More

    ರಥ ಮೈದಾನದಲ್ಲಿ ಸಂಗೀತದ ರಸದೌತಣ

    ಬಸವಕಲ್ಯಾಣ: ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ಸೋಮವಾರ ಸಂಜೆ ತಾಲೂಕು ಆಡಳಿತ, ನಗರಸಭೆ ಹಾಗೂ ಬಿಕೆಡಿಬಿ ಆಶ್ರಯದಲ್ಲಿ ನಗರದ ರಥ ಮೈದಾನದಲ್ಲಿನ ಸಭಾ ಭವನದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಸಾಂಸ್ಕೃತಿಕ ಮತ್ತು ವಿಶೇಷ ರಸಮಂಜರಿ ಕಾರ್ಯಕ್ರಮ ಜನಮನ ರಂಜಿಸಿತು.

    ಸಂಗೀತ ನಿದರ್ೇಶಕ ವೀರ ಸಮರ್ಥ ಹಾಗೂ ಟೀಮ್ನ ಕಲಾವಿದರು ವಚನ ಗಾಯನ, ಕನ್ನಡ, ಹಿಂದಿ ಚಿತ್ರಗೀತೆಗಳು, ದೇಶ ಭಕ್ತಿ ಗೀತೆಗಳನ್ನು ಹಾಡಿ ಜನರನ್ನು ಸಂಗೀತದ ಅಲೆಯಲ್ಲಿ ತೇಲಾಡುವಂತೆ ಮಾಡಿದರು. ಕೆಲ ಹಾಡಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದರೆ ಮತ್ತೆ ಕೆಲ ಹಾಡುಗಳ ಮಧ್ಯದಲ್ಲಿ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆಗಳು ಮಾರ್ದನಿಸಿದವು.

    ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾಥರ್ಿಗಳು ದೇಶಭಕ್ತಿ ಹಾಡುಗಳಿಗೆ ಮಾಡಿದ ನೃತ್ಯ ಗಮನ ಸೆಳೆಯಿತು. ನಂತರ ವೀರ ಸಮರ್ಥ ಅವರು ವಿಜಯೋತ್ಸವ ವಚನದ ಮೂಲಕ ಸಂಗೀತ ಸಂಜೆಗೆ ಚಾಲನೆ ನೀಡಿದರು.

    ಶಮೀತಾ ಮಲ್ನಾಡ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಯುವಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಮೊದಲಿಗೆ ಮಧುರಾ ಪಿಸು ಮಾತಿಗೆ ಎಂಬ ಕನ್ನಡ ಹಾಡನ್ನು ಹಾಡಿದರು. ಡಾ.ಪುನೀತ್ ರಾಜಕುಮಾರ್ ಅಭಿನಯದ ಗುಡಿಸಲೇ ಆಗಲಿ ಅರಮನೆ ಆಗಲಿ ಎಂಬ ಹಾಡನ್ನು ಹಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟರು. ಅಲ್ಲದೆ ಮಹೇಶ್ವರಿ ಪಂಚಾಳ ಮತ್ತು ವಿನಾಯಕ ಅವರು ಮರಾಠಿ ಚಿತ್ರ ಸೈರಾಟ್ ಹಾಡನ್ನು ಹಾಡಿ ರಂಜಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

    ಶಾಸಕ ಶರಣು ಸಲಗರ, ನಗರಸಭೆ ಅಧ್ಯಕ್ಷೆ ಶಹಜಹಾನ್ ಶೇಖ್ ತನ್ವೀರ್ ಅಹ್ಮದ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಸಿರಗಾಪುರ, ಡಿಸಿ ಗೋವಿಂದರಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಜಿಪಂ ಸಿಇಒ ಶಿಲ್ಪಾ , ಎಎಸ್ಪಿ ಶಿವಾಂಶು ರಜಪೂತ್, ಎಸಿ ರಮೇಶ ಕೋಲಾರ, ತಹಸೀಲ್ದಾರ್ ಸಾವಿತ್ರಿ ಸಲಗರ, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಗ್ರೇಡ್-2 ತಹಸೀಲ್ದಾರ್ ಪಲ್ಲವಿ ಬೆಳಕೆರೆ, ತಾಪಂ ಇಒ ಕಿರಣ ಪಾಟೀಲ್, ಪೌರಾಯುಕ್ತ ಶಿವಕುಮಾರ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್ಐ ಅಮರ ಕುಲಕಣರ್ಿ, ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ನಗರ ಅಧ್ಯಕ್ಷ ಅರವಿಂದ ಮುತ್ತೆ ಇತರರಿದ್ದರು.

    ಸಭಾ ಭವನಕ್ಕೆ ಶಿಫ್ಟ್: ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಮಳೆ ಹಿನ್ನೆಲೆಯಲ್ಲಿ ಸಭಾ ಭವನಕ್ಕೆ ಸ್ಥಳಾಂತರ ಮಾಡಲಾಯಿತು. ನಗರ ಸೇರಿ ವಿವಿಧೆಡೆಯಿಂದ ಆಗಮಿಸಿದ ಸಹಸ್ರಾರು ಜನರು ಹಾಗೂ ವಿಶೇಷವಾಗಿ ಮಹಿಳೆಯರು ಭಾಗವಹಿಸಿ ಸಂಗೀತದ ರಸದೌತಣ ಸವಿದರು.

    ನಿನ್ನ ನೋಡಿ ಸುಮ್ನೆಂಗಿರಲಿ…: ನಿರೂಪಕಿ ಅನುಪಮ ಭಟ್ ಅವರು ಕಲಾವಿದರ ಪರಿಚಯ ಮಾಡಿಕೊಡುತ್ತ ವೇದಿಕೆಗೆ ಆಹ್ವಾನಿಸುವ ಜತೆಗೆ ಹಾಡಿಗೊಮ್ಮೆ ಭಾರತ ಮಾತಾಕಿ ಜೈ, ವಂದೇ ಮಾತರಂ ಎಂದು ಘೋಷಣೆ ಮೊಳಗಿಸಲು ಪ್ರೋತ್ಸಾಹಿಸುತ್ತಿದ್ದರು. ಗಾಯಕಿ ಐಶ್ವರ್ಯ ರಂಗರಾಜನ್ ಅವರು ನಿನ್ನ ನೋಡಿ ಸುಮ್ನೆಂಗಿರಲಿ ಹಾಡಲು ಆರಂಭಿಸಿದಾಗ ನೆರೆದ ಜನ ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿ ಖುಷಿ ಪಟ್ಟರು. ಕೇಶವ ಆನಂದ ಅವರು ಹಿಂದಿ ಹಾಡುಗಳನ್ನು ಹಾಡಿ ಜನರ ಮನ ಗೆದ್ದರು.

    ಜಗತ್ತು ಇಂದು ಭಾರತದತ್ತ ನೋಡುತ್ತಿದೆ. ಮುಂದಿನ ದಿನಗಳಲ್ಲಿ ದೇಶವು ವಿಶ್ವ ಗುರು ಆಗುವುದರಲ್ಲಿ ಸಂದೇಹವೇ ಇಲ್ಲ. ದೇಶದ ಸ್ವಾತಂತ್ರೃಕ್ಕಾಗಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ.ದೇಶಕ್ಕಾಗಿ ತ್ಯಾಗ, ಬಲಿದಾನವಾದ ವೀರರನ್ನು ಸ್ಮರಿಸಿ ಗೌರವ ಸಲ್ಲಿಸುವ ಜತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
    |ಶರಣು ಸಲಗರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts