More

    ಯುವ ಜನತೆ ದುಶ್ಚಟಗಳಿಂದ ದೂರವಿರಿ

    ಚಿಕ್ಕೋಡಿ, ಬೆಳಗಾವಿ: ಆರೋಗ್ಯಕರ ಸಮಾಜ ಸೃಷ್ಟಿಯಾಗಬೇಕಾದರೆ ಯುವಕರು ಮಾದಕ ವ್ಯಸನಿಗಳಾಗಬಾರದು ಎಂದು ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಲ್.ಚವ್ಹಾಣ ಹೇಳಿದರು.

    ಪಟ್ಟಣದ ಕೆಎಲ್‌ಇ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದಕ ವ್ಯಸನ ನಿಷೇಧ ದಿನದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಕರು ಹೆಚ್ಚಾಗಿ ಗಾಂಜಾ, ಅಫೀಮು, ಮದ್ಯ ಸೇವನೆಯಂತಹ ಮಾದಕ ವಸ್ತುಗಳನ್ನು ಸೇವಿಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳ ಅಕ್ರಮ ಸಾಗಣೆ ಮತ್ತು ಬಳಕೆಯ ಕುರಿತಾಗಿ ಕಾನೂನು ಕ್ರಮ ತ್ವರಿತವಾಗಿ ಜರುಗಬೇಕಿದೆ. ಪೊಲೀಸ ಮತ್ತು ನ್ಯಾಯಾಂಗದ ಮೂಲಕವೇ ಮಾದಕ ಚಟುವಟಿಕೆಗಳನ್ನು ಮಟ್ಟ ಹಾಕಲು ಆಗುವುದಿಲ್ಲ. ಕಾನೂನಿಗಿಂತ ಸ್ವಯಂ ನಿಯಂತ್ರಣ ಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಮದ್ಯವ್ಯಸನದ ಬಗ್ಗೆ ಶಾಲಾ-ಕಾಲೇಜು ಯುವಕರಿಗೆ ಜಾಗೃತಿ ಮೂಡಿಸಬೇಕಿದೆ ಎಂದರು.

    ಕಾಲೇಜಿನ ಪ್ರಾಚಾರ್ಯ ಡಾ, ಪ್ರಸಾದ ರಾಂಪೂರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಮದ್ಯವ್ಯಸನಿಗಳಾಗುವುದೆಂದರೆ ಹೆತ್ತ ತಂದೆಯರಿಗೆ ಮೋಸ ಮಾಡಿದಂತೆ ಎಂದರು.

    ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀಕಾಂತ ಟಿ, ಚಿದಾನಂದ ಬಡಿಗೇರ, 2ನೇ ಹೆಚ್ಚುವರಿ ದಿ.ನ್ಯಾ ನಾಗೇಶ ಪಾಟೀಲ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ, ನ್ಯಾಯವಾದಿ ಎಂ.ಬಿ. ಪಾಟೀಲ, ಅಭಿಯೋಜಕ ವೈ.ಜಿ. ತುಂಗಳ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಬಿ. ಸೋಲಾಪುರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts