More

    ರಾಯಚೋಟಿ ವೀರಭದ್ರೇಶ್ವರ ರಥೋತ್ಸವ, ಭಕ್ತಿ ಸಮರ್ಪಿಸಿದ ವಿವಿಧ ರಾಜ್ಯಗಳ ಭಕ್ತರು

    ಹುಬ್ಬಳ್ಳಿ: ಜೈ ವೀರ, ಜೈಜೈ ವೀರಾ… ಶ್ರೀಭದ್ರಕಾಳಿ ಮಾತಾಕೀ ಜೈ… ಶ್ರೀರಾಯಚೋಟಿ ವೀರಭದ್ರೇಶ್ವರ ಮಹಾರಾಜಕೀ ಜೈ… ಜಯಘೊಷಗಳು ಮೊಳಗುತ್ತಿದ್ದಂತೆ ಭಕ್ತಗಣ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

    ಆಂಧ್ರಪ್ರದೇಶದ ರಾಯಚೋಟಿ ಕ್ಷೇತ್ರದಲ್ಲಿ ಬುಧವಾರ ಜರುಗಿದ ಶ್ರೀವೀರಭದ್ರಸ್ವಾಮಿ ಮಹಾರಥೋತ್ಸವದಲ್ಲಿ ಕಂಡು ಬಂದ ದೃಶ್ಯವಿದು. ಶ್ರೀವೀರಭದ್ರ ದೇವರು ಹಾಗೂ ಮಾತೆ ಭದ್ರಕಾಳಿ ಅಮ್ಮನವರಿಗೆ ಭಕ್ತರು ಕೈಮುಗಿದು ನಮಿಸಿದರು.

    ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳಗಾವಿ ಜಿಲ್ಲೆ ಸಂಪಗಾಂವ ಕಟಾಪುರಿ ಹಿರೇಮಠದ ಶ್ರೀಚೆನ್ನವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಂದ್ಯಾಲ ಬ್ರಹ್ಮಶ್ರೀ ನಂದುಲಮಠದ ಶ್ರೀಶಶಿಭೂಷಣ ಸಿದ್ಧಾಂತಿ ಸ್ವಾಮೀಜಿ ನೇತೃತ್ವದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ನಡೆದವು.

    ದೇವಾಲಯದ ವೈದಿಕರ ಬಳಗ ವೇದೋಕ್ತಮಂತ್ರಗಳ ಪಠಣದ ಮಧ್ಯೆ ಅಲಂಕೃತ ರಥದ ಪೂಜಾ ಕೈಂಕರ್ಯಗಳು ನೆರವೇರಿದವು. ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮುಂಭಾಗದಲ್ಲಿ ಕುಂಬಳಕಾಯಿ ಮತ್ತು ತೆಂಗಿನಕಾಯಿ ಒಡೆದು 2023ನೇ ವರ್ಷದ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.

    ರಥ ಸಂಚರಿಸುತ್ತಿದ್ದಂತೆ ಭಕ್ತರು ತಮ್ಮ ಮನೆಯ ಮಹಡಿಗಳ ಮೇಲಿಂದ ಪುಷ್ಪವೃಷ್ಟಿಗೈದು ಭಕ್ತಿ ಸಮರ್ಪಿಸಿದರು.

    ರಾಯಚೋಟಿ ನಗರ ಸಭೆ ಉಪಾಧ್ಯಕ್ಷ ದಶರಥರಾಮಿ ರೆಡ್ಡಿ, ಶ್ರೀವೀರಭದ್ರೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷೆ ಪೋಲಂರೆಡ್ಡಿ ವಿಜಯಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಡಿ.ವಿ. ರಮಣರೆಡ್ಡಿ, ಧರ್ಮದರ್ಶಿ ಸಿ.ಎಂ. ಶಿವಶರಣ ಕಲಬುರ್ಗಿ, ಹುಬ್ಬಳ್ಳಿಯ ರಾಯಚೋಟಿ ಶ್ರೀವೀರಭದ್ರೇಶ್ವರಸ್ವಾಮಿ ರಥೋತ್ಸವ ಸೇವಾ ಸಮಿತಿಯ ಗಿರೀಶಕುಮಾರ ಬುಡರಕಟ್ಟಿಮಠ, ಪಿ.ಎಂ. ಚಿಕ್ಕಮಠ, ಶಂಕರ ಕುರ್ತಕೋಟಿ, ಪ್ರಕಾಶ ಅಂದಾನಿಮಠ, ರಾಚಯ್ಯ ಮಠಪತಿ, ರಮೇಶಕುಮಾರ ಬುಡರಕಟ್ಟಿಮಠ, ಕಿರಣ ಅಂದಾನಿಮಠ, ಗೋವಾದ ಶಂಕರ ಹಿರೇಮಠ, ಉದಯ ಅಂದಾನಿಮಠ ಮತ್ತು ಧಾರವಾಡದ ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.

    ನಂತರ ನಡೆದ ಸಿಡಿಮದ್ದು ಪ್ರದರ್ಶನ ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts