More

    ರಡ್ಡಿ ಸಮಾಜ ಅಭಿವೃದ್ಧಿಗೆ ಸಂಘಟಿತರಾಗೋಣ

    ಚಿಟಗುಪ್ಪ: ರಡ್ಡಿ ಸಮಾಜ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ನಾವು ಸಂಘಟಿತರಾಗಬೇಕು ಎಂದು ಸಮಾಜದ ಜಿಲ್ಲಾ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ ಹೇಳಿದರು.

    ಮನ್ನಾಎಖೇಳ್ಳಿ ಗ್ರಾಮದ ಬಾಲಮ್ಮ ಮಂದಿರದಲ್ಲಿ ಭಾನುವಾರ ಬೀದರ್ ದಕ್ಷಿಣ ಕ್ಷೇತ್ರ ಹೇಮರಡ್ಡಿ ಮಲ್ಲಮ್ಮ ಸಂಘದಿಂದ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಧರ್ಮ ಜಾಗೃತಿ ಸಮಾವೇಶ ಹಾಗೂ ಅಮೆರಿಕದ ಏಷಿಯಾ ವೇದಿಕ್ ಕಲ್ಚರಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಮಂತ್ರ ಮಹಷರ್ಿ ಶ್ರೀ ಡಾ.ಎನ್.ಬಿ.ರಡ್ಡಿ ಗುರೂಜಿ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಮಾಜದ ವತಿಯಿಂದ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು.

    ಜಿಲ್ಲೆ ಸೇರಿದಂತೆ ಈ ಭಾಗದಲ್ಲಿ ರಡ್ಡಿ ಸಮುದಾಯದ ಜನ ಅಪಾರ ಸಂಖ್ಯೆಯಲ್ಲಿದ್ದು, ನಾವು ಸಂಘಟನೆಗೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯವಾಗಿದೆ. ಸಂಘಟನೆ ಬಲಿಷ್ಠವಾದಲ್ಲಿ ಸಕರ್ಾರದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಮಾಜಕ್ಕೆ ಗುರೂಜಿ ಕೊಡುಗೆ ಅಪಾರವಾಗಿದೆ. ಅವರ ಮಾರ್ಗದರ್ಶನ ಸದಾ ಇರಬೇಕೆಂದರು.

    ಸನ್ಮಾನಿತರಾದ ಮಂತ್ರ ಮಹಷರ್ಿ ಶ್ರೀ ಡಾ.ಎನ್.ಬಿ.ರಡ್ಡಿ ಗುರೂಜಿ ಆಶೀರ್ವಚನ ನೀಡಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರಡ್ಡಿ ಮಾಲಿಪಾಟೀಲ್, ಯುವ ಮುಖಂಡ ಬ್ಯಾಂಕ್ ರಡ್ಡಿ ಮಾತನಾಡಿದರು. ಮನ್ನಾಎಖೇಳ್ಳಿ ರಡ್ಡಿ ಸಮಾಜದ ಅಧ್ಯಕ್ಷ ಪ್ರಶಾಂತ ರಡ್ಡಿ ಜವಳಗಿ ಅಧ್ಯಕ್ಷತೆ ವಹಿಸಿದ್ದರು.

    ಮುತ್ತಂಗಿ ಗ್ರಾಪಂ ಅಧ್ಯಕ್ಷ ಮಲ್ಲಿಕಾಜರ್ುನ ಮದರಗಿ, ಉಡಬಾಳ ಗ್ರಾಪಂ ಅಧ್ಯಕ್ಷ ನರಸರಡ್ಡಿ, ಪಿಕೆಪಿಎಸ್ ಅಧ್ಯಕ್ಷ ಭೀಮಣ್ಣ ವರವಟ್ಟಿ, ಸಮಾಜದ ಮುಖಂಡರಾದ ನಾಗೇಂದ್ರಪ್ಪ ವರವಟ್ಟಿ, ಅರುಣ ಸಂಗರಡ್ಡಿ, ಸಂತೋಷ ಕಮಲಾಪುರ, ಸುಭಾಷ ಅಲ್ಲರಡ್ಡಿ, ವೈಜಿನಾಥ ಸಾಗ, ನಾಗೇಂದ್ರ ಜವಳಗಿ, ಈಶ್ವರ ಬಸರಡ್ಡಿ, ವಿಶ್ವನಾಥ ವರವಟ್ಟಿ, ರಾಜಕುಮಾರ ಬಿರಾದಾರ್, ಯಲ್ಲಾಲಿಂಗ ರಡ್ಡಿ, ಪ್ರಕಾಶ ರಡ್ಡಿ ಬನ್ನಳ್ಳಿ, ಸಂಜೀವರಡ್ಡಿ ಮಂಗಲಗಿ, ಮಹಾನಂದರಡ್ಡಿ, ಸಂಗ್ರಾಮಪ್ಪ ಹುಣಚಗೇರಾ, ಹಣಮಂತ ಮರಕುಂದ, ಮಹಾರುದ್ರಪ್ಪ ಅಣದೂರೆ, ವಿಜಯಕುಮಾರ ಬೀದರ್, ಸಮಾಜದ ಉಪಾಧ್ಯಕ್ಷ ನಾಗೇಶ ತರನಳ್ಳಿ, ಕಾರ್ಯದಶರ್ಿ ವಿದ್ಯಾಸಾಗರ ಸಾಗ, ಸದಸ್ಯರಾದ ಪ್ರದೀಪ ಚಿಟ್ಟ, ಲೋಕೇಶ ಅಲ್ಲರಡ್ಡಿ, ಅಮರ ಬಿರಾದಾರ್, ಅಂಬರೀಶ ಸಂಗಾರಡ್ಡಿ, ವೈಜಿನಾಥ ಕ್ಯಾತ, ಗೌರೀಶ ಬಿರಾದಾರ್, ಅನೀಲಕುಮಾರ ವರವಟ್ಟಿ, ಲಕ್ಷ್ಮೀಕಾಂತ ಬಸರಡ್ಡಿ ಇದ್ದರು.

    ಲಕ್ಷ್ಮೀ ಸಾಗ ಸ್ವಾಗತಿಸಿದರು. ರಮೇಶ ಕ್ಯಾತ ನಿರೂಪಣೆ ಮಾಡಿದರು. ರಾಜಕುಮಾರ ಜವಳಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts