More

    ರಾಜ್ಯದಲ್ಲೇ ಮಾದರಿ ಶಿವಾಜಿ ಪಾರ್ಕ್​ ನಿರ್ಮಾಣಕ್ಕೆ ಸಂಕಲ್ಪ

    ಬಸವಕಲ್ಯಾಣ: ನಗರ ಹೊರವಲಯದಲ್ಲಿ ಶಿವಾಜಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ 8 ಎಕರೆ ಜಮೀನು ಮಂಜೂರು ಮಾಡಿದ್ದು, 10 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲೇ ಮಾದರಿಯಾಗಿ ನಿರ್ಮಿಸುವುದಾಗಿ ಶಾಸಕ ಶರಣು ಸಲಗರ ಹೇಳಿದರು.

    ನಗರದ ಶಿವಾಜಿ ಪಾರ್ಕ್​ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಜಯಂತಿ ದಿನವೇ ಮಾಜಿ ಶಾಸಕ ಎಂ.ಜಿ.ಮುಳೆ ಅವರಿಗೆ ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಘೋಷಿಸಿ ಈ ಭಾಗದ ಜನರ ಬಹುದಿನಗಳ ಬೇಡಿಕೆಗಳಿಗೆ ಸಕರ್ಾರ ಸ್ಪಂದಿಸಿದೆ. ಶಿವಾಜಿ ಪಾರ್ಕ್​, ಪರುಷ ಕಟ್ಟೆ, ನೂತನ ಅನುಭವ ಮಂಟಪ ಸೇರಿ ಹಲವಾರು ಕಾಮಗಾರಿ ಶುರುವಾಗಲಿದ್ದು, ಆರು ತಿಂಗಳೊಳಗೆ ಕಲ್ಯಾಣದಲ್ಲಿ ಪ್ರಗತಿ ಪರ್ವ ಕಾಣಬಹುದಾಗಿದೆ ಎಂದರು.
    ಎಐಸಿಸಿ ಸದಸ್ಯ ಆನಂದ ದೇವಪ್ಪ ಮಾತನಾಡಿ, ಸರ್ಕಾರ ನೀಡಿದ ಭರವಸೆಯಂತೆ ಮರಾಠ ಸಮಾಜವನ್ನು 2ಎಗೆ ಸೇರಿಸಬೇಕು ಹಾಗೂ ಮರಾಠ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.ಗೂ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

    ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಂಎಲ್ಸಿ ವಿಜಯಸಿಂಗ್, ಪ್ರಮುಖರಾದ ಎಂ.ಜಿ. ರಾಜೋಳೆ, ಸಂಜಯ ವಾಡೇಕರ, ಅನೀಲ ಭೂಸಾರೆ, ಶಂಕರ ನಾಗದೆ, ಯಸ್ರಬ್ ಅಲಿ ಖಾದ್ರಿ, ಅಜರ್ುನ ಕನಕ, ಮುಜಾಹಿದ್ ಪಾಶಾ ಖುರೇಶಿ, ಸದಾನಂದ ಬಿರಾದಾರ, ಡಾ.ಶಿವಾನಂದ ಜಾಧವ್ ಮಾತನಾಡಿದರು.

    ನಗರಸಭೆ ಅಧ್ಯಕ್ಷೆ ಶಹಜಹಾನ್ ಶೇಖ್ ತನ್ವೀರ್ ಅಹ್ಮದ್, ರಾಜು ಪಾಟೀಲ್ ಹಳ್ಳಿ, ದತ್ತಾತ್ರೇಯ ಧೂಳೆ ಪಾಟೀಲ್, ಸತೀಶ ಮುಳೆ, ಮೀರ್ ವಾರಿಸ್ ಅಲಿ, ಅಂಗದರಾವ ಜಗತಾಪ, ಪ್ರದೀಪ ವಾತಡೆ, ಅಶೋಕ ವಕಾರೆ, ರಾಜಕುಮಾರ ಸಿರಗಾಪುರ, ದೀಪಕ ಗಾಯಕವಾಡ, ಮನೋಹರ ಮೈಸೆ, ಅರ್ಷದ್ ಮಹಾಗಾವಿ, ದಿಲೀಪ ಶಿಂಧೆ, ಅನ್ವರ್ ಭೋಸಗೆ, ಆನಂದ ಪಾಟೀಲ್ ಇತರರಿದ್ದರು. ವಿ.ಟಿ. ಶಿಂಧೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts