More

    ರಾಣೆಬೆನ್ನೂರಲ್ಲಿ ಗಣಪತಿ ಮೆರವಣಿಗೆ ವೇಳೆ ಚೂರಿ ಇರಿತ, ಹಿಂದು ಕಾರ್ಯಕರ್ತರ ಪ್ರತಿಭಟನೆ

    ರಾಣೆಬೆನ್ನೂರ: ಗಣಪತಿ ಮೆರವಣಿಗೆ ವೇಳೆ ಹಿಂದು ಯುವಕರಿಗೆ ಚೂರಿ ಇರಿದಿದ್ದಾರೆ ಎಂದು ಆರೋಪಿಸಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ರಾತ್ರಿ ನಗರದ ದುರ್ಗಾ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು.

    ನಗರದ ಕಾಕಿಗಲ್ಲಿಯ ಗಣಪತಿ ಮೂರ್ತಿಯನ್ನು ಮಂಗಳವಾರ ವಿಸರ್ಜನೆ ಮಾಡುವ ಸಲುವಾಗಿ ಮೆರವಣಿಗೆ ಮಾಡಲಾಗುತ್ತಿತ್ತು. ದುರ್ಗಾ ಸರ್ಕಲ್​ಗೆ ಮೆರವಣಿಗೆ ಬಂದಾಗ, ಇಬ್ಬರು ಹಿಂದು ಯುವಕರ ಮೇಲೆ ಚೂರಿ ಇರಿದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು ಏಕಾಏಕಿ ದುರ್ಗಾ ಸರ್ಕಲ್​ನ ಮಸೀದಿ ಎದುರು ಧರಣಿ ನಡೆಸಿದರು.

    ಚೂರಿ ಇರಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅಲ್ಲಿಯವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದ ಕಾರ್ಯಕರ್ತರು ಹಿಂದುಪರ ಘೊಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಬಂದ ಎಸ್ಪಿ ಹನುಮಂತರಾಯ, ಘಟನೆ ಕುರಿತು ದೂರು ನೀಡಿ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಆದರೆ, ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಈಗಲೇ ಅವರನ್ನು ಬಂಧಿಸಬೇಕು. ಅಲ್ಲಿಯವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ವಣವಾಯಿತು. ನಂತರ ಪೊಲೀಸರು ಲಾಠಿ ತೋರಿಸಿ ಜನರನ್ನು ಚದುರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts