More

    ರಮಜಾನ್‍ಗೆ ನೋವಿನ ಉಡುಗೊರೆ ಕೊಟ್ಟ ಸಿಎಂ

    ಶಿಕಾರಿಪುರ: ಈ ಬಾರಿಯ ರಮಜಾನ್ ಹಬ್ಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಸ್ತ ಮುಸ್ಲಿಂ ಸಮುದಾಯಕ್ಕೆ ನೋವಿನ ಉಡುಗೊರೆ ನೀಡಿದ್ದಾರೆ ಎಂದು ಶಿಕಾರಿಪುರ ಅಂಜುಮನ್ ಇಸ್ಲಾಂ ಸಮಿತಿಯ ಅಧ್ಯಕ್ಷ ಡಾ. ಹಫೀಜ್ ಕರ್ನಾಟಕಿ ಹೇಳಿದರು.
    ಅಂಜುಮನ್ ಇಸ್ಲಾಂ ಸಮಿತಿಯಿಂದ ಶುಕ್ರವಾರ ತಾಲೂಕು ದಂಡಾ„ಕಾರಿ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಮುಸ್ಲಿಂ ಸಮುದಾಯಕ್ಕೆ ವೀರಪ್ಪ ಮೊಯ್ಲಿ ಆಡಳಿತಾವ„ಯಲ್ಲಿ ಶೇ.2 ಹಾಗೂ ಎಚ್.ಡಿ.ದೇವೇಗೌಡ ಅವರ ಅವ„ಯಲ್ಲಿ ಶೇ.2 ಒಟ್ಟು ಶೇ.4 ಮೀಸಲಾತಿ ದೊರೆತಿತ್ತು. ಸದರಿ ಮೀಸಲಾತಿಯನ್ನು ಸರ್ಕಾರ ರದ್ದುಪಡಿಸಿರುವುದು ನಮ್ಮ ಜನರಿಗೆ ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಯಾರು ಹಿಂದುಳಿದಿರುತ್ತಾರೋ ಅವರು ಅಲ್ಪಸಂಖ್ಯಾತರಾಗಿದ್ದು ಅವರಿಗೆ ಮೀಸಲಾತಿ ಪ್ರಮಾಣ ಏರಿಕೆಯಾಗಬೇಕು ಎಂದು ಜಸ್ಟೀಸ್ ರಾಜೇಂದ್ರ ಸಾಚಾರ್ ವರದಿಯಲ್ಲಿ ಹೇಳಲಾಗಿದೆ. ಆದರೆ ರಾಜ್ಯ ಸರ್ಕಾರ ಇರುವ ಮೀಸಲಾತಿಯನ್ನೇ ಕಿತ್ತು ಹಾಕಿದ್ದು ನಮ್ಮ ಸಮುದಾಯಕ್ಕೆ ವಿಶೇಷವಾಗಿ ಮಧ್ಯಮ ವರ್ಗದ ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ ಎಂದರು.
    ಮೀಸಲಾತಿ ಹಿಂಪಡೆಯುವ ಮುನ್ನ ಮುಖ್ಯಮಂತ್ರಿಗಳು ರಾಜ್ಯದಲ್ಲಿನ ಮುಸ್ಲಿಮರ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಬೇಕಿತ್ತು. ಹಾಗೆ ಮಾಡದೆ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ. ತೆಗೆದುಕೊಂಡಿರುವ ನಿರ್ಧಾರದ ಕುರಿತು ಕೇಂದ್ರ ಸರ್ಕಾರದ ಜತೆ ಮಾತನಾಡಬೇಕು. ಅಲ್ಲದೆ ಕೈಗೊಂಡಿರುವ ಆದೇಶವನ್ನು ಹಿಂಪಡೆದು ಮೀಸಲಾತಿ ಒದಗಿಸಿ ದೇಶದ ಸಂವಿಧಾನದ ಅಡಿಯಲ್ಲಿ ಬದುಕಲು ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದರೆ ಅದೇ ರಮಜಾನ್ ಹಬ್ಬಕ್ಕೆ ನೀಡುವ ಉಡುಗೊರೆಯಾಗಿದೆ ಎಂದು ಹೇಳಿದರು.
    ಸಮಿತಿ ಪ್ರಧಾನ ಕಾರ್ಯದರ್ಶಿ ಮಕ್ಬೂಲï ಅಹಮದ್, ಉಪಾಧ್ಯಕ್ಷರಾದ ಕರೀಂ ಸಾಬ್, ಹಬಿಬುಲ್ಲಾ, ಖಜಾಂಚಿ ಅಶ್ರ-ï ಉ¯್ಲÁ, ಸಮಿತಿಯ ಪದಾ„ಕಾರಿಗಳು, ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts