More

    ರಸ್ತೆಗೆ ಸಾಲು ಮರಗಳ ಹಸಿರ ಹೊದಿಕೆ

    ಮಲ್ಲಪ್ಪ ಗೌಡ ಔರಾದ್
    ಪಟ್ಟಣದ ಕನ್ನಡಾಂಬೆ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣ, ಹಳೇ ಬಿಇಒ ಕಚೇರಿ, ತಾಲೂಕು ಆಸ್ಪತ್ರೆ, ಪೊಲೀಸ್ ಠಾಣೆ ಹಾಗೂ ವರ್ತುಲ ರಸ್ತೆವರೆಗಿನ ಸುಮಾರು ಮೂರು ಕಿಲೋಮೀಟರ್ ಮಾರ್ಗದ ಎರಡೂ ಬದಿ ಮತ್ತು ವಿಭಜಕದಲ್ಲಿರುವ ಸಾಲು ಮರಗಳು ಬಿರು ಬೇಸಿಗೆಯಲ್ಲೂ ಸಂಚಾರಿಗಳಿಗೆ ತಂಪಿನ ಅನುಭವ ನೀಡುತ್ತಿವೆ.

    ಸಾಮಾಜಿಕ ಅರಣ್ಯ ಇಲಾಖೆಯು 2014-15ರಲ್ಲಿ ಹೊಂಗೆ, ಅರಳಿ, ಬಾಗೆ, ಬೇವು ಸೇರಿ ವಿವಿಧ ಜಾತಿಯ ನೂರಾರು ಗಿಡಗಳನ್ನು ನೆಟ್ಟಿದ್ದು, ಅವು ಈಗ ಸೊಂಪಾಗಿ ಬೆಳೆದು ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ರಸ್ತೆ ಬದಿಗೆ ಕಾಲಿಡುತ್ತಿದ್ದಂತೆ ಹಸಿರು ಕಾಣಿಸಿಕೊಳ್ಳುತ್ತದೆ. ಬೇಸಿಗೆ ಝಳ ಹೆಚ್ಚಿದ್ದರೂ ಮರಗಳು ಇರುವ ಕಾರಣ ಬಿಸಿಲು ತಾಕದೆ ಬಿಲ್ಕುಲ್ ಕೂಲ್ ಎನಿಸುತ್ತದೆ.
    ಶ್ರೀ ಅಮರೇಶ್ವರ ದೇವಾಲಯ ಹಾಗೂ ಸಾಯಿಬಾಬಾ ಮಂದಿರಕ್ಕೆ ನಿತ್ಯ ನೂರಾರು ಪ್ರವಾಸಿಗರು, ವ್ಯಾಪಾರಿಗಳು ಮತ್ತು ಭಕ್ತರು ದ್ವಿಚಕ್ರ ಇತರ ವಾಹನಗಳಲ್ಲಿ ಬರುತ್ತಿರುತ್ತಾರೆ. ಇಲ್ಲಿನ ತಂಪಾದ ವಾತಾವರಣ ಕಂಡು ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ತಿಂಡಿ ತಿನಿಸುಗಳನ್ನು ತಿಂದು ನಂತರ ಸ್ವಗ್ರಾಮಗಳಿಗೆ ಮರಳುವ ದೃಶ್ಯ ಸಾಮಾನ್ಯವಾಗಿದೆ.

    ಅರಣ್ಯ ಇಲಾಖೆ ಮುತುವರ್ಜಿಯಿಂದಾಗಿ ಗಿಡಗಳು ದೊಡ್ಡದಾಗಿ ಬೆಳೆದು ಜನ-ಜಾನುವಾರುಗಳಿಗೆ ನೆರಳು ನೀಡುತ್ತಿವೆ. ಕೇಂದ್ರ ಬಸ್ ನಿಲ್ದಾಣ ಎದುರಿನ ಕುಮಾರ ದೇಶಮುಖ ಪ್ಯಾಲೇಸ್ ಮಾರ್ಗ ಬದಿಯಲ್ಲಿ ನೂರಾರು ವ್ಯಾಪಾರಿಗಳು ಇದೇ ಮರಗಳ ನೆರಳಲ್ಲಿ ಕುಳಿತು ತರಕಾರಿ ಮಾರುತ್ತಾರೆ. ಗಿಡಗಳನ್ನು ನಾಟಿ ಮಾಡಿದ ಇಲಾಖೆ ಕಾರ್ಯವನ್ನು ಕೊಂಡಾಡುತ್ತಾರೆ. ಸಾಮಾಜಿಕ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟಿರುವುದರಿಂದ ನೀರು ಇಂಗುವ ಮೂಲಕ ಸದಾ ವಾತಾವರಣ ತಂಪಾಗಿ ಸುತ್ತಮುತ್ತಲಿನ ಅಂತರ್ಜಲ ಮಟ್ಟವೂ ಹೆಚ್ಚಿದೆ.

    ಳು ವರ್ಷ ಹಿಂದೆ ಅರಣ್ಯ ಇಲಾಖೆ ಸಹಯೋಗದಡಿ ರಸ್ತೆಯ ಎರಡೂ ಬದಿ ಗಿಡಗಳನ್ನು ನೆಟ್ಟು ಪೋಷಿಸಿದ್ದರಿಂದ ಹೆಮ್ಮರವಾಗಿ ಬೆಳೆದಿವೆ. ಈ ಪ್ರದೇಶ ಹಸಿರಿನಿಂದ ಕೂಡಿದ್ದು, ತಂಪಾದ ವಾತಾವರಣ ಕಲ್ಪಿಸಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಮರಗಳಡಿ ಕುಳಿತು ವಿಶ್ರಾಂತಿ ಪಡೆಯುತ್ತಾರೆ. ಜಾನುವಾರುಗಳೂ ಆಶ್ರಯ ಪಡೆಯುತ್ತವೆ. ಸಾರ್ವಜನಿಕರು ಈ ಸಂಪತ್ತು ಕಾಪಾಡಿಕೊಂಡರೆ ಉತ್ತಮ ಪರಿಸರ ಜತೆಗೆ ಶುದ್ಧ ಗಾಳಿಯೂ ಸಿಗಲಿದೆ.
    | ಅಂಕುಶ ಮಚಕುರಿ, ಉಪವಲಯ ವಲಯ ಅರಣ್ಯಾಧಿಕಾರಿ, ಸಂತಪುರ

    ರಣ್ಯ ಇಲಾಖೆಯವರು ಔರಾದ್ ರಿಂಗ್ ರೋಡ್ ಬದಿಗಳಲ್ಲಿ ಗಿಡಗಳನ್ನು ನೆಟ್ಟಿದ್ದರಿಂದ 39 ಡಿಗ್ರಿ ಸೆಲ್ಸಿಯಸ್ ಬಿಸಿಲಿದ್ದರೂ ರಸ್ತೆ ಅಕ್ಕ-ಪಕ್ಕದಲ್ಲಿ ವ್ಯಾಪಾರಿಗಳು ಮರಗಳ ಆಸರೆ ಪಡೆದು ನಿರಾಯಾಸವಾಗಿ ತರಕಾರಿ, ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಗಿಡಗಳನ್ನು ಕಡಿದು ಬೇಸಿಗೆಯಲ್ಲಿ ನೆರಳು ಕೇಳಿದರೆ ಎಲ್ಲಿಂದ ಸಿಗುತ್ತದೆ? ಮರ ಕಡಿಯಲು ನಿಮಿಷ ಸಾಕು. ಆದರೆ ಬೆಳೆಸಲು ಹಲವು ವರ್ಷಗಳು ಬೇಕಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು.
    | ಚೇತನ್ ಕಪ್ಪಿಕೇರೆ, ಪರಿಸರ ಪ್ರೇಮಿ ಔರಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts