More

    ರಕ್ತದಾನದಿಂದ ರೋಗಮುಕ್ತಿ

    ಸೋಮವಾರಪೇಟೆ: ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ರೋಗಮುಕ್ತ ಜೀವನ ಮಾಡಬಹುದು ಎಂದು ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ಅಭಿಪ್ರಾಯಪಟ್ಟರು.


    ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಚೌಡ್ಲು ಗ್ರಾಪಂ ವತಿಯಿಂದ ಚೌಡ್ಲು ಸಹಕಾರ ಸಂಘದ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.


    ರಕ್ತದಾನದಿಂದ ಶರೀರದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಶರೀರದಲ್ಲಿ 5ರಿಂದ 6 ಲೀಟರ್ ರಕ್ತ ಇರುತ್ತದೆ. ಕೇವಲ 350 ಮಿ.ಲೀ. ರಕ್ತ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.


    ಮಡಿಕೇರಿ ರಕ್ತನಿಧಿಗೆ ತಿಂಗಳಿಗೆ 300 ಯೂನಿಟ್ ರಕ್ತದ ಅವಶ್ಯಕತೆ ಇದೆ. ಸ್ವಯಂಪೇರಿತ ರಕ್ತದಾನ ಮಾಡುವ ಮೂಲಕ ದಾನಿಗಳು ಇನ್ನೊಂದು ಜೀವ ಉಳಿಸುವ ಸತ್ಕಾರ್ಯ ಮಾಡಬೇಕು ಎಂದರು.


    ಚೌಡ್ಲು ಗ್ರಾಪಂ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ಪಿಡಿಒ ಪೂರ್ಣಕುಮಾರ್, ಗೌಡಳ್ಳಿ ಪ್ರಾಥಮಿಕ ಅರೋಗ್ಯ ಕೆಂದ್ರದ ಆಡಳಿತ ವೈದ್ಯಾಧಿಕಾರಿ ಇಂದೂಧರ, ಆರೋಗ್ಯ ನಿರೀಕ್ಷಕ ಮಹೇಶ್, ಸಿಬ್ಬಂದಿ ಭೂಮಿಕಾ, ಧರಣೇಶ್ ಇತರರು ಇದ್ದರು. 30 ಜನ ರಕ್ತದಾನ ಮಾಡಿದರು.

    ಚಿತ್ರ:13ಎಸ್‌ಪಿಟಿ2-
    ಸೋಮವಾರಪೇಟೆ ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಚೌಡ್ಲು ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ ಉದ್ಘಾಟಿಸಿದರು. ಮಹೇಶ್ ತಿಮ್ಮಯ್ಯ, ಕೆ.ಪಿ.ಪರಮೇಶ್, ಡಾ.ಕರುಂಬಯ್ಯ, ಡಾ.ಇಂದೂಧರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts