More

    ರಾಜಕಾರಣ, ಪತ್ರಿಕಾರಂಗ ಬೇರ್ಪಡಿಸಲಾಗದು

    ಶಿಗ್ಗಾಂವಿ: ಪ್ರತಿದಿನ ವಿವಿಧ ವರ್ಗದ ಜನರ ಆಸೆ, ಆಕಾಂಕ್ಷೆಗಳನ್ನು ಸರಿಯಾದ ರೀತಿಯಲ್ಲಿ ಬಿಂಬಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ಸಂಗನಬಸವ ಕಲ್ಯಾಣಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಶಿಗ್ಗಾಂವಿ ತಾಲೂಕು ಪತ್ರಿಕಾ ವಿತರಕರ ಸಂಘ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಮಚಿತ್ತದಿಂದ ಸತ್ಯ ತೋರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ರಾಜಕಾರಣ ಮತ್ತು ಪತ್ರಿಕಾರಂಗ ಬೇರ್ಪಡಿಸಲು ಸಾಧ್ಯವಿಲ್ಲ. ಸರ್ಕಾರ ಏನೇ ನಿರ್ಣಯ ತೆಗೆದುಕೊಂಡರೂ ಅದನ್ನು ಜನರಿಗೆ ಮುಟ್ಟಿಸಲು ಪತ್ರಿಕೆಗಳು ಬೇಕು. ಜನರಿಗೆ ನಮ್ಮ ಉದ್ದೇಶಗಳು ತಲುಪದಿದ್ದರೆ ಸರ್ಕಾರಗಳ ಉದ್ದೇಶ ಈಡೇರಲ್ಲ. ಪತ್ರಿಕಾರಂಗ ಎಂಬ ಪಕ್ಷಿಗೆ ವಿತರಕರು ರೆಕ್ಕೆಪುಕ್ಕಗಳಿದ್ದಂತೆ. ಹೀಗಾಗಿ ವಿತರಕರ ಸಹಾಯದಿಂದ ಇಂದು ಕೆಲವು ಪತ್ರಿಕೆಗಳು ನಂ. 1 ಸ್ಥಾನದಲ್ಲಿವೆ ಎಂದರು.

    ಸರ್ಕಾರ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಬಸ್​ಪಾಸ್, ಆರೋಗ್ಯ ವಿಮೆ ಸೇರಿ ಇತರ ಸೌಲಭ್ಯಗಳನ್ನು ಈ ಬಾರಿಯ ಬಜೆಟ್​ನಲ್ಲಿ ಘೊಷಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ನಿಮ್ಮ ಮನವಿಗೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಎಲ್ಲ ಕಷ್ಟಗಳನ್ನು ಮೀರಿ ಕೆಲಸ ಮಾಡುತ್ತಿರುವ ಪತ್ರಿಕೆಗಳು, ವಿತರಕರು ನಿತ್ಯ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ ಎಂದರು.

    ಪತ್ರಕರ್ತ ಸುಧಾಕರ ದೈವಜ್ಞ, ಬಸವರಾಜ ಹಡಪದ ಸ್ವಾಗತಿಸಿದರು. ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಎಂ.ವಿ. ಗಡಾದ ಮಾತನಾಡಿದರು. ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

    ಹಿರಿಯ ಪತ್ರಿಕಾ ವಿತರಕರಾದ ತಮ್ಮಣ್ಣ ಜೋಶಿ, ರಂಗಣ್ಣ ದೇಶಪಾಂಡೆ, ಗಾಂಧಿ ಹೆಸರೂರ, ಎಚ್.ಎನ್. ನದಾಫ್, ಸುಭಾಷ ಚವ್ಹಾಣ, ಬಸವರಾಜ ಮೆಳ್ಳಗಟ್ಟಿ, ಮುದಕಪ್ಪ ವನಹಳ್ಳಿ, ಸಲೀಮ ಶೇಖ, ಸಾಧಕರಾದ ರಾಜೇಸಾಬ್ ನದಾಫ್, ಸಹದೇವಪ್ಪ ಕಮಡೊಳ್ಳಿ, ಫಕೀರಪ್ಪ ಕಟ್ಟಿಮನಿ, ಕೊಟ್ರೇಶ ಮಾಸ್ತರ ಬೆಳಗಲಿ, ಡಾ. ಹನುಮಂತಪ್ಪ ಪಿ.ಎಚ್. ಅವರನ್ನು ಸನ್ಮಾನಿಸಲಾಯಿತು.

    ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ನೀರಲಗಿ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಪತ್ರಕರ್ತರಾದ ಬಿ.ಎಸ್. ಹಿರೇಮಠ, ಪಿ.ಎಂ. ಸತ್ಯಪ್ಪನವರ, ಸುರೇಶ ಯಲಿಗಾರ, ಮಂಜುನಾಥ ಕಮ್ಮಾರ, ಜ್ಞಾನೇಶ್ವರ ಮಾಳವದೆ, ಪರಮೇಶ ಲಮಾಣಿ, ಬಸವರಾಜ ಹೊನ್ನಣ್ಣವರ, ರವಿ ಉಡುಪಿ, ಸಿದ್ರಾಮಗೌಡ ಮೆಳ್ಳಾಗಟ್ಟಿ, ಜನಪ್ರತಿನಿಧಿಗಳು ಇದ್ದರು. ಉಪನ್ಯಾಸಕ ಶಶಿಕಾಂತ ರಾಠೋಡ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts