More

    ಯುವ.ಕಾಂ ವಿರುದ್ಧ ಕ್ರಮಕ್ಕೆ ಒತ್ತಾಯ

    ಬೆಳಗಾವಿ: ನಗರದಲ್ಲಿನ ಕಿಯೋನಿಕ್ಸ್​ ಯುವ.ಕಾಂ ತರಬೇತಿ ಕೇಂದ್ರದಿಂದ ಖೊಟ್ಟಿ ದಾಖಲಾತಿ ಸೃಷ್ಟಿಸಿ, ಸರ್ಕಾರದ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಮಾಲೀಕರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಡಿಸಿಪಿ ರವೀಂದ್ರ ಗಡಾದಿ ಅವರಿಗೆ ವಕೀಲ ಆರ್​.ಎಸ್​.ಶಿರಗಾಂವೆ ಗುರುವಾರ ಮನವಿ ಸಲ್ಲಿಸಿದ್ದಾರೆ.

    ಕಿಯೋನಿಕ್ಸ್​ ಯುವ.ಕಾಂ ತರಬೇತಿ ಕೇಂದ್ರದ ಮುಖ್ಯಸ್ಥರಾದ ಲಕ್ಷಿ$್ಮ ಉದಯ ಶೆಟ್ಟಿ ಅವರು ಸರ್ಕಾರದ ಅಂಗ ಸಂಸ್ಥೆಯಾದ ಕಿಯೋನಿಕ್ಸ್​ ಹೆಸರಲ್ಲಿ ಇಲ್ಲಿನ ನೆಹರೂ ನಗರದ ಖಾಸಗಿ ಬ್ಯಾಂಕ್​ನಲ್ಲಿ “ಕಿಯೋನಿಕ್ಸ್​ ಎಬಿಸಿಎ’ ಖಾತೆ ತೆರೆದಿದ್ದಾರೆ. ಅಲ್ಲದೆ, ಆ ಖಾತೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ಹಣ ಪಡೆದು, ಯಾವುದೇ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಂಸ್ಥೆ ನಡೆಸಿದ ವ್ಯವಹಾರದ ಕುರಿತು ಆರ್​ಟಿಐ ಮನವಿ ಸಲ್ಲಿಸಿದರೂ ಸರಿಯಾಗಿ ಸ್ಪಂದಿಸಿಲ್ಲ. ತಮಗೆ ಈ ಹಿಂದೆ ಮನವಿ ಮಾಡಿದ್ದಾಗ, ಇಲಾಖೆ ಕ್ರಮಕ್ಕೆ ಮುಂದಾದಾಗ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಇದರಿಂದ ಅವರು ತಪ್ಪೆಸಗಿರುವುದು ಸಾಬೀತಾದಂತಾಗಿದ್ದು, ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts