More

    ರಸ್ತೆಯಲ್ಲಿ ಚಿತ್ರ ಬಿಡಿಸಿ ಕರೊನಾ ಜಾಗೃತಿ

    ಕುಂದಗೋಳ: ಸ್ಥಳೀಯ ಕಲಾವಿದ ಮಲ್ಲನಗೌಡ ಪಾಟೀಲ ಅವರು ಪಟ್ಟಣದ ಪ್ರಮುಖ ರಸ್ತೆ ಮೇಲೆ ಕರೊನಾ ಕುರಿತು ಚಿತ್ರ ಬಿಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕರೊನಾ ಎಚ್ಚರಿಕೆ ನೀವು ರಸ್ತೆಗೆ ಬಂದರೆ, ನಾ ಮನೆಗೆ ಬರುವೆ ಎಂಬ ಚಿತ್ರವನ್ನು ರಚಿಸಿದ್ದಾರೆ. ಸೋಂಕು ನಿಯಂತ್ರಿಸುತ್ತಿರುವ ವೈದ್ಯರು, ಪೊಲೀಸರು, ಇದಕ್ಕಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

    ಕಾರ್ವಿುಕರಿಗೆ ಕರೊನಾ ತಿಳಿವಳಿಕೆ: ಹುಬ್ಬಳ್ಳಿ ತಾಲೂಕಿನ ಇಟಿಗಟ್ಟಿ ಗ್ರಾಮ ಬಳಿಯ ಮೈಕ್ರೋಫಿನಿಷ್ ವಾಲ್ಸ್ ಪ್ರೖೆವೇಟ್ ಲಿ. ಕಾರ್ಖಾನೆಯಲ್ಲಿ ವಿವಿಧ ವಿಭಾಗದ ಮೇಲ್ವಿಚಾರಕರು ಹಾಗೂ ಕಾರ್ವಿುಕರಿಗೆ ಸಂಜೀವಿನಿ ಆರ್ಯುರ್ವೆದ ಮಹಾವಿದ್ಯಾಲಯದ ತಜ್ಞ ವೈದ್ಯರಿಂದ ಕರೊನಾ ತಿಳಿವಳಿಕೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕುರಿತು ಕಾರ್ಯಾಗಾರ ಜರುಗಿತು. ಸಂಜೀವಿನಿ ಕಾಲೇಜ್ ನಿರ್ದೇಶಕರಾದ ಡಾ. ಗೌರೀಶ ಅಸೂಟಿ, ಡಾ. ಚರಂತಯ್ಯ ಹಿರೇಮಠ ಮಾತನಾಡಿ, ಆಯುರ್ವೆದದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ವಿಧಾನಗಳು ಹಾಗೂ ಅದರ ಮಹತ್ವವನ್ನು ವಿವರಿಸಿದರು. ಸಂಸ್ಥೆ ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷ ಭೋಜಶೆಟ್ಟರ, ಡಾ. ಶಶಿಕಾಂತ ಹಿರೇಮಠ, ಓಜಸ್ಕರ ಕಷಾಯ ತಯಾರಿಸುವ ವಿಧಾನ, ಅದನ್ನು ಸೇವಿಸುವ ಕಾಲಮಾನಗಳ ಕುರಿತು ವಿವರಿಸಿದರು. ಕಾರ್ಖಾನೆ ನಿರ್ದೇಶಕ ರಾಜೀವ ವಿಕಾಮ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts