More

    ರಾಜಗೃಹ ದಾಳಿಕೋರರ ಬಂಧನಕ್ಕೆ ಆಗ್ರಹ

    ಹುಣಸೂರು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವುದು ಮತ್ತು ಮುಂಬೈನಲ್ಲಿ ಅಂಬೇಡ್ಕರ್ ರಾಜಗೃಹದ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
    ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಸಮಿತಿ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

    ಜಿಲ್ಲಾ ಸಂಘಟನಾ ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ ಮಾತನಾಡಿ, ಮುಂಬೈನಲ್ಲಿ ಅಂಬೇಡ್ಕರ್ ಅವರ ರಾಜಗೃಹದ ಮೇಲೆ ಇತ್ತೀಚೆಗೆ ಕಿಡಿಗೇಡಿಗಳು ದಾಳಿ ನಡೆಸಿ ಪುಂಡಾಟ ಮೆರೆದಿದ್ದಾರೆ. ಇಂತಹ ಸಮಾಜದ್ರೋಹಿಗಳನ್ನು ಮಹಾರಾಷ್ಟ್ರ ಸರ್ಕಾರ ಕೂಡಲೇ ಪತ್ತೆಹಚ್ಚಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

    ಸಮಿತಿ ತಾಲೂಕು ಸಂಚಾಲಕ ಡೇವಿಡ್ ರತ್ನಪುರಿ ಮಾತನಾಡಿ, ದೇವರಾಜ ಅರಸರು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಬಿಜೆಪಿ ಸರ್ಕಾರ ಹೊರಟಿದೆ. ಇದು ಸರ್ಕಾರದ ಆಸ್ತಿಯನ್ನು ಬಳಸಿಕೊಂಡು ಬಲಿಷ್ಠರಾಗುತ್ತಿರುವ ಬಂಡವಾಳಶಾಹಿಗಳಿಗೆ ಇನ್ನಷ್ಟು ಬೆಂಬಲ ನೀಡಿದಂತಾಗಿದೆ. ಸರ್ಕಾರ ಕೂಡಲೇ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

    ಪ್ರತಿಭಟನಾಕಾರರಿಂದ ಉಪತಹಸೀಲ್ದಾರ್ ಲೋಕೇಶ್ ಮನವಿ ಸ್ವೀಕರಿಸಿದರು. ಶಿವರಾಜು, ಬೀರನಹಳ್ಳಿ ಮಹದೇವ್, ಎನ್.ಅಶೋಕ್, ಜಯಣ್ಣ ಅಡಿಗನಹಳ್ಳಿ, ಶಾಂತಕುಮಾರ್, ಆರ್.ಶಾಂತಿ, ಶಂಭುಲಿಂಗಸ್ವಾಮಿ, ಬಾಚಳ್ಳಿ ರಾಜು, ಫಾಲಾಕ್ಷ, ಹರೀಶ್, ರಾಮಕೃಷ್ಣ, ಬಸವರಾಜು, ಕುಮಾರ್, ಚಲುವರಾಜು ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts