More

    ರಕ್ತದ ಉತ್ಪತ್ತಿ ಸಾಧ್ಯವಿಲ್ಲ

    ಚಿತ್ರದುರ್ಗ: ರಕ್ತದಾನದಿಂದ ಜೀವ ರಕ್ಷಣೆ ಸಾಧ್ಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ನಗರದ ಡಾನ್‌ಬಾಸ್ಕೋ ಪ ದವಿ ಕಾಲೇಜಿನಲ್ಲಿ ಸೋಮವಾರ, ಜಿಲ್ಲಾಆರೋಗ್ಯ ಇಲಾಖೆ, ರಕ್ತನಿಧಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಏರ್ಪಡಿ ಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದ ಉತ್ಪತ್ತಿ ಸಾಧ್ಯವಿಲ್ಲ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ ತುರ್ತು ಸಂ ದರ್ಭದಲ್ಲಿ ಜೀವಗಳನ್ನು ಕಾಪಾಡಲು ಸಾಧ್ಯವಾಗಲಿದೆ ಎಂದರು.
    ಡಾನ್‌ಬಾಸ್ಕೋ ಪದವಿ ಕಾಲೇಜಿನ ಡಾ.ಫಾದರ್ ಜೋ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿದರು. ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ಉಮೇಶ್, ಡಾನ್‌ಬಾಸ್ಕೋ ಪದವಿ ಕಾಲೇಜು ಉಪಪ್ರಾಂಶುಪಾಲ ರೆ.ಬೆನ್ನಿ, ಆರೋಗ್ಯ ಮೇಲ್ವಿಚಾರಕ ಎಚ್.ಆಂಜನೇಯ, ಕ್ಷೇತ್ರ ಆರೋಗ್ಯಾಧಿಕಾರಿ ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎ.ಗಂಗಾಧರರೆಡ್ಡಿ, ಗುರುಮೂರ್ತಿ, ಜಿಲ್ಲಾಸ್ಪತ್ರೆ ಯ ಡಾ.ಪ್ರಜ್ವಲ್, ಜಿಲ್ಲಾ ರಕ್ತನಿಧಿ ಕೇಂದ್ರದ ಹಿರಿಯ ಲ್ಯಾಬ್‌ಟೆಕ್ನಿಷಿಯನ್ ಅಧಿಕಾರಿಗಳಾದ ಸಿ.ವಿ.ಮುರಳೀಧರ, ಚಂದುಹಿರೇಮಠ್, ಎನ್ ಎಸ್‌ಎಸ್ ಸಂಯೋಜಕ ಡಾ.ಧನಕೋಟಿ, ಯುತ್‌ರೆಡ್ ಕ್ರಾಸ್ ಸಂಯೋಜಕ ರಿಂಕಿ ಸುರೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts