೆಗೂ ಇಬ್ಬರು ನಾಯಕರು ತಮ್ಮ ನಿಲುವು ಸ್ಪಷ್ಟಪಡಿಸದಿರುವುದು ದುರಾದೃಷ್ಟಕರ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ನಡೆಯುತ್ತಿರುವ ಮತಾಂಧ ಗಲಭೆಗಳ ವಿಚಾರದಲ್ಲಿ ಕಾಂಗ್ರೆಸ್ ನಡೆ ಎಲ್ಲರಿಗೂ ನೋವು ತರಿಸಿದೆ. ಕಾಂಗ್ರೆಸ್ ಮೌಲ್ಯವರ್ಧಿತ ರಾಜಕಾರಣ ಕೈಬಿಟ್ಟಿರುವ ಪರಿಣಾಮ ಬೆಂಗಳೂರು ಹೊತ್ತಿ ಉರಿಯಲು ಕಾರಣವಾಗಿದೆ. ಮತಾಂಧರ ಮೇಲೆ ಡಿ.ಕೆ.ಶಿವಕುಮಾರ್ ಅವರಿಗೆ ಅನುಕಂಪವಿದೆ. ಆದರೆ ಶಂಕರಾಚಾರ್ಯರ ಪ್ರತಿಮೆ ಮೇಲೆ ಧ್ವಜ ಹಾಕಿದ್ದವರು, ಬೆಂಗಳೂರು ಹೊತ್ತಿ ಉರಿಯುತ್ತಿರುವುದಕ್ಕೆ ಕಾರಣರಾದವರು ಹಾಗೂ ಗಲಭೆಕೋರರ ದಾಳಿಗೆ ಮನೆ ಧ್ವಂಸ ಆಗಿರುವ ತಮ್ಮದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.

    ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ದೂರು ನೀಡಲ್ಲವೆಂದು ಹೇಳಿದ್ದಾರೆ. ಇದು ಗಲಭೆಕೋರರಿಗೆ ಮತ್ತಷ್ಟು ಬೆಂಬಲ ಸೂಚಿಸಿದಂತಾಗುತ್ತದೆ. ಕಾಂಗ್ರೆಸ್ ಸಹ ದೂರು ನೀಡಲು ಮುಂದಾಗಿಲ್ಲ. ಇಂತಹ ನೀಚ ರಾಜಕಾರಣ ಬಿಟ್ಟು ರಾಷ್ಟ್ರಿಯ ಮೌಲ್ಯದ ರಾಜಕಾರಣ ಮಾಡಬೇಕೆಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts