More

    ರಾಜಕೀಯವಾಗಿ ಮುಂದುವರಿಯಿರಿ: ಶಾಸಕಿ ಪೂರ್ಣಿಮಾ ಶ್ರೀನಿವಾಸ್

    ವಿಜಯವಾಣಿ ಸುದ್ದಿಜಾಲ ಕೋಲಾರ
    ಯಾದವ ಸಮುದಾಯ ಸಂಘಟಿತಗೊಂಡು ಶೈಕ್ಷಣಿಕವಾಗಿ,ರಾಜಕೀಯವಾಗಿ ಮುಂದೆ ಬರಬೇಕೆಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.
    ಜಿಲ್ಲಾ ಯಾದವ ಸಂಘ,ತಾಲೂಕು ಯಾದವ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಗರದ ಟೇಕಲ್ ರಸ್ತೆ ಬೈಪಾಸ್ ಬಳಿಯ ಚೌಡೇಶ್ವರಿ ನಗರದ ಬಳಿಯ ಯಾದವ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಾಂಗದ ನಗರಸಭೆ,ಪುರಸಭೆ, ಪಂಚಾಯತಿಗಳಿಗೆ ಚುನಾಯಿತರಾಗಿರುವ ಸದಸ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಇಂದು ಚುನಾವಣೆ ಗೆಲ್ಲುವುದು ಸುಲಭವಲ್ಲ. ರೈತ ಭೂಮಿ ಹದಮಾಡಿ ನಿರಂತರ ಪರಿಶ್ರಮಪಟ್ಟರಷ್ಟೇ ಬೆಳೆ.ಹಾಗೆಯೇ ಚುನಾವಣೆಗಳು ಜಾತಿ, ಹಣದ ಲೆಕ್ಕಾಚಾರ, ಪಕ್ಷದ ಬಗ್ಗೆ ಜನರ ಒಲವು ಹಾಗೂ ದೇವರ ಆಶೀರ್ವಾದ ಅಗತ್ಯ. ಜನಪ್ರತಿನಿಧಿಯಾಗಲು ಜನರ ಮದ್ಯೆ ಇದ್ದು ಬೆಳೆಯಬೇಕು, ಮುಖ್ಯವಾಗಿ ಇಚ್ಚಾಶಕ್ತಿ ಬೇಕು ಎಂದು ನುಡಿದರು.
    ಯಾದವ ಸಂಘದ ಅಧ್ಯಕ್ಷ ಗೋಕುಲ್ ನಾರಾಯಣಸ್ವಾಮಿ ಮಾತನಾಡಿ,ಯಾದವ ಸಂಘಕ್ಕೆ ಮಾಜಿ ಸಚಿವ ದಿ.ಎ.ಕೃಷ್ಣಪ್ಪ ಭದ್ರ ಬುನಾದಿ ಹಾಕಿದ್ದಾರೆ.ಅವರು ಯಾವ ಪಕ್ಷದಲ್ಲಿದ್ದರೂ ಜಿಲ್ಲಾ ಸಂಘ ಅವರೊಂದಿಗೆ ಗಟ್ಟಿಯಾಗಿ ನಿಂತಿತ್ತು.ರಾಜ್ಯದ ಹಾಲಿ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್,ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮೇಲೆ ಜವಾಬ್ದಾರಿ ಇದೆ.ಒಗ್ಗಟ್ಟಿನಿಂದ ನಮ್ಮ ಕೂಗು ವಿಧಾನಸೌಧಕ್ಕೆ ತಲುಪಬೇಕು ಎಂದರು.
    ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ ಶ್ರೀನಿವಾಸ್ ಮಾತನಾಡಿ,ಸರ್ಕಾರ ಉದ್ಯೋಗ ಮತ್ತು ಶಿಕ್ಷಣಕ್ಕೆ ಮೀಸಲಾತಿ ನೀಡುವ ಜತೆಗೆ ಉಪಜಾತಿಗಳನ್ನು ಸೇರಿಸಿ ಸ್ಪರ್ಧೆ ಏರ್ಪಡುವಂತೆ ಮಾಡುತ್ತಾ ಆರ್ಥಿಕ ಸಬಲತೆ ಕಾಣದ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದೆ ಸರಿಯುವಂತೆ,ಸಣ್ಣಸಣ್ಣ ಜಾತಿಗಳು ಎಲ್ಲ ರಂಗದಲ್ಲೂ ಕಾಣೆಯಾಗುವಂತೆ ಮಾಡುತ್ತಿರುವ ವಿರುದ್ದ ಕ್ರಾಂತಿಕಾರಿ ಹೋರಾಟ ನಡೆಸುವ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಯಾದವ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ ವೆಂಕಟರವಣ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಎಂ.ಶ್ರೀನಿವಾಸ್,ನಗರಸಭೆ ಅಧ್ಯಕ್ಷೆ ಶ್ವೇತಾಶಬರೀಶ್, ಸದಸ್ಯ ಬಿ.ಎಂ.ಮುಬಾರಕ್, ಭಾರತ ಸೇವಾದಳದ ಅಧ್ಯಕ್ಷ ಕೆ.ಎಸ್ ಗಣೇಶ್,ರಾಜ್ಯ ಯಾದವ ಸಂಘದ ನಿರ್ದೇಶಕ ಕೆ.ವಿ ಶ್ರೀನಿವಾಸ ಯಾದವ್, ಜಿಲ್ಲಾ ಉಪಾಧ್ಯಕ್ಷ ಆರ್.ಗೋಪಾಲ್,ಕಾರ್ಯಾಧ್ಯಕ್ಷ ಮುಕ್ಕಡ್ ವೆಂಕಟೇಶ್, ಪ್ರಾಧ್ಯಾಪಕ ಡಾ.ಆರ್.ಶಂಕರಪ್ಪ,ಮುಖಂಡರಾದ ನಾಗಮಣಿ ಸುಬ್ರಮಣಿ, ರಘುರಾಮಯ್ಯ, ಎಂ.ಮಣಿ, ಗೋಪಾಲಕೃಷ್ಣ, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ. ಜಯದೇವ್,ಪಿಡಿಒ ನಾಗರಾಜ್, ಮಂಜುನಾಥ್ ಇತರರಿದ್ದರು.

    ರಾಜಕೀಯವಾಗಿ ಮುಂದುವರಿಯಿರಿ: ಶಾಸಕಿ ಪೂರ್ಣಿಮಾ ಶ್ರೀನಿವಾಸ್
    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts