More

    ರಾಜ್ಯ ಸರಕಾರ ದಿವಾಳಿ ಅಂಚಿನಲ್ಲಿದೆ


    ಯಾದಗಿರಿ: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಬಿಟ್ಟಿ ಭಾಗ್ಯಗಳ ಘೋಷಣೆ ಮೂಲಕ ಇಡೀ ಬೊಕ್ಕಸ ಖಾಲಿ ಮಾಡಿ ದಿವಾಳಿ ಅಂಚಿನಲ್ಲಿದೆ ಎಂದು ಬಿಜೆಪಿ ಅದ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

    ಶಹಾಪುರ ನಗರದ ಸಿಪಿಎಸ್ ಶಾಲಾ ಆವರಣದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಅಮಿನರಡ್ಡಿ ಯಾಳಗಿ ಪದಗ್ರಹಣ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಳೆದ ಕೆಲ ದಿನಗಳ ಹಿಂದೆ ಪಂಚರಾಜ್ಯಗಳ ಚುನಾವಣೆ ನಡೆದು ಫಲಿತಾಂಶ ಸಹ ಹೊರ ಬಂತು. ಕರ್ನಾಟಕಕದಲ್ಲಿ ಗ್ಯಾರಂಟಿ ಯೋಜನೆಗಳಂತೆ ಕಾಂಗ್ರೆಸ್ ಆ ರಾಜ್ಯಗಳಲ್ಲೂ ಬೋಗಸ್ ಭಾಗ್ಯಗಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬರುವ ಆತುರದಲ್ಲಿತ್ತು. ಆದರೆ, ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸಗಡ್ ರಾಜ್ಯಗಳ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ನ ಪೊಳ್ಳು ಭರವಸೆಗಳಿಗೆ ಮಾರುಹೋಗದೆ, ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿಯನ್ನು ನಂಬಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.

    ಅಯೋಧ್ಯೆಯಲ್ಲಿ 500 ವರ್ಷಗಳ ಕಾಲ ನಿಮರ್ಾಣಗೊಳ್ಳದ ರಾಮ ಮಂದಿರವನ್ನು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿರ್ಮಾಣ ಮಾಡಿದೆ. ಮೊಘಲರ ಕಾಲದಲ್ಲಿ ಮಂದರಿವನ್ನು ಧ್ವಂಸ ಮಾಡಿ, ಮಸೀದಿ ನಿಮರ್ಿಸಲಾಗಿತ್ತು. ಆದರೆ, ಇಂದು ಕಾಂಗ್ರೆಸ್ನ ಸಚಿವರು ಅಯೋಧ್ಯೆಯಲ್ಲೇ ರಾಮಮಂದಿರ ಯಾಕೆ ನಿರ್ಮಾಸಬೇಕು. ನಮ್ಮ ನಮ್ಮ ಊರಿನಲ್ಲಿ ಕಟ್ಟಬೇಕು ಎಂದು ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

    ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಗ್ರಾಪಂ ಸದಸ್ಯರು 108 ಅಡಿ ಎತ್ತರ ಹನುಮನ ಧ್ವಜಸ್ಥಂಬ ನಿರ್ಮಾಸಿದ ಧ್ವಜ ಹಾರಿಸಿದರೆ, ಕಾಂಗ್ರೆಸ್ ಕೆಲ ಪುಡಾರಿಗಳು ಪೊಲೀಸರನ್ನು ಬಳಸಿಕೊಂಡು ಆ ಸದಸ್ಯರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಈ ಸರಕಾರ ರಾಮಭಕ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಕರಸೇವಕರ, ರಾಮಭಕ್ತರ ಮೇಲೆ ಸರಕಾರ ಕೆಂಗಣ್ಣು ಬೀರಿದರೆ ಬರುವ ದಿನಗಳಲ್ಲಿ ಇಡೀ ರಾಜ್ಯ ಹೊತ್ತುರಿಯುತ್ತದೆ. ಮುಂದಾಗುವ ಅನಾಹುತಗಳಿಗೆ ಸರಕಾರವೇ ನೇರ ಹೊಣೆಯಾಗಬೇಕುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts