More

    ಯೋಧರ ಸೇವೆಯಿಂದ ಜನ ನೆಮ್ಮದಿ

    ಕೋಲಾರ: ಸೈನಿಕರ ನಿಸ್ವಾರ್ಥ ಸೇವೆ ಮತ್ತು ತ್ಯಾಗದ ಫಲವಾಗಿ ಜನ ನೆಮ್ಮದಿಯಿಂದ ಇರುವಂತಾಗಿದೆ. ಸೈನಿಕರು ಗಡಿಯಲ್ಲಿ ಹಗಲಿರುಳೆನ್ನದೆ ಕಾಯುತ್ತಿರುವುದರಿಂದಲೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಯೋಗ ಶಿಕ್ಷಕ ಸುರೇಶ್ ತಿಳಿಸಿದರು.
    ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ನಗರದ ವಕೀಲರ ಭವನ ಶಾಖೆಯ ವತಿಯಿಂದ ೨೪ನೇ ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಮಾಜಿ ಯೋಧರಾದ ಕೊಂಡರಾಜನಹಳ್ಳಿ ರಘುನಾಥ್ (ಎಂಇಜಿ) ಹಾಗೂ ವಿಟಪನಹಳ್ಳಿ ನಾರಾಯಣಸ್ವಾಮಿ (ಬಿಎಸ್‌ಎಫ್)ರನ್ನು ಸನ್ಮಾನಿಸಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಮಾತನಾಡಿ, ದೇಶ ಕಾಯುವ ಯೋಧರಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯುದ್ಧದ ಸಂದರ್ಭ ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬದವರಲ್ಲಿ ಅನಾಥಭಾವ ಬಾರದಂತೆ ಸಮಾಜ ವರ್ತಿಸಬೇಕು ಎಂದರು.
    ಮಾಜಿ ಯೋಧರಾದ ಕೊಂಡರಾಜನಹಳ್ಳಿ ರಘುನಾಥ್ ಮತ್ತು ವಿಟ್ಟಪ್ಪನಹಳ್ಳಿ ನಾರಾಯಣಸ್ವಾಮಿ ತಮ್ಮ ಸೇವಾ ಅವಧಿಯಲ್ಲಿ ನಡೆದ ಘಟನೆಗಳ ಬಗ್ಗೆ ಹಾಗೂ ಸೇನಾ ವೃತ್ತಿ ಅನುಭವವನ್ನು ವಿವರವಾಗಿ ತಿಳಿಸಿದರು.
    ಯೋಗ ಶಿಕ್ಷಕರಾದ ಮಾರ್ಕೊಂಡಪ್ಪ, ಶ್ರೀನಿವಾಸ್, ರವಿ, ಯೋಗ ಬಂಧುಗಳಾದ ಚಂದ್ರು, ರಾಮಮೂರ್ತಿ, ಕೃಷ್ಣೇಗೌಡ, ವೆಂಕಟೇಶ್, ಉಮಾಶಂಕರ್, ಸಾಯಿ, ವೆಂಕಟ್‌ರಾಮ್, ಮಂಜುನಾಥ್, ರಾಜೇಶ್ವರಿ, ಲಕ್ಷ್ಮಿ, ಲತಾ, ಆಶಾ, ಮವÁ್ತ, ರಾಣಿ, ಸತೀನಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts