More

    ರಂಗೇರಿದೆ ವಕೀಲರ ಸಂಘದ ಚುನಾವಣೆ

    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

    ರಾಜ್ಯದಲ್ಲೇ ಪ್ರಮುಖ ವಕೀಲರ ಸಂಘಗಳ ಪೈಕಿ ಒಂದಾದ ಹುಬ್ಬಳ್ಳಿ ಬಾರ್ ಅಸೋಸಿಯೇಶನ್ ಗದ್ದುಗೆಗೆ ಏ. 23ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಸ್ಪರ್ಧಾಳುಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಕೋವಿಡ್ ಕರಿಛಾಯೆಯ ನಡುವೆಯೂ ಅಭ್ಯರ್ಥಿಗಳು ‘ನಾ ಮುಂದು ತಾ ಮುಂದು’ ಎಂಬಂತೆ ತುರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.

    ಬೆಂಗಳೂರಿನ ನಂತರ ರಾಜ್ಯದ ಎರಡನೇ ಅತಿದೊಡ್ಡ ವಕೀಲರ ಸಂಘ ಇದಾಗಿದೆ. ಒಟ್ಟು 1680 ಸದಸ್ಯ ಬಲ ಹೊಂದಿದೆ. ಇದರಲ್ಲಿ 1274 ಸದಸ್ಯರು ಈ ಬಾರಿಯ ಚುನಾವಣೆಗೆ ಮತದಾನದ ಅರ್ಹತೆ ಪಡೆದಿದ್ದಾರೆ. ಎರಡು ವರ್ಷಕ್ಕೊಮ್ಮೆ ಚುನಾವಣೆ ಮೂಲಕ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತದೆ.

    2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಶೋಕ ಬಳಿಗಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗುರು ಹಿರೇಮಠ ಆಯ್ಕೆಯಾಗಿದ್ದರು. 2020ರಲ್ಲಿ ನಡೆಯಬೇಕಾಗಿದ್ದ ಚುನಾವಣೆಯನ್ನು ಕರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈಗ ಈ ಚುನಾವಣೆ ಜರುಗುತ್ತಿದೆ.

    ಅಧ್ಯಕ್ಷ ಸ್ಥಾನಕ್ಕಾಗಿ ಅಶೋಕ ಬಳಿಗಾರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹುಬ್ಬಳ್ಳಿಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ವಣಗೊಂಡು ಈಚೆಗೆ ಉದ್ಘಾಟನೆಗೊಂಡಿದೆ. 122 ಕೋಟಿ ರೂ. ವೆಚ್ಚದಲ್ಲಿ ತಲೆಎತ್ತಿದ ಈ ಸಂಕೀರ್ಣವು ಕೇಂದ್ರೀಕೃತ ಎಸಿ ವ್ಯವಸ್ಥೆ ಹೊಂದಿದೆ. ಏಷ್ಯಾದಲ್ಲೇ ತಾಲೂಕು ಮಟ್ಟದ ಅತಿ ದೊಡ್ಡ ನ್ಯಾಯಾಲಯ ಎಂಬ ಹೆಗ್ಗಳಿಕೆಯೂ ಇದರದ್ದಾಗಿದೆ. ಇಂತಹ ಭವ್ಯವಾದ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ನಡೆದಿದ್ದು ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಂಬ ಹೆಮ್ಮೆ ಬಳಿಗಾರದ್ದಾಗಿದೆ. 9 ಕೋಟಿ ರೂ. ವೆಚ್ಚದಲ್ಲಿ ಬಾರ್ ಅಸೋಸಿಯೇಶನ್ ಕಟ್ಟಡವನ್ನು ಕೂಡ ನ್ಯಾಯಾಲಯ ಆವರಣದಲ್ಲಿ ನಿರ್ವಿುಸಲಾಗಿದ್ದು, ಇದು ರಾಜ್ಯದಲ್ಲೇ ಅತಿದೊಡ್ಡ ವಕೀಲರ ಸಂಘದ ಕಟ್ಟಡ ಎನ್ನಲಾಗಿದೆ. ಈ ಆವರಣದಲ್ಲೇ ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಆರಂಭಿಸಲಾಗಿದೆ. ಈ ಎಲ್ಲ ಕಾರ್ಯಗಳಲ್ಲಿ ತಮ್ಮ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ, ಈ ರೀತಿ ಇನ್ನಷ್ಟು ಉತ್ತಮ ಕಾರ್ಯ ಮಾಡಲು ತಮ್ಮನ್ನು ಮರು ಆಯ್ಕೆ ಮಾಡಬೇಕು ಎಂಬ ವಾದ ಮುಂದಿಡುತ್ತಾರೆ ಬಳಿಗಾರ. ಈ ಹಿಂದೆ 9 ಬಾರಿ ಅಧ್ಯಕ್ಷರಾಗಿದ್ದ ಸಿ.ಆರ್. ಪಾಟೀಲ ಅವರು 10ನೇ ಬಾರಿ ಅಧ್ಯಕ್ಷ ಹುದ್ದೆಗೇರಲು ಬಯಸಿ ಕಣಕ್ಕಿಳಿದಿದ್ದಾರೆ. ಆರ್​ಎಸ್​ಎಸ್ ಹಿನ್ನೆಲೆಯುಳ್ಳ ಇಬ್ಬರ ನಡುವೆಯೇ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಮೂರು ಸಾವಿರ ಮಠದ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಹಾಗೂ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆಗಿರುವ ಹನುಮಂತ ಶಿಗ್ಗಾಂವ ಅವರಿಗೆ ಅಶೋಕ ಅಣವೇಕರ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಣವೇಕರ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts