More

    ರಾಜ್ಯಕ್ಕೆ ಟಾಟಾ ಎಂದ ಉಪ್ರ ವಲಸಿಗರು

    ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಿಂದ ಶ್ರಮಿಕ ವಿಶೇಷ ರೈಲ್ವೆ ಮೂಲಕ ಉತ್ತರದ ಪ್ರದೇಶದ ಬಸ್ತಿಗೆ 1,443 ಕಾರ್ವಿುಕರು ಸೋಮವಾರ ಮಧ್ಯಾಹ್ನ ಪ್ರಯಾಣ ಬೆಳೆಸಿದರು.

    ಬೆಳಗ್ಗೆ ಇಲ್ಲಿಯ ಹೊಸ ಬಸ್ ನಿಲ್ದಾಣಕ್ಕೆ ಬೇರೆ ಬೇರೆ ಜಿಲ್ಲೆಯ ಕಾರ್ವಿುಕರು ಆಗಮಿಸಿದ್ದರು. ಅವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಟಿಕೆಟ್ ಪರಿಶೀಲಿಸಲಾಯಿತು. ಸೇವಾ ಸಿಂಧು ವೆಬ್​ಸೈಟ್​ನಲ್ಲಿ ದಾಖಲಾದ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸಿದರು. ನಂತರ ಒಬ್ಬೊಬ್ಬರಂತೆ ಕರೆದು ಬೇರೆಡೆ ಕುಳ್ಳಿರಿಸಿ ಆರೋಗ್ಯ ತಪಾಸಣೆ ನಡೆಸಲಾಯಿತು.

    ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಅವರನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅಲ್ಲಿಯೂ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಸೂಚಿಸಿದ್ದನ್ನು ವಲಸಿಗರು ಪಾಲಿಸಿದರು.

    ರೈಲ್ವೆ ನಿಲ್ದಾಣ ಪ್ರವೇಶಕ್ಕೆ ಮುನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಯೊಬ್ಬರ ಸ್ಕ್ರೀನ್ ಟೆಸ್ಟ್ ಮಾಡಿದರು. ಡಿಎಆರ್ ಪೊಲೀಸರು ಪ್ರಯಾಣಿಕರಿಗೆ ಬಿಸ್ಕತ್ ವಿತರಿಸಿದರು. ರೈಲ್ವೆ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಕೆಲವರ ಮುಖದಲ್ಲಿ ದುಃಖವಿದ್ದರೆ, ಇನ್ನೂ ಕೆಲವರು ತಮ್ಮ ರಾಜ್ಯ ತಲುಪುವ ತವಕದಲ್ಲಿದ್ದರು.

    ಪರಸ್ಪರ ಅಂತರ ಮಾಯ

    ಹೊಸ್ ಬಸ್ ನಿಲ್ದಾಣದಲ್ಲಿ ದಾಖಲಾತಿ ಪರಿಶೀಲನೆ ವೇಳೆ ಕಾರ್ವಿುಕರು ಪರಸ್ಪರ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು. ಪ್ರತಿ ಬಾರಿಯೂ ಪೊಲೀಸರು ಅವರಿಗೆ ತಿಳಿ ಹೇಳುತ್ತಿದ್ದರು. ಆದರೂ ಸರಿದಾರಿಗೆ ಬಾರದೇ ಇದ್ದಾಗ ‘ಪೊಲೀಸ್ ಭಾಷೆ’ ಪ್ರಯೋಗಿಸಿದರು.

    ರ್ಭಿಣಿಗೆ ಸಿಕ್ಕಿರಲಿಲ್ಲ ರೈಲ್ವೆ ಟಿಕೆಟ್

    ಧಾರವಾಡದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಬಬ್ಲೂ ಅವರ ಪತ್ನಿ 4 ತಿಂಗಳ ಗರ್ಭಿಣಿ. ಆಕೆಯನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಬೇಕೆಂದು ಎರಡು ದಿನದ ಮೊದಲೇ ಸೇವಾ ಸಿಂಧು ವೆಬ್​ಸೈಟ್​ನಲ್ಲಿ ಹೆಸರು ನೋಂದಾಯಿಸಿದ್ದ. ಆದರೆ, ಹೊಸ ಬಸ್ ನಿಲ್ದಾಣಕ್ಕೆ ಬಂದಾಗ ಯಾದಿಯಲ್ಲಿ ಪತ್ನಿಯ ಹೆಸರು ಇರಲಿಲ್ಲ. ದುಃಖಿತನಾದ ಬಬ್ಲೂ ಯಾರಾದರೂ ಸಹಾಯ ಮಾಡಬಹುದೇ ಎಂದು ಪರದಾಡುತ್ತಿದ್ದರು.

    ಆತನ ಸಂಕಷ್ಟ ಗಮನಿಸಿದ ಗ್ರಾಮೀಣ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಜಾಕ್ಸನ್ ಡಿಸೋಜ ಅವರು ಮೇಲಧಿಕಾರಿಗಳ ಬಳಿ ಮಾತನಾಡಿದರು. ಬಬ್ಲು ಕುಟುಂಬಕ್ಕೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು. ನಂತರ ಬಬ್ಲು, ಪತ್ನಿ ಸಬಿತಾ, ಸಹೋದರ ಅರ್ಜುನ ಅವರನ್ನು ರೈಲಿಗೆ ಹತ್ತಿಸಲಾಯಿತು. ಈ ಮೂವರು ಧಾರವಾಡದಿಂದ ಹುಬ್ಬಳ್ಳಿಗೆ ಆಗಮಿಸಲು ಆಟೋ ಚಾಲಕ ಚನ್ನಬಸಪ್ಪ ಉಚಿತ ಸೇವೆ ನೀಡಿದ್ದರು.

    ಮಡಗಾಂವ್​ಗೆ ಹೊರಟ ಮಧ್ಯಪ್ರದೇಶದ ಜನರು

    ಹುಬ್ಬಳ್ಳಿ, ನವಲಗುಂದ ಹಾಗೂ ಇತರ ಕಡೆ ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆ ಆಗಮಿಸಿದ್ದ ಮಧ್ಯಪ್ರದೇಶದ 36 ಕಾರ್ವಿುಕರನ್ನು ಹೊಸ ಬಸ್ ನಿಲ್ದಾಣದಲ್ಲಿ ಸ್ಕ್ರೀನ್ ಟೆಸ್ಟ್ ಮಾಡಿಸಿ, ಮಡಗಾಂವ್​ಗೆ ಬಸ್​ನಲ್ಲಿ ಕಳುಹಿಸಿಕೊಡಲಾಯಿತು. ಸ್ಥಳದಲ್ಲಿದ್ದ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಕಾರ್ವಿುಕರ ದಾಖಲಾತಿಗಳನ್ನು ಪರಿಶೀಲಿಸಿ ಬಸ್​ನಲ್ಲಿ ಸ್ಥಳ ತೋರಿಸಿ, ಕಳುಹಿಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts