More

    ಯುವ, ಹೊಸಬರಿಂದ ಹೆಚ್ಚು ಮತದಾನವಾಗಲಿ

    ಹುಣಸೂರು: ಯುವ ಮತ್ತು ಹೊಸ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಮತಗಟ್ಟೆ ಅಧಿಕಾರಿ(ಬಿಎಲ್‌ಒ)ಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಸಲಹೆ ನೀಡಿದರು.

    ಈ ಹಿಂದೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಆಯೋಗ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಶಸ್ತಿ ಪತ್ರ ಮತ್ತು ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಚುನಾವಣೆ, ಮತದಾನ ಎನ್ನುವುದು ಪ್ರಜಾಪ್ರಭುತ್ವದ ಜೀವಾಳವಿದ್ದಂತೆ. ಸ್ವಾತಂತ್ರೃ ನಂತರ ದೇಶದಲ್ಲಿ ನಡೆದ ಚುನಾವಣೆಯಲ್ಲಿ ಮತದಾನದ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರುಮುಖ ಕಂಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಗಳು ನಡೆದಿವೆ ಎಂದರು.

    ವರ್ಷಕ್ಕೆ ಒಂದು ಬಾರಿ ಗುರುತಿನ ಚೀಟಿಗಾಗಿ ನಡೆಯುತ್ತಿದ್ದ ನೋಂದಣಿ ಕಾರ್ಯ ಇದೀಗ ವರ್ಷದಲ್ಲಿ ನಾಲ್ಕು ಬಾರಿ ನಡೆಯುತ್ತಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಮತದಾರರು ದೇಶಕಟ್ಟುವ ಕಾರ್ಯದಲ್ಲಿ ಪಾಲ್ಗೊಳ್ಳುವುದು ಅವಶ್ಯಕ. ಹಾಗಾಗಿ ಯುವಮತದಾರರು ಮತಗಟ್ಟೆಗೆ ಬರುವಂತೆ ಮಾಡುವಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಬಿಎಲ್‌ಒಗಳು ಹೆಚ್ಚಿನ ಆದ್ಯತೆ ನೀಡಿ ಕತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
    ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ, ತಾಲೂಕಿನಲ್ಲಿ ಪ್ರಸ್ತುತ 5 ಸಾವಿರಕ್ಕೂ ಹೆಚ್ಚು ಹೊಸ ಮತದಾರರಿದ್ದಾರೆ. ಒಟ್ಟು 2,39,524 ಮತದಾರರಿದ್ದಾರೆ(ಪುರುಷ 1,19,712, ಮಹಿಳೆ 1,19,799) ಎಂದರು.

    ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದ ಬಿಎಲ್‌ಒಗಳಾದ ಟಿ.ಲೋಕೇಶ್, ಎಚ್.ಪಿ.ಗಿರೀಶ್, ಗೋವಿಂದೇಗೌಡ, ವೀನಾ ಕೆ.ಸಿ.ಶ್ರೀನಿವಾಸ್, ಕೆ.ಸಿ.ಕುಮಾರ್, ಅಸೀಪ್ ಇಕ್ಬಾಲ್, ಸರಸ್ವತಿ, ರೇವಣ್ಣ ಮತ್ತು ಅಂಜಲಿ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಚುನಾವಣಾ ಶಿರಸ್ತೇದಾರ್ ಕಿರಣ್‌ಕುಮಾರ್, ಗುರುಮೂರ್ತಿ, ಗೋವಿಂದೇಗೌಡ, ಟಿ.ಲೋಕೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts