More

    ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕಾರಣದ ಕುಸ್ತಿ- ಸಚಿವ ಮತ್ತು ಪಾಲಿಕೆ ಬಿಜೆಪಿ ಸದಸ್ಯರ ನಡುವೆ ಜಟಾಪಟಿ

    ದಾವಣಗೆರೆ: ನಗರಪಾಲಿಕೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಡಿದ ರಾಜಕಾರಣದ ಮಾತು ಪಾಲಿಕೆಯ ಬಿಜೆಪ@## ಿ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಸ್ಮಾರ್ಟ್ ಸಿಟಿ ಯೋಜನೆ ಜಾರಿ ಚರ್ಚೆ ಕೂಡ ಮುನ್ನೆಲೆಗೆ ಬಂದಿತು. ಈ ವಿಚಾರ ಕಾಂಗ್ರೆಸ್- ಬಿಜೆಪಿ ನಡುವೆ ಜಟಾಪಟಿಗೆ ವೇದಿಕೆಯಾಯಿತು.

    ಸಚಿವ ಮಲ್ಲಿಕಾರ್ಜುನ್ ಮಾತನಾಡಿ ಇಂದಿನ ಕಾರ್ಯಕ್ರಮಕ್ಕೆ ಆಹ್ವಾನಪತ್ರಿಕೆಯಲ್ಲಿ ಮುದ್ರಿಸಿದಂತೆ ಬಿಜೆಪಿಯವರು ಕಾಣುತ್ತಿಲ್ಲ. ಕಾಂಗ್ರೆಸ್ ನವರೇ ಇದ್ದೇವೆ. ಅವರು ಬರಬೇಕಿತ್ತು. ಮಾತನಾಡುವುದು ಬಹಳಷ್ಟಿತ್ತು ಎಂದು ಕೆಣಕಿದರು.
    ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ಕೆಲಸಗಳಾಗಿವೆ. ರಾತ್ರೋರಾತ್ರಿ ಕಲ್ಲು ಹಾಕಿ ನಾವೇ ಅಭಿವೃದ್ಧಿ ಮಾಡಿದ್ದಾಗಿ ಹೇಳಿಕೊಳ್ಳುವುದು ಸರಿಯಲ್ಲ. ಇದನ್ನು ನಿಮ್ಮವರಿಗೆ ಹೇಳಣ್ಣ ಎಂದು ವೇದಿಕೆಯಲ್ಲಿದ್ದ ಪಾಲಿಕೆ ವಿಪಕ್ಷನಾಯಕರತ್ತ ಹೇಳಿದರು.

    ಹಳೆಯ ಬಸ್ ನಿಲ್ದಾಣವನ್ನೂ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ನಮ್ಮ ಅವಧಿಯಲ್ಲಿ ಸ್ವಚ್ಛ ನಗರಗಳ ಪೈಕಿ ದಾವಣಗೆರೆ, ದೇಶದಲ್ಲಿ 9ನೇ ರ‌್ಯಾಂಕ್ ಗಳಿಸಿತ್ತು. ನಮ್ಮ ಪಕ್ಷದ ಆಡಳಿತವಿದ್ದ ನಗರಪಾಲಿಕೆ ಅಭಿವೃದ್ಧಿ ಕಾರಣದಿಂದಾಗಿಯೇ ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಬಂದಿತು ಎಂದು ಸಚಿವರು ಸಮರ್ಥಿಸಿಕೊಂಡರು.
    ಸಚಿವರು ನಿರ್ಗಮಿಸುವ ಹಂತದಲ್ಲಿ ಪಾಲಿಕೆ ವಿಪಕ್ಷನಾಯಕ ಕೆ. ಪ್ರಸನ್ನಕುಮಾರ್ ಮಾತನಾಡಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದ್ದೆ. ಸಚಿವರು ರಾಜಕಾರಣದ ಮಾತನಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರಾಜ್ಯೋತ್ಸವದ ಇಂದಿನ ಕಾರ್ಯಕ್ರಮಕ್ಕೆ ಸಂಸದ ಸಿದ್ದೇಶ್ವರ ಅವರು ಬರಬೇಕಿತ್ತು. ಆದರೆ ಇಂದಿನ ಕಾರ್ಯಕ್ರಮಕ್ಕೆ ಸಚಿವರು ಬರುವಂತೆ ಮೇಯರ್ ಮನವಿ ಮಾಡಿದ್ದರಿಂದಾಗಿ, ಸೋಮವಾರದ ಕಾರ್ಯಕ್ರಮ ಖಾಲಿ ಆಗಿರದಿರಲು ಸಂಸದರನ್ನು ಕರೆತರಲು ನಿರ್ಣಯಿಸಲಾಗಿತ್ತು ಎಂದೂ ಸಮಜಾಯಿಷಿ ನೀಡಿದರು. ಮೇಯರ್ ವಿನಾಯಕ ಅವರಿಂದಲೂ ಹೇಳಿಕೆ ಕೊಡಿಸಿದರು.

    ಸ್ಮಾರ್ಟ್‌ಸಿಟಿ, ನರೇಂದ್ರ ಮೋದಿ ಅವರ ಕನಸಿನ ಕೂಸು. ಅವರೇ ಕೊಡದೇ ನಗರಕ್ಕೆ ಹೇಗೆ ಯೋಜನೆ ಬರುತ್ತಿತ್ತು. ಇದು ಬಿಜೆಪಿಯ ಕೊಡುಗೆ ಎಂದು ಪ್ರಸನ್ನಕುಮಾರ್ ಪ್ರಶ್ನಿಸಿದರು. ನಗರದ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಕಳಪೆಯಾಗಿಲ್ಲ. ಕಾಂಗ್ರೆಸ್ ಅವಧಿಯ ಡಿಪಿಆರ್ ನಂತೆ ಕಾಮಗಾರಿ ಆಗಿದೆ.

    ಬಿಜೆಪಿ ಆಡಳಿತದಲ್ಲಿ ಸಾಧಕರನ್ನು ಗೌರವಿಸುವ ವಿಚಾರದಲ್ಲಿ ಯಾವುದೇ ಕೋಮು-ಜಾತಿ ಗಮನಿಸಿಲ್ಲ ಎಂದು ಪ್ರತ್ಯುತ್ತರ ನೀಡಿದರು. ಅಷ್ಟು ಹೊತ್ತಿಗೆ ಅವರ ಮೈಕ್ ನ ಧ್ವನಿ ಸ್ಥಗಿತಗೊಳಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts