More

    ರಾಜ್ಯ ಸರ್ಕಾರ ನಿದ್ದೆಯಲ್ಲಿದೆ

    ಹಗರೆ: ಮಳೆಯಿಂದ ಜನ ಗೋಳಿಡುತ್ತಿದ್ದು ಹೇಳೋರು, ಕೇಳೋರು ಇಲ್ಲದಂತಾಗಿದೆ. ರಾಜ್ಯ ಸರ್ಕಾರ ನಿದ್ದೆಯಲ್ಲೇ ಕಾಲ ಕಳೆಯುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

    ಹಗರೆಯಲ್ಲಿ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಗೋದಾಮು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿಗೆ ಕೃಷಿ ಪತ್ತಿನ ಬ್ಯಾಂಕ್ ಮಂಜೂರು ಮಾಡಲು ತೀರ್ಮಾನಿಸಲಾಗಿದೆ.ಬ್ಯಾಂಕ್ ಆರಂಭವಾದರೆ ಮುಂದಿನ ದಿನಗಳಲ್ಲಿ ರೈತರಿಗೆ ಉಪಯೋಗವಾಗಲಿದೆ ಎಂದರು.

    ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪ್ರಜ್ವಲ್ ರೇವಣ್ಣ ಸಹಕಾರದಿಂದ ಇಂದು 570 ಕೋಟಿ ರೂ. ವೆಚ್ಚದ ನಾಲ್ಕು ಪಥದ ರಸ್ತೆಯಾಗುತ್ತಿದ್ದು ಟೆಂಡರ್ ಆಗಿದೆ. ಇನ್ನೆರಡು ತಿಂಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ ಎಂದರು.

    ಇದುವರೆಗೂ ಕುಮಾರಸ್ವಾಮಿಯವರನ್ನು ಹೊರತುಪಡಿಸಿ ಯಾರೂ ರೈತರ ಸಾಲ ಮನ್ನಾ ಮಾಡಿಲ್ಲ. ಹಾಸನ ಜಿಲ್ಲೆಯಲ್ಲಿ 520 ಕೊಟಿ ರೂ., ರಾಜ್ಯದಲ್ಲಿ 2500 ಕೋಟಿ ರೂ. ಸಾಲ ಮನ್ನಾ ಮಾಡಿದ್ದೀವಿ. ಹಾಸನದಿಂದ ಬೇಲೂರು – ಚಿಕ್ಕಮಗಳೂರು ರೈಲು ಮಾರ್ಗಕ್ಕೆ ಟೆಂಡರ್ ಕರೆಯಲಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts