More

    ಯೋಧ ಮಹಾದೇವ ಅಮರ್ ರಹೇ

    ಮಲನಗರ: ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ದೆಸೂನ್ ಆಸ್ಪತ್ರೆಯಲ್ಲಿ ಶನಿವಾರ ಅನಾರೋಗ್ಯದಿಂದ ನಿಧನರಾಗಿದ್ದ ತಾಲೂಕಿನ ಮುಗರ್್(ಕೆ) ಗ್ರಾಮದ ಬಿಎಸ್ಎಫ್ ಯೋಧ ಮಹಾದೇವ ಜಟಿಂಗರಾವ ಕಾಳೇಕರ್ ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ಸಕಲ ಸಕರ್ಾರಿ ಗೌರವಗಳೊಂದಿಗೆ ನೆರವೇರಿತು.

    ನಸುಕಿನ ಜಾವ 3 ಗಂಟೆಗೆ ಯೋಧನ ಪಾಥರ್ಿವ ಶರೀರ ಹೈದರಾಬಾದ್ನಿಂದ ಸ್ವಗ್ರಾಮಕ್ಕೆ ಬಂದು ತಲುಪಿತು. ಸುಮಾರು 4 ತಾಸುಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಆಪ್ತರು ಮತ್ತು ಬಂಧು ಮಿತ್ರರು ಪಾಥರ್ಿವ ಶರೀರದ ಮುಂದೆ ಬಿಕ್ಕಿಬಿಕ್ಕಿ ಅಳುವ ದೃಶ್ಯ ಕಂಡುಬಂತು.

    ಬಿಎಸ್ಎಫ್ ಸೈನಿಕರ ತುಕಡಿಯ ಜತೆಗೆ ಬಂದಿದ್ದ ಸೈನಿಕ ವಾಹನವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. 12.15ಕ್ಕೆ ಯೋಧ ಮಹಾದೇವ ಅವರ ಪಾಥರ್ಿವ ಶರೀರವನ್ನು ವಾಹನದಲ್ಲಿ ಇರಿಸಲಾಯಿತು. ಸಾವಿರಾರು ಸಂಖ್ಯೆ ಅಭಿಮಾನಿ ಬಳಗ ಮತ್ತು ಯುವಕರು ಕೂಗಿದ ಭಾರತ ಮಾತಾ ಕೀ ಜೈ, ಮಹಾದೇವ ಅಮರ ರಹೇ ಎನ್ನುವ ಘೋಷಣೆ ದಾರಿಯುದ್ದಕ್ಕೂ ಮಾರ್ದನಿಸಿತು.

    ಗ್ರಾಮದ ಮುಖ್ಯ ರಸ್ತೆಯಿಂದ ಮೆರವಣಿಗೆ ಹೊರಟು ಕಮಲನಗರ ಪಟ್ಟಣಕ್ಕೆ ಬಂದು ತಲುಪಿತು. ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ, ಪ್ರವಾಸಿ ಮಂದಿರ, ಅಲ್ಲಮಪ್ರಭು ವೃತ್ತ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಮುಂಭಾಗದ ರಸ್ತೆ ಮಾರ್ಗವಾಗಿ ಗ್ರಾಮಕ್ಕೆ ಬಂದು ತಲುಪಿತು.

    ವಾಹನದ ಎದುರುಗಡೆ ಯುವಕರು ಸೈಕಲ್ ರ್ಯಾಲಿ ನಡೆಸಿ ಘೋಷಣೆ ಕೂಗಿದರು. ಗ್ರಾಮದ ಪಕ್ಕದ ಸ್ಮಶಾನ ಭೂಮಿಗೆ ಮಾಧವರಾವ ಕಾಳೇಕರ್ ಅವರ ಪಾಥರ್ೀವ ಶರೀರವನ್ನು ಕೊಂಡೊಯ್ಯಲಾಯಿತು. ಬಿಎಸ್ಎಫ್ ಇನ್ಸ್ಪೆಕ್ಟರ್ ಪ್ರಶಾಂತ ಪಾಂಡೆ, ಕಾನ್ಸ್ಟೆಬಲ್ಗಳಾದ ಸಮರ್ ಕುಮಾರ, ಎಂ.ರಾಮದಾಸ, ವೈ.ಸಾಗರ ಅವರು ಸಲಾಮಿ ನೀಡಿ 3 ಸುತ್ತಿನ ಗುಂಡು ಹಾರಿಸಿದರು. ಮೃತ ಯೋಧನ ಮಗ ಸುಮಿತ್ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts