More

    ರಾಜ್ಯಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಜಿಲ್ಲೆಯಿಂದ ಇಬ್ಬರು ಆಯ್ಕೆ

    ಚಿತ್ರದುರ್ಗ: ಬೆಂಗಳೂರಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯಮೇಳ-2024ರ ಅಂಗವಾಗಿ ಡಿ. 23ರಂದು, ಅಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಜಿಲ್ಲೆಯಿಂದ ಇಬ್ಬರು ಆಯ್ಕೆಯಾಗಿದ್ದಾರೆ.
    ಈ ಸ್ಪರ್ಧೆ ಹಿನ್ನೆಲೆ ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸಿರಿಧಾ ನ್ಯ ಪಾಕ ಸ್ಪರ್ಧೆ, ಖಾರದ ತಿನಿಸು ವಿಭಾಗದಲ್ಲಿ ಹೊಸದುರ್ಗ ತಾಲೂಕು ಆನಿವಾಳದ ಪಿ.ಎಂ.ಸುಮಾ ಹಾಗೂ ಸಿಹಿ ತಿನಿಸು ವಿಭಾಗದಲ್ಲಿ ಹಿರಿಯೂರು ತಾಲೂಕು ವಿವಿ.ಸಾಗರದ ಎಸ್.ಸೂರ್ಯ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಖಾರ ಖಾದ್ಯದಲ್ಲಿ ಚಿತ್ರದುರ್ಗ ತಾಲೂಕು ಚಿಕ್ಕಬೆನ್ನೂರಿನ ಬಿ.ಎಸ್.ಶಾಂತಕುಮಾರಿ(ದ್ವೀ) ಹಾಗೂ ನಗರದ ಕೆಳಗೋಟೆ ರಾಜೇಶ್ವರಿ ಬ ಡಿಗೇರ(ತೃ)ಹಾಗೂ ಸಿಹಿ ಖಾದ್ಯದಲ್ಲಿ ದೊಡ್ಡಸಿದ್ದವ್ವನಹಳ್ಳಿ ಜೆ.ವಿ.ವೀಣಾ(ದ್ವಿ) ಹಾಗೂ ಹೊಸದುರ್ಗ ತಾಲೂಕು ಕೆರೆಹೊಸಹಳ್ಳಿ ಎ.ವೈ. ಓಂಕಾರಮ್ಮ(ತೃ)ಬಹುಮಾನ ಪಡೆದರು.
    ವಿಜೇತರಿಗೆ ಕ್ರಮವಾಗಿ 5000 ರೂ.,3000 ರೂ.ಹಾಗೂ 2000 ರೂ.ನಗದು ಬಹುಮಾನ ವಿತರಿಸಲಾಯಿತು. ಜಿಲ್ಲೆಯ ವಿವಿಧೆ ಡೆಯಿಂದ 26 ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಿರಿಧಾನ್ಯಗಳ ಸಿಹಿ ಹಾಗೂ ಖಾರದ ವಿವಿಧ ಖಾದ್ಯಗಳನ್ನು ಸ್ಪರ್ಧಿಗಳು ಸಿದ್ಧಪ ಡಿಸಿ, ಪ್ರದರ್ಶಿಸಿದರು.
    ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಪೂರಕವಾಗಿ ಈ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು. ಜಂಟಿ ಕೃಷಿ ನಿರ್ದೇಶ ಕ ಬಿ.ಮಂಜುನಾಥ್ ಮಾತನಾಡಿ, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಕಡೆಗೆ ರೈತರು, ಉದ್ಯಮಿಗಳು ಗಮನಹರಿಸಬೇಕು ಎಂ ದರು.
    ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕರಾದ ಪ್ರಭಾಕರ್, ಶಿವಕುಮಾರ್, ಸಹಾಯಕ ನಿರ್ದೇಶಕರಾದ ಚಂದ್ರಕುಮಾರ್, ಪ್ರವೀಣ್ ಚೌಧರಿ ಮತ್ತಿತರರು ಅಧಿಕಾರಿಗಳು, ತೀರ್ಪುಗಾರರಾಗಿ ಡಾ.ಸರಸ್ವತಿ, ಎನ್.ಸುಧಾ, ಶೋಭಾ, ಡಾ.ಬಿ.ವಿ.ಸುಧಾ ಇತರರಿದ್ದರು.
    (ಸಿಟಿಡಿ ನ್ಯೂಸ್ ಸಿರಿ ಪಾಕ)
    ಚಿತ್ರದುರ್ಗದಲ್ಲಿ ಬುಧವಾರ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಡಿಸಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇ ಲಾಖೆ ಅಧಿಕಾರಿಗಳಾದ ಬಿ.ಮಂಜುನಾಥ್,ಶಿವಕುಮಾರ್,ಪ್ರಭಾಕರ್,ಪ್ರವೀಣ್ ಚೌಧರಿ, ಡಾ.ಸರಸ್ವತಿ, ಎನ್.ಸುಧಾ,ಶೋಭಾ, ಡಾ. ಬಿ.ವಿ.ಸುಧಾ ಹಾಗೂ ಸ್ಪರ್ಧಿಗಳಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts