More

    ರಂಭಾಪುರಿ ಶ್ರೀಗಳ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮಾರಂಭ 9 ರಿಂದ 

    ದಾವಣಗೆರೆ: ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯರ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭ, ನಗರದ ಅಭಿನವ ರೇಣುಕ ಮಂದಿರದಲ್ಲಿ ಆ.9ರಿಂದ 13ರ ವರೆಗೆ ನಡೆಯಲಿದೆ.
    ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ ದಾವಣಗೆರೆ ಜಿಲ್ಲಾ ಘಟಕದ ಆಶ್ರಯದಲ್ಲಿ ನಿತ್ಯ ಸಂಜೆ 6-30ಕ್ಕೆ ಜನಜಾಗೃತಿ ಧರ್ಮ ಸಮಾವೇಶ , ಬೆಳಗ್ಗೆ 8-30ಕ್ಕೆ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ದೇವರಮನೆ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಆ.9ರಂದು ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಉದ್ಯಮಿ ಅಣಬೇರು ರಾಜಣ್ಣ ಭಾಗವಹಿಸುವರು. ದಾವಣಗೆರೆ ರಾಧಾಕೃಷ್ಣ ಗುಪ್ತ ಜ್ಯುವೆಲರ್ಸ್‌ನ ರಾಜನಹಳ್ಳಿ ರಮೇಶಬಾಬು ಅವರಿಗೆ ಸಮಾಜಸೇವಾ ವಿಭೂಷಣ ಪ್ರಶಸ್ತಿ ನೀಡಲಾಗುವುದು.
    ಆ.10ರಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ದಾಖಲೆ ಸಂಪುಟ-3 ಅನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಬಿಡುಗಡೆಗೊಳಿಸುವರು. ಡಿ.ಎಚ್.ಯು.ಸಿ.ಬಿ. ಬ್ಯಾಂಕ್ ಅಧ್ಯಕ್ಷ ಎನ್.ಎ.ಮುರುಗೇಶ ಆರಾಧ್ಯ ಇವರಿಗೆ ಸಹಕಾರಿ ಸೇವಾ ಭೂಷಣ ಪ್ರಶಸ್ತಿ ನೀಡಲಾಗುವುದು.
    ಆ.11ರಂದು ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕಿ ಡಾ.ಪ್ರಭಾ ಮಲ್ಲಿಕಾರ್ಜುನ ಇವರಿಗೆ ಜನಸೇವಾ ಶಿರೋಮಣಿ ಪ್ರಶಸ್ತಿ, ಆ.12ರಂದು ಡಾ.ವಿ.ಜೆ.ಮಲ್ಲಿಕಾರ್ಜುನ ಇವರಿಗೆ ವೈದ್ಯ ರತ್ನಾಕರ ಪ್ರಶಸ್ತಿ ನೀಡಲಾಗುವುದು.
    ಆ.13ರಂದು ಸಮಾರೋಪ ನಡೆಯಲಿದ್ದು ಬಂಕಾಪುರದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು, ಉದ್ಯಮಿ ಎಸ್.ಎಸ್.ಗಣೇಶ, ವೀರೇಶ ಹನಗವಾಡಿ, ಎಚ್.ಬಿ.ಮಂಜಪ್ಪ, ಬಿ.ಚಿದಾನಂದಪ್ಪ ಭಾಗವಹಿಸುವರು. ಶ್ರೀಶೈಲ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಜಿ.ಎಸ್.ಅನಿತ್ ಕುಮಾರ್ ಇವರಿಗೆ ಶಿಕ್ಷಣ ಸೇವಾ ಧುರೀಣ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts