More

    ರಾಮನ ಸೇವೆಗೆ ಸನ್ನದ್ಧರಾಗಿ

    ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ಎಲ್ಲರೂ ಮರ್ಯಾದಾ ಪುರುಷೋತ್ತಮನಾದ ರಾಮನ ಸೇವೆಗೆ ಸನ್ನದ್ಧರಾಗಬೇಕು. ದೊಡ್ಡವರು ಈ ಸೇವೆಯಲ್ಲಿ ತೊಡಗಿಕೊಳ್ಳದಿದ್ದರೆ ಚಿಕ್ಕವರೆನಿಸಿಕೊಳ್ಳುತ್ತಾರೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

    ತಾಲೂಕಿನ ಭಾನ್ಕುಳಿಮಠದ ಗೋಸ್ವರ್ಗದಲ್ಲಿ ರಾಮ ಮಂದಿರ ನಿಧಿ ಸಮರ್ಪಣೆ ಅಭಿಯಾನದ ಘಟಕದವರ ಸಭೆಯಲ್ಲಿ ಆಶೀರ್ವಚನ ನೀಡಿದರು. ರಾಮನನ್ನು ಮರೆತವನು ಭಾರತೀಯನಾಗಲಾರ. ರಾಮಾಯಣ ಇಲ್ಲದಿದ್ದರೆ ಭಾರತವಿಲ್ಲ. ರಾಮ- ರಾಮಾಯಣ ನಮ್ಮ ಸಂಸ್ಕೃತಿಯ ಅಡಿಪಾಯ ಎಂದರು.

    ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲೆಂದು ಶ್ರೀರಾಮ ಹೇಳಿದ. ಹಾಗೆ ಹೇಳಿದ ಶ್ರೀರಾಮನ ಜನ್ಮಭೂಮಿಯೇ ವಿವಶಿತವಾಯಿತು. ಅಲ್ಲಿದ್ದ ಭವ್ಯವಾದ ಪ್ರಸಿದ್ಧ ರಾಮಮಂದಿರವೇ ವಿಧ್ವಂಸವಾಯಿತು. ಐದು ಶತಮಾನಗಳ ಕಾಲ ಆಕ್ರಮಣಕ್ಕೆ ತುತ್ತಾಯಿತು. ಈಗ ಕಾಲ ಬದಲಾಗಿದೆ. ರಾಮಮಂದಿರ ನಿರ್ವಣವಾಗುತ್ತಿದೆ. ನ್ಯಾಯಾಲಯದ ತೀರ್ಪು ದೊರೆತಿದೆ. ಸರ್ಕಾರದ ಬೆಂಬಲ ಇದೆ. ಹೀಗಾಗಿ ರಾಮನ ಜನ್ಮ ಭೂಮಿಯಲ್ಲಿ ಪವಿತ್ರವಾದ ಮಂದಿರ ಮೂಡಿ ಬರುತ್ತಿದೆ. ಅಯೋಧ್ಯೆಯ ರಾಮಮಂದಿರ ನಿರ್ವಣದಲ್ಲಿ ನಮ್ಮ ಪಾತ್ರ ಏನು ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.

    ಅಭಿಯಾನದ ಪ್ರಮುಖರಾದ ವಿನಾಯಕ ಮಹಾಲೆ, ಗುರುರಾಜ ಶಾನಭಾಗ, ಸುಮನಾ ಕಾಮತ್, ಆರ್.ಎನ್.ಹಳಕಾರ, ಮಂಜುನಾಥ ನಾಯ್ಕ, ವೀಣಾ ಶೇಟ್, ಜ್ಯೋತಿ ಹೆಗಡೆ, ಉಮಾ ನಾಯಕ, ಮಹಾಬಲೇಶ್ವರ ನಾಯ್ಕ, ದಿನೇಶ ಪಟೇಲ, ಸತೀಶ ಕಾಮತ್ ಮತ್ತಿತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts