More

    ರಂಗಭೂಮಿ ಆಸಕ್ತಿ ಮಕ್ಕಳಲ್ಲಿ ಬೆಳೆಸಿ

    ಚಿತ್ರದುರ್ಗ: ತಾನಲ್ಲದ ಪಾತ್ರವನ್ನು ಪ್ರತಿನಿಧಿಸುವವನೇ ನಿಜವಾದ ನಟನೆಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸೃತ ಹಿರಿಯ ಕಲಾವಿದ ಜಂಬೂನಾಥ್ ಹೇಳಿದರು.
    ನಗರದ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದರು.
    ನಟ ತನ್ನ ಪಾತ್ರದ ಮೂಲಕ ಸಮಾಜದ ಬದಲಾವಣೆಗೆ ಕಾರಣನಾಗಬಲ್ಲ. ಗುಬ್ಬಿವಿರಣ್ಣ, ಬಿ.ವಿ.ಕಾರಂತ,ಪ್ರಸನ್ನ, ಗಿರೀಶ್ ಕಾರ್ನಾಡ್, ಅಶೋಕ ಬಾದರದಿನ್ನಿ ಮತ್ತಿತರ ರಂಗ ಕರ್ಮಿಗಳು ನಮ್ಮ ನಾಡಿನ ರಂಗಭೂಮಿಯನ್ನು ಶ್ರೀಮಂತಗೊಳ್ಳಿಸಿದ್ದಾರೆ. ಮಕ್ಕಳಲ್ಲಿಂದು ರಂಗಭೂಮಿಯಡೆ ಆಸಕ್ತಿ ಮೂಡಿಸಲು ಶಿಕ್ಷಕರು, ಪಾಲಕರು ಶ್ರಮಿಸಬೇಕಿದೆ ಎಂದರು.
    ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಮಾತನಾಡಿ, ರಂಗಭೂಮಿ ಸದಾ ಹರಿಯವ ನದಿ ಇದ್ದಂತೆ.ನಾವು ಎಷ್ಟೇ ಆಧುನಿಕತೆಯ ಕಡೆಗೆ ಸಾಗಿದರು ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
    ಹಿರಿಯ ರಂಗ ಕಲಾವಿದ ರಚನಾ ಮಂಜಣ್ಣ ಹಾಗೂ ವೀರೇಶ್ ಅವರನ್ನು ಗೌರವಿಸಲಾಯಿತು. ಜ್ಯೋತಿ ಬಾದರದಿನ್ನಿ ಅವರು ನಾರ್ವೆ ದೇಶದ ಜಾನ್‌ಪೋಸ್ಸೇ ಅವರು ನೀಡಿರುವ ಈ ವರ್ಷದ ರಂಗ ಸಂದೇಶ ವಾಚಿಸಿದರು.
    ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ‌್ಯೆ ಪ್ರೊ.ಎಂ.ಆರ್.ಜಯಲಕ್ಷ್ಮೀ, ಉಪಪ್ರಾಚಾರ್ಯ ಎಚ್.ಎನ್.ಶಿವಕುಮಾರ, ಉಪನ್ಯಾಸಕ ಡಾ.ಹನುಮಂತ ರೆಡ್ಡಿ, ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಅಧ್ಯಕ್ಷೆ ಅನಸೂಯಾ ಬಾದರದಿನ್ನಿ, ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಕಲಾವಿದರಾದ ಗುರುಕಿರಣ, ರಾಘವೇಂದ್ರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts