More

    ರಂಗಭೂಮಿ ಕಲೆ ಮುಂದುವರಿಯಲಿ

    ಹೊನ್ನಾವರ: ಮಾನಸಿಕ ಪರಿಸರ ಕೆಟ್ಟಲ್ಲಿ, ಸಾಂಸ್ಕೃಕ ಮತ್ತು ಭೌತಿಕ ಪರಿಸರ ಹಾಳಾಗುವುದು. ಸಾಂಸ್ಕೃಕ ಪ್ರದೂಷಣಗಳನ್ನು ಕಡಿಮೆ ಮಾಡಲು ರಂಗಭೂಮಿ ಕಾರ್ಯಕ್ರಮಗಳು ಮುಂದುವರಿಯಬೇಕು ಎಂದು ಹೆಗ್ಗೋಡಿನ ನೀನಾಸಂ ನಿರ್ದೇಶಕ ಕೆ.ವಿ. ಅಕ್ಷರ ಹೇಳಿದರು.

    ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಅವರು ಮಾತನಾಡಿದರು.

    ರಾಮಾಯಣ, ಮಹಾಭಾರತದ ಅಂಶಗಳು ಈ ತಲೆಮಾರಿನ ಮಕ್ಕಳಿಗೆ ಮರೀಚಿಕೆಯಾಗಿವೆ. ಪೌರಾಣಿಕ ಹಿನ್ನೆಲೆಯ ಕಥಾನಕಗಳು ಮುಂದಿನ ತಲೆಮಾರಿಗೆ ಮುಂದುವರಿಯಬೇಕು ಎಂದರು.

    ಸಭಾ ಕಾರ್ಯಕ್ರಮ ಉದ್ಘಾಟಿಸಿದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಸಮಾಜದ, ನಾಡಿನ, ದೇಶ-ವಿದೇಶಗಳ ಬಹುತ್ವವನ್ನು, ವೈವಿಧ್ಯಮಯ ಕಲಾಪ್ರಕಾರಗಳನ್ನು ಒಂದೆಡೆ ತಂದು ಈ ಭಾಗದ ಕಲಾ ಪ್ರೇಕ್ಷಕರಿಗೆ ಪ್ರದರ್ಶಿಸುವ ಈ ಪ್ರಯತ್ನ ಅನನ್ಯ, ಅನುಕರಣೀಯವಾದುದು ಎಂದರು.

    ಕಲಾವಿದರಾದ ಡಾ. ಶ್ರೀಧರ ಭಂಡಾರಿ ಪುತ್ತೂರು, ರಮಾನಂದ ಬನಾರಿ, ಎಂ.ಎನ್. ಹೆಗಡೆ ಹಳವಳ್ಳಿ, ಮತ್ತು ಮನ್ಮಥಕುಮಾರ್ ಸತ್ಪತಿ ಅವರ ಕಲಾ ಸೇವೆಯನ್ನು ಸ್ಮರಿಸಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಸನ್ಮಾನಿಸಲಾಯಿತು.

    ಹಿರಿಯ ವಿದ್ವಾಂಸ ಜಿ.ಎಸ್. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಂಭು ಗೌಡ, ಬಿಜೆಪಿ ಮುಖಂಡ ಎಂ.ಜಿ. ನಾಯ್ಕ ಮಾತನಾಡಿದರು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಹೆಗಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts