More

    ರಾಜ್ಯ ಸರ್ಕಾರದ ಭೂಸುರಕ್ಷಾ’ನಿಮ್ಮ ದಾಖಲೆಗಳ ಇ-ಖಜಾನೆ ಡಿಜಟಲೀಕರಣದಿಂದ ರೈತರಿಗೆ ತ್ವರಿತ ದಾಖಲೆ ಸಿಗಲಿದೆ / ಬಿ.ಎಸ್.ಸುರೇಶ್

    ವಿಜಯವಾಣಿ ಸುದ್ದಿಜಾಲ ಕೋಲಾರ
    ನಗರದ ತಹಸೀಲ್ದಾರ್ ಕಚೇರಿಯಲ್ಲಿ ರಾಜ್ಯ ಸರ್ಕಾರದಿಂದ ಆರಂಭಿಸಿರುವ ಭೂಸುರಕ್ಷಾ'ನಿಮ್ಮ ದಾಖಲೆಗಳ ಇ-ಖಜಾನೆ ಕಂದಾಯ, ಭೂ ದಾಖಲೆಗಳ ಗಣಕೀಕರಣಗೊಳಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ ನೀಡಿದರು.

    ಸೋಮವಾರ ನಗರದ ತಾಲ್ಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತರಿಗೆ ಅಗತ್ಯವಾಗಿರುವ ಭೂಮಿಯ ದಾಖಲೆಗಳು ಶಿಥಿಲಗೊಂಡು ಸಕಾಲದಲ್ಲಿ ರೈತರಿಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಈ ತೊಂದರೆ ತಪ್ಪಿಸಲು ಈ ಡಿಜಟಲೀಕರಣ ಅತ್ಯಂತ ಉತ್ತಮ ಮಾರ್ಗ ಎಂದರು.

    ಮುಖ್ಯಮAತ್ರಿಗಳು, ಕಂದಾಯ ಸಚಿವರು ಆಸಕ್ತಿ ವಹಿಸಿ ಈ ಯೋಜನೆಗೆ ಚಾಲನೆ ನೀಡಿದ್ದು, ಅದರಂತೆ ಶಿಥಿಲಾವಸ್ಥೆಯಲ್ಲಿರುವ ಮೂಲ ಮಂಜೂರಾತಿ ದಾಖಲೆಗಳಾದ ದರಖಾಸ್ತುವಹಿ, ಸಾಗುವಳಿ ಚೀಟಿ, ವಿತರಣಾ ವಹಿ, ಐಎಲ್ ಮತ್ತು ಆರ್ ಮತ್ತು ಮೂಲ ಟಿಪ್ಪಣಿ, ಪೈಸಲ್ ಪತ್ರಿಕೆ ಮತ್ತಿತರ ದಾಖಲೆಗಳನ್ನು ಸ್ಕಾö್ಯನ್ ಮಾಡಿ ಆನ್‌ಲೈನ್‌ನಲ್ಲಿ ಅಳವಡಿಸಲಾಗುವುದು ಎಂದರು.

    ಸ್ಕಾö್ಯನ್ ಸಂದರ್ಭದಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಿದ್ದು, ಸ್ಕಾö್ಯನ್ ಮಾಡಿದ ದಾಖಲೆಗಳನ್ನು ಪುಟವಾರು ಮೂಲ ಕಡತ ಮತ್ತು ದಾಖಲೆಗಳೊಂದಿಗೆ ತಾಳೆ ನೋಡಿ ಸಂಬAಧಿಸಿದ ತಹಸೀಲ್ದಾರ್, ವಿಶೇಷ ತಹಸೀಲ್ದಾರ್, ಆರ್‌ಆರ್‌ಟಿ ಶಿರಸ್ತೆದಾರ, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಾಳು ಅಭಿಲೇಖಾಲಯ ವಿಷಯ ನಿರ್ವಾಹಕರು ಜಂಟಿಯಾಗಿ ಸದರಿ ದಾಖಲೆಗಳನ್ನು ದೃಢೀಕರಿಸಬೇಕಾಗುತ್ತದೆ ಎಂದರು.

    ಈ ಯೋಜನೆಯಿಂದಾಗಿ ಅತ್ಯಂತ ತ್ವರಿತವಾಗಿ ಸಾರ್ವಜನಿಕರಿಗೆ ದಾಖಲೆಗಳು ಲಭ್ಯವಾಗುತ್ತವೆ, ದಾಖಲೆಗಳು ಆನ್‌ಲೈನ್ ನಲ್ಲಿ ಇರುವುದರಿಂದ ಕಾಲಾಂತರದಲ್ಲಿ ಹವಾಮಾನ ಇತ್ಯಾತಿ ಕಾರಣಗಳಿಂದ ಶಿಥಿಲಗೊಳ್ಳುವುದರಿಂದ ರಕ್ಷಿಸಬಹುದು, ಸರ್ಕಾರಿ ಕಚೇರಿಗಳಲ್ಲಿ ದಕ್ಷತೆ, ಪಾರದರ್ಶಕತೆ ಹೆಚ್ಚುತ್ತದೆ ಎಂದು ತಿಳಿಸಿದರು.

    ತಹಸೀಲ್ದಾರ್ ಹರ್ಷವರ್ಧನ್ ಮಾತನಾಡಿ, ಕೋಲಾರ ತಾಲ್ಲೂಕಿನಲ್ಲಿ ಒಟ್ಟು ೭ ಹೋಬಳಿಗಳಲ್ಲಿ ೩೬೫ ಗ್ರಾಮಗಳಿದ್ದು, ಈ ಪೈಕಿ ೫೩ ಗ್ರಾಮಗಳ ಹಳೆ ಕೈಬರಹದ ಪಹಣಿ ಸ್ಕಾö್ಯನಿಂಗ್ ಕಾರ್ಯ ಮುಗಿದಿದೆ ಎಂದು ತಿಳಿಸಿದರು.

    ಒಟ್ಟಾರೆ ೧೦೦ ದಿನಗಳಲ್ಲಿ ಸ್ಕಾö್ಯನಿಂಗ್ ಕಾರ್ಯ ಮುಗಿಸಲು ಸೂಚಿಸಿದ್ದು, ಒಟ್ಟು ೧೦ ಲಕ್ಷ ೭೬ ಸಾವಿರದ ಒಂಬೈನೂರು ಪುಟಗಳ ಗಣಕೀಕರಣ ಬಾಕಿ ಇದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಜಿಲ್ಲಾಧಿಕಾರಿ ಅಕ್ರಂಪಾಷಾ, ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಾಳ್ ಮತ್ತಿತರರಿದ್ದರು.

    ಚಿತ್ರ ೦೫ ಕೆ.ಎಲ್.ಆರ್. ೦೮ : ಕೋಲಾರದ ತಹಸೀಲ್ದಾರ್ ಕಚೇರಿಯಲ್ಲಿ ರಾಜ್ಯ ಸರ್ಕಾರದಿಂದ ಆರಂಭಿಸಿರುವ ಭೂಸುರಕ್ಷಾ'ನಿಮ್ಮ ದಾಖಲೆಗಳ ಇ-ಖಜಾನೆ ಕಂದಾಯ, ಭೂ ದಾಖಲೆಗಳ ಗಣಕೀಕರಣಗೊಳಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಚಾಲನೆ ನೀಡಿದರು. ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ. ಅನಿಲ್ ಕುಮಾರ್ ಇದ್ದರು.

    ರಾಜ್ಯ ಸರ್ಕಾರದ ಭೂಸುರಕ್ಷಾ'ನಿಮ್ಮ ದಾಖಲೆಗಳ ಇ-ಖಜಾನೆ ಡಿಜಟಲೀಕರಣದಿಂದ ರೈತರಿಗೆ ತ್ವರಿತ ದಾಖಲೆ ಸಿಗಲಿದೆ / ಬಿ.ಎಸ್.ಸುರೇಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts