More

    ರಸ್ತೆ ಮಧ್ಯೆ ವಾಟರ್ ಸಪ್ಲೈ ಬೋರ್ಡ್!

    ಚಂದ್ರಶೇಖರ ಎಮ್ಮೆ ಭಾಲ್ಕಿ
    ಪಟ್ಟಣ ಮಧ್ಯಭಾಗದ ಗಾಂಧಿ ವೃತ್ತದ ಬಳಿ ಕನರ್ಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬು್ಲೃಎಸ್ಡಿಬಿ) ಪೈಪ್ಲೈನ್ ದುರಸ್ತಿಗಾಗಿ ಎರಡ್ಮೂರು ತಿಂಗಳಿಂದ ನಾಮಫಲಕ ಹಾಕಿದೆ. ಆದರೆ ರಿಪೇರಿ ಮಾಡದ್ದರಿಂದ ವಾಹನ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

    ಭಾಲ್ಕಿ-ಬೀದರ್ ಮುಖ್ಯ ರಸ್ತೆ ಮಧ್ಯದಲ್ಲಿ ಪೈಪ್ಲೈನ್ ಹಾಕುವುದು ತಪ್ಪು. ಆದರೂ ಇದ್ದ ಪೈಪ್ಲೈನ್ ದುರಸ್ತಿ ಮಾಡದ ವಾಟರ್ ಸಪ್ಲೈ ಬೋಡರ್್ನವರ ನಿಷ್ಕಾಳಜಿ ಸ್ಥಳೀಯರ ಜತೆಗೆ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಗಾಂಧಿ ವೃತ್ತದ ಬಳಿ ಹೆಚ್ಚಿನ ರಸ್ತೆ ಒತ್ತುವರಿಯಾಗಿದೆ. ಒಂದೆಡೆ ಗಣೇಶ ದೇವಸ್ಥಾನ, ಮತ್ತೊಂದೆಡೆ ಪೊಲೀಸ್ ಠಾಣೆ, ಇನ್ನೊಂದೆಡೆ ಮತ್ತೆ ಮಂದಿರ ಹಾಗೂ ಚಿಕ್ಕ ಅಂಗಡಿಗಳಿವೆ. ಮಗದೊಂದೆಡೆ ಸಾರ್ವಜನಿಕ ಶೌಚಗೃಹ ಇದ್ದು, ಅದರ ಮುಂದುಗಡೆ ಚಿಕ್ಕ ವ್ಯಾಪಾರಿಗಳು ಬಂಡಿ ಇರಿಸುವುದರಿಂದ ಸುಗಮ ಸಂಚಾರಕ್ಕೆ ಜಾಗವೇ ಇಲ್ಲದಂತಾಗಿದೆ. ಗಾಂಧಿ ಚೌಕ್ ಹತ್ತಿರದ ಜನಸಂದಣಿ ಗಮನದಲ್ಲಿಟ್ಟು ಒತ್ತುವರಿ ಜಾಗ ತೆರವುಗೊಳಿಸಿದರೆ ಸಂಚಾರ ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುತ್ತಾರೆ ವ್ಯಾಪಾರಿ ಲೋಕೇಶ ಭೂರೆ.

    ಸುಧಾಮ ಫಟರ್ಿಲೈಸರ್ನಿಂದ ಪೂಜಾ ಇಲೆಕ್ಟ್ರಾನಿಕ್ಸ್ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಪೆಂಡಿಂಗ್ ಇದೆ. ಮುಂದೆ ಅಂಬೇಡ್ಕರ್ ವೃತ್ತದವರೆಗೆ ಮತ್ತು ಬೀದರ್ ರಸ್ತೆ ರೈಲ್ವೆ ಗೇಟ್ವರೆಗೆ ಅಗಲೀಕರಣ ಕೆಲಸ ಮುಗಿದಿದೆ. ಆದರೆ ಪಟ್ಟಣದ ಮಧ್ಯ ಭಾಗದಲ್ಲೇ ಅಗಲೀಕರಣ ಕಾಮಗಾರಿ ನನೆಗುದಿಗೆ ಬಿದ್ದಿದ್ದರಿಂದ ಜನರಿಗೆ ತುಂಬ ತೊಂದರೆ ಆಗುತ್ತಿದೆ. ಏಕೆಂದರೆ ರಸ್ತೆ ಪಕ್ಕದಲ್ಲಿ ಪಾಕರ್ಿಂಗ್ ಮಾಡಿ ಅಂಗಡಿಗಳಿಗೆ ತೆರಳುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಸಂಬಂಧಿತರು ತಕ್ಷಣ ಗಮನಹರಿಸಿ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ವ್ಯಾಪಾರಿ ಪ್ರಭು ಕೋಟೆ ಒತ್ತಾಯಿಸುತ್ತಾರೆ.

    ರಸ್ತೆ ಬದಿ ವಹಿವಾಟು ಮಾಡುವವರು ರಸ್ತೆಯಿಂದ ಸ್ವಲ್ಪ ಹಿಂದೆ ಸರಿದರೆ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಆದರೆ ಎಲ್ಲ ವ್ಯಾಪಾರಿಗಳು ಫುಟ್ಪಾತ್ ಆಕ್ರಮಿಸಿಕೊಂಡಿದ್ದರಿಂದ ತೊಂದರೆ ಉಂಟಾಗುತ್ತಿದೆ. ಇನ್ನು ಪಟ್ಟಣ ಮಧ್ಯಭಾಗದಿಂದ ಬಸ್, ಲಾರಿಗಳು ಓಡಾಡುವುದರಿಂದ ಟ್ರಾಫಿಕ್ ಜಾಮ್ ಜಾಸ್ತಿ ಇದೆ. ಹೀಗಾಗಿ ಬಹುದಿನಗಳ ಬೇಡಿಕೆಯಂತೆ ಪಟ್ಟಣಕ್ಕೆ ರಿಂಗ್ ರಸ್ತೆ ಅಗತ್ಯವಿದೆ. ಕನಿಷ್ಠ ದೊಡ್ಡ ವಾಹನಗಳಿಗಾಗಿ ರಿಂಗ್ ರೋಡ್ ನಿಮರ್ಿಸಿದರೆ ಒಂದೆಡೆ ಪಟ್ಟಣದ ಅಭಿವೃದ್ಧಿಯೂ ಆಗುತ್ತದೆ ಮತ್ತು ಪಟ್ಟಣದಲ್ಲಿ ಸಂಚಾರವೂ ಸುಗಮವಾಗಲಿದೆ. ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ನಿವಾಸಿಗಳು ಶಾಸಕರಲ್ಲಿ ಮನವಿ ಮಾಡಿದ್ದಾರೆ.

    ಶಾಸಕ ಈಶ್ವರ ಖಂಡ್ರೆ ಪಟ್ಟಣದ ಸುಂದರೀಕರಣಕ್ಕೆ ಶ್ರಮಿಸುತ್ತಿದ್ದಾರೆ. ಅಧಿಕಾರಿಗಳು ಸಹ ಚಿಕ್ಕಪುಟ್ಟ ಸಮಸ್ಯೆ ಬಗೆಹರಿಸಿ ಇನ್ನಷ್ಟು ಸುಂದರಗೊಳಿಸಬೇಕು. ಆದರೆ ನೀರು ಸರಬರಾಜು ಮಂಡಳಿ ಅಧಿಕಾರಿಗಳ ನಿರ್ಲಕ್ಷೃದಿಂದ ಗಾಂಧಿ ವೃತ್ತದ ಬಳಿ ಹತ್ತಿರದ ದೊಡ್ಡ ರಂಧ್ರವನ್ನು ಇದುವರೆಗೆ ರಿಪೇರಿ ಮಾಡಿಲ್ಲ. ಈಗಲಾದರೂ ಈ ಸಮಸ್ಯೆ ಬಗೆಹರಿಸಬೇಕು.
    | ಜೈರಾಜ ಪಾತ್ರೆ, ವ್ಯಾಪಾರಿ

    ಗಾಂಧಿ ವೃತ್ತ ಹತ್ತಿರದ ದೊಡ್ಡ ರಂಧ್ರವನ್ನು ನಾನೂ ಗಮನಿಸಿದ್ದೇನೆ. ನಗರ ನೀರು ಸರಬರಾಜು ಮಂಡಳಿಯವರು ರಿಪೇರಿ ಮಾಡಬಹುದಿತ್ತು. ಆದರೆ ಎರಡ್ಮೂರು ತಿಂಗಳಿಂದ ಯಾರೊಬ್ಬರೂ ದುರಸ್ತಿಗೆ ಮುಂದಾಗುತ್ತಿಲ್ಲ. ತಕ್ಷಣವೇ ಈ ರಂಧ್ರ ಮುಚ್ಚಿಸುವಂತೆ ಸಂಬಂಧಿತ ಅಧಿಕಾರಿಗಳು ಹಾಗೂ ಮುಖ್ಯಾಧಿಕಾರಿ ಸ್ವಾಮಿದಾಸ ಗಮನಕ್ಕೆ ತರುತ್ತೇನೆ.
    | ಅನೀಲಕುಮಾರ ಸುಂಟೆ, ಪುರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts