More

    ರಾಷ್ಟ್ರಕೂಟರ ಕೋಟೆ ಅಭಿವೃದ್ಧಿಗೆ ಒತ್ತು

    ಮಳಖೇಡ (ಕಲಬುರಗಿ): ಕೋಟೆ ಪುನಃಶ್ಚೇತನಗೊಂಡು ಹಂಪಿ ಮಾದರಿಯಲ್ಲಿ ಇಲ್ಲಿನ ರಾಷ್ಟ್ರಕೂಟರ ಕೋಟೆ ಅಭಿವೃದ್ಧಿಯಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

    ರಾಷ್ಟ್ರಕೂಟರ ಕೋಟೆಗೆ ಭಾನುವಾರ ಭೇಟಿ ನೀಡಿ ಕೋಟೆ ಆಂಜನೇಯನ ದರ್ಶನ ಪಡೆದ ಅವರು, ರಾಷ್ಟ್ರಕೂಟರ, ಕವಿರಾಜ ಮಾರ್ಗ ನೀಡಿದ ಶ್ರೀ ವಿಜಯನ ಹೆಸರಿಲ್ಲದ ಸಾಹಿತ್ಯ ಅಪೂರ್ಣ. ಈ ಮಣ್ಣಿನಲ್ಲಿ ಸಾಹಿತ್ಯ, ಧರ್ಮ, ಅಧ್ಯಾತ್ಮ, ಸಂಸ್ಕೃತಿ ಜತೆಗೆ ಕನ್ನಡದ ಅಸ್ಮಿತೆ ಇದೆ. ಮಳಖೇಡಕ್ಕೆ ಮಾನ್ಯಖೇಟ ಎಂದು ಮರು ನಾಮಕರಣ ಮಾಡಲು ಸಂಪೂರ್ಣ ಸಹಕಾರ ಇದೆ. ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ತಾವು ಕಾರ್ಯಪ್ರವೃತರಾಗುವುದಲ್ಲದೇ, ಇಲ್ಲಿನ ಇತಿಹಾಸ, ಸಾಹಿತಿಗಳ, ಕಲಾವಿದರ ಬಗ್ಗೆ ಪರಿಚಯಿಸುವಂತಹ ಕಾರ್ಯ ಯೋಜನೆಯನ್ನು ಕಸಾಪದಿಂದ ಹಾಕಿಕೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts