More

    ಯೋಗ ನಿತ್ಯದ ಚಟುವಟಿಕೆಯಾಗಲಿ

    ರಾಮದುರ್ಗ: ಯೋಗ, ಪ್ರಾಣಾಯಾಮದಿಂದ ಶಾರೀರಿಕ, ದೈಹಿಕ ಸಮತೋಲನ ಸಾಧ್ಯವಿದೆ. ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರೂ ಯೋಗವನ್ನು ನಿತ್ಯ ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಕಿವಿಮಾತು ಹೇಳಿದ್ದಾರೆ.

    ಪಟ್ಟಣದ ಪತಂಜಲಿ ಯೋಗ ಸಮಿತಿಯ ನೇತೃತ್ವದಲ್ಲಿ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಒಂದು ವಾರ ನಡೆಸಿದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು. ರಾಮದೇವ ಗುರೂಜಿ ಹೆಸರಿನಲ್ಲಿ ಯೋಗ ಭವನ ನಿರ್ಮಿಸಲು ಯೋಗ ಸಮಿತಿ ನಿರ್ಧರಿಸಿದ್ದು, ಯೋಗ ಭವನ ನಿರ್ಮಾಣಕ್ಕೆ ನಮ್ಮ ತಾಯಿ ದಿ. ಈರಮ್ಮ ಶಿವಲಿಂಗಪ್ಪ ಯಾದವಾಡ ಅವರ ಸ್ಮರಣಾರ್ಥ 1 ಲಕ್ಷ ರೂ. ಅನುದಾನ ನೀಡುವುದಾಗಿ ಅವರು ಘೋಷಿಸಿದರು.

    ಪತಂಜಲಿ ಯೋಗ ಸಮಿತಿಯ ಉತ್ತರ ಕರ್ನಾಟಕ ಮಂಡಲ ಪ್ರಮುಖ ಕಿರಣಜೀ ಮನವಳಕರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಜೇಶ ಬಿಳಗಿ, ಪುರಸಭೆ ಅಧ್ಯಕ್ಷ ಶಂಕ್ರೆಪ್ಪ ಬೆನ್ನೂರ, ಮೋಹನ ಬಾಗೇವಾಡಿ, ಪುರುಷೋತ್ತಮ್ಮಜೀ ಪಟೇಲ್, ಜ್ಯೋತಿಭಾ ಬಾದವಾಣ್ಣಕರ, ಸಂಗೀತಾ ಕೋನಾಪುರೆ, ಕಲ್ಯಾಣಿ ದೇಸಾಯಿ, ರೇವಪ್ಪ ಕೋಟೂರ, ರಾಮದುರ್ಗ ಆರ್.ಕೆ. ಯೋಗಬಂಧುಗಳ ಸಮಿತಿ ಅಧ್ಯಕ್ಷೆ ಮಹಾದೇವಿ ವನಕುದರಿ, ಜೆಸಿಐ ಸಂಸ್ಥೆಯ ಅಧ್ಯಕ್ಷ ಈರಣ್ಣ ಬೆನಕಟ್ಟಿ, ಪತಂಜಲಿ ಯೋಗ ಸಮಿತಿಯ ಮಹಿಳಾ ಅಧ್ಯಕ್ಷೆ ಲತಾ ಪಟ್ಟಣ, ವಿರೂಪಾಕ್ಷಿ ಗಂಗಣ್ಣವರ, ನಾರಾಯಣ ಹಳ್ಳಿಕೇರಿ, ಮಂಜುನಾಥ ಹಡಪದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts