More

    ರಸ್ತೆ ನಿಯಮ ಅರಿತು, ಪಾಲಿಸಿ

    ದೇವರಹಿಪ್ಪರಗಿ: ಚಾಲಕರು, ಸಾರ್ವಜನಿಕರು ರಸ್ತೆ ನಿಯಮಗಳನ್ನು ಅರಿತು ಸ್ವಯಂ ಪಾಲನೆ ಮಾಡುವುದರ ಮೂಲಕ ಅಪಘಾತರಹಿತ ಪ್ರಯಾಣಕ್ಕೆ ಮುಂದಾಗಬೇಕೆಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
    ಪಟ್ಟಣದ ಪೊಲೀಸ್ ಠಾಣೆ ಸಹಭಾಗಿತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಆಟೋರಿಕ್ಷಾ ಚಾಲಕರಿಗೆ ಕರಪತ್ರ ವಿತರಿಸಿ ಅವರು ಮಾತನಾಡಿದರು.
    ದೇಶಾದ್ಯಂತ ಪ್ರತಿವರ್ಷ ಅಪಘಾತಗಳಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಾರಣ ನಾವು ರಸ್ತೆ ನಿಯಮಗಳನ್ನು ಅರಿಯದಿರುವುದು ಹಾಗೂ ಪಾಲನೆ ಮಾಡದಿರುವುದಾಗಿದೆ. ಆದ್ದರಿಂದ ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು, ಕಾರು ಚಾಲಕರು ಬೆಲ್ಟ್ ಧರಿಸುವುದು ಹಾಗೂ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ಮೂಲಕ ಅಪಘಾತ ಜರುಗದಂತೆ ಮುಂಜಾಗ್ರತೆ ವಹಿಸಬಹುದಾಗಿದೆ ಎಂದರು.
    ಬಿಜೆಪಿ ಮುಖಂಡ ಉಮೇಶ ಕಾರಜೋಳ ಮಾತನಾಡಿ, ರಸ್ತೆ ನಿಯಮಗಳನ್ನು ಪಾಲಿಸಿ ಸುರಕ್ಷಿತ ಜೀವನಕ್ಕೆ ಮುನ್ನಡಿ ಬರೆಯೋಣ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸೋಣ ಎಂದರು.
    ಪಿಎಸ್‌ಐ ರವಿ ಯಡವಣ್ಣವರ, ರಾಜು ಮೆಟಗಾರ, ಪೊಲೀಸ್ ಸಿಬ್ಬಂದಿ ಗುರು ಸಿಂಘೆ, ಮಲ್ಲಿಕಾರ್ಜುನ ಕತ್ತಿ, ಮೇಕಗಿರಿ ಥೋರವೆ, ಜಹಾಂಗೀರ್ ಅವುಟಿ, ಶರಣಗೌಡ ಬಿರಾದಾರ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಕಾಶಿನಾಥ ಮಡಗೊಂಡ, ಆದಯ್ಯ ಸದಯ್ಯನಮಠ, ಮಹಾಲಿಂಗ ಕೊಳಕೂರ, ಬಸವರಾಜ ಅರ್ಜುಣಗಿ, ರಾಜು ಯಲಗಾರ, ಕಾಶಿನಾಥ ಅರ್ಜುಣಗಿ, ಸದ್ದಾಂ ನದ್ಾ, ಸಿದ್ಧಲಿಂಗ ಪೂಜಾರಿ, ಮೊಹಮ್ಮದ್ ಮಂಡೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts