More

    ರಸ್ತೆ ಕಾಮಗಾರಿಯಿಂದ ಬಿಡ್ನಾಳ ರೈತರಿಗೆ ಸಂಕಷ್ಟ

    ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿ ನಿರ್ವಿುಸುತ್ತಿರುವ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಯಿಂದ ಬಮ್ಮಾಪುರ ವ್ಯಾಪ್ತಿಯ ಬಿಡ್ನಾಳ ಸುತ್ತಲಿನ ಹೊಲದ ರೈತರಿಗೆ ಆಗುತ್ತಿರುವ ಸಂಕಷ್ಟಗಳ ಕುರಿತು ಶಾಸಕ ಪ್ರಸಾದ ಅಬ್ಬಯ್ಯ ಅವರು ಸೋಮವಾರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

    ಈ ಕಾಮಗಾರಿಯಡಿ ರೈತರಿಗೆ ಅಗತ್ಯವಿರುವೆಡೆ ಅಂಡರ್ ಪಾಸ್ ನಿರ್ವಿುಸಿಲ್ಲ. ಅವೈಜ್ಞಾನಿಕ ಮೇಲ್ಸೇತುವೆ ಕಾಮಗಾರಿಯಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ಹೊಲದಲ್ಲೇ ನಿಲ್ಲುತ್ತಿರುವುದರಿಂದ ಬೆಳೆಹಾನಿ ಸಂಭವಿಸುತ್ತಿದೆ. ಚಕ್ಕಡಿ ದಾರಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ವಿುಸಿದ್ದರಿಂದ ತಮ್ಮ ಹೊಲಗಳಿಗೆ ತೆರಳಲು ದಾರಿ ಇಲ್ಲದಂತಾಗಿದ್ದು, ರಿಂಗ್ ರಸ್ತೆಯನ್ನು ಸುತ್ತಿಕೊಂಡು ಹೋಗುವಂತಾಗಿದೆ ಎಂದು ರೈತರು ಸಮಸ್ಯೆ ಹೇಳಿಕೊಂಡರು.

    ಈ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ಸಾಕಷ್ಟು ವಿಳಂಬವಾಗಿ ನನ್ನ ಗಮನಕ್ಕೆ ತಂದಿದ್ದು, ಮುಂಚಿತವಾಗಿ ಈ ಕುರಿತು ಮಾಹಿತಿ ನೀಡಿದ್ದರೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಯಲ್ಲಿ ಬದಲಾವಣೆ ಮಾಡಬಹುದಾಗಿತ್ತು. ಆದರೆ, ಇದೀಗ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಗೂ ಸಚಿವರು, ಸಂಸದರೊಂದಿಗೆ ರ್ಚಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

    ನಂತರ ಕಾರವಾರ ರಸ್ತೆಯ ಕೆಂಪಕೆರೆ ಕಾಮಗಾರಿ ವೀಕ್ಷಿಸಿದ ಶಾಸಕರು, ಕಾರವಾರ ರಸ್ತೆಯ ಮೇಲ್ಸೇತುವೆ ಬಳಿಯ ಯುಜಿಡಿಯಿಂದ ಹೊರಬರುವ ಕೊಳಚೆ ನೀರು ಗಟಾರದ ಮೂಲಕ ಕೆರೆಗೆ ಸೇರುತ್ತಿದ್ದು, ಇದನ್ನು ತಡೆಯಲು ಕೂಡಲೆ ಪ್ರತ್ಯೇಕ ಪೈಪ್​ಲೈನ್ ಅಳವಡಿಸಿ, ಕೆರೆಯ ಬಳಿ ವೆಟ್​ವೆಲ್ ನಿರ್ವಿುಸಿ, ತದನಂತರ ಎಸ್​ಟಿಪಿ ಮೂಲಕ ನೀರು ಶುದ್ಧೀಕರಿಸಿ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಆರ್.ಕೆ. ಮಠದ, ಪಾಲಿಕೆ ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ವಿಜನಗೌಡ ಪಾಟೀಲ, ಫರ್ವೆಜ್ ಕೊಣ್ಣೂರು, ರೈತರಾದ ಪರುತಪ್ಪ ಬಳಗಣ್ಣವರ, ಫಕ್ಕೀರಪ್ಪ ಕಲ್ಲಣ್ಣವರ, ಶೇಖಣ್ಣ ಬೆಂಡಿಗೇರಿ, ಹನುಮಂತಗೌಡ ಪಾಟೀಲ, ನಿಂಗನಗೌಡ ಪಾಟೀಲ, ಗುರುಸಿದ್ದಪ್ಪ ಕಟಗಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts