More

    ಯುವಕರ ಅಂತರಾಳ ಅರಿತ ಶರಣಗೌಡ ಕಂದಕೂರ

    ಯಾದಗಿರಿ: ಅಲ್ಲಿ ಸಾವಿರಾರು ಯುವಕ, ಯುವತಿಯರು ಸೇರಿದ್ದರು. ಎಲ್ಲರಲ್ಲೂ ಅಕಾರ ನಡೆಸುವ ಭವಿಷ್ಯದ ರಾಜಕೀಯ ನಾಯಕರು ಹೇಗಿರಬೇಕು ಎಂಬ ಸಲಹೆ ನೀಡುವ ತವಕ. ಕೆಲವರು ಮೂಲಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಿದರೆ, ಕೆಲವರು ಪ್ರಸ್ತುತ ರಾಜಕೀಯ ವ್ಯವಸ್ಥೆ ಅಧ್ವಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮತ್ತೆ ಕೆಲವರಿಂದ ಇಷ್ಟೆಲ್ಲ ಖಚರ್ು ಮಾಡುವ ನಿಮಗೆ ದುಡ್ಡೆಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯೂ ಕೇಳಿಬಂದಿತು.

    ಇಂಥ ವಿನೂತನ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು ಸೈದಾಪುರದ ಜಿ.ಆರ್.ಪಾಕರ್್ ಸಭಾಂಗಣ. ಗುರುಮಠಕಲ್ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯಥರ್ಿ ಶರಣಗೌಡ ಕಂದಕೂರ ಅವರು ಮಂಗಳವಾರ `ಯುವ ನಾಯಕರೊಂದಿಗೆ ಯುವ ಮನಸ್ಸುಗಳ ಮುಕ್ತ ಚಚರ್ೆ’ ವಿಷಯ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಯುವಕರು ತಮ್ಮ ಅಂತರಂಗದಲ್ಲಿನ ಭಾವನೆ, ಸಲಹೆ, ಸಂದೇಹಗಳನ್ನು ಮುಕ್ತವಾಗಿ ಹಂಚಿಕೊಂಡರು.

    ಯುವ ಜನತೆ ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರಿಸಿದ ಶರಣಗೌಡ, ಗುರುಮಠಕಲ್ ಕ್ಷೇತ್ರ ಭವಿಷ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಹೊಂದಬೇಕು? ಒಬ್ಬ ರಾಜಕಾರಣಿ ಅಥವಾ ಭಾವಿ ಶಾಸಕ ಹೇಗಿರಬೇಕು? ಆಡಳಿತದಲ್ಲಿ ಚುರುಕು ಮತ್ತು ಸಾಮಾನ್ಯರೊಂದಿಗೆ ಬೆರೆಯುವ ಗುಣ ಹೀಗೆ ನಾನಾ ವಿಷಯಗಳ ಬಗ್ಗೆ ಮುಕ್ತವಾಗಿ ಚಚರ್ಿಸುವ ಉದ್ದೇಶದಿಂದಲೇ ಸಂವಾದ ಆಯೋಜಿಸಿದ್ದೇನೆ. ವಿದ್ಯಾಥರ್ಿ ಹಾಗೂ ಯುವಕ, ಯುವತಿಯರ ಮನದಿಂಗಿತ ಅರಿತು ಉತ್ತರ ಕಂಡುಕೊಳ್ಳುವ ಹಲವು ವರ್ಷಗಳ ನನ್ನ ಬಯಕೆ ಇಂದು ಈಡೇರಿತು ಎಂದರು.

    ಪಕ್ಷೇಭದ ಮರೆತು ನಡೆದ ಸಂವಾದಕ್ಕೆ ಕ್ಷೇತ್ರದ ವಿವಿಧೆಡೆಯಿಂದ ಯವಕರು ಆಗಮಿಸಿದ್ದರು. ವಿದ್ಯಾಥರ್ಿಗಳು ಆಸಕ್ತಿಯಿಂದ ಬಂದು ಮುಕ್ತವಾಗಿ ಪ್ರಶ್ನೆ ಕೇಳಿದರು. ಹಲವು ಮಹತ್ವದ ಸಲಹೆಗಳನ್ನು ನೀಡಿದರು. ಉತ್ತಮ ಸಲಹೆ ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ಶರಣಗೌಡ ಭರವಸೆ ನೀಡಿದರು. ಯಾದಗಿರಿ ಜಿಲ್ಲೆಯ ರಾಜಕೀಯದಲ್ಲಿ ಶರಣಗೌಡ ಅವರು ನಡೆಸಿದ ಯುವ ಸಂವಾದ ವಿನೂತನ ಪ್ರಯೋಗ ಎನಿಸಿತು.

    ಸಂವಾದದಲ್ಲಿ ಅನೇಕ ವಿದ್ಯಾಥರ್ಿ, ಯುವಕರ ಪ್ರಖರವಾದ ಪ್ರಶ್ನೆಗಳಿಗೆ ಶರಣಗೌಡ ಕಂದಕೂರ ಅವರು ನಿಖರ ಉತ್ತರ ನೀಡಿದರು. ಕ್ಷೇತ್ರದ ಬಗ್ಗೆ ಹೊಂದಿರುವ ವಿಷನ್ ಏನಿದೆ ಎಂಬುದು ಶರಣಗೌಡ ಎಳೆಎಳೆಯಾಗಿ ಬಿಚ್ಚಿಟ್ಟರು. ಶರಣಗೌಡರ ಭರವಸೆ ಮಾತುಗಳನ್ನು ಕೇಳಿದ ಯುವಕರು,ರಾಜಕೀಯ ಕ್ಷೇತ್ರ ತಿಳಿಯಾಗಲು ಉತ್ತಮ ಯುವಕರು ಬರಬೇಕು ಎಂದರು. ಈ ಮೂಲಕ ಶರಣಗೌಡ ಚಿಂತನೆಗೆ ಶಕ್ತಿ ತುಂಬಿದರು. ರೈತರಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಇದು ಜೆಡಿಎಸ್ ಅಕಾರಕ್ಕೆ ಬಂದರೆ ಸಾಕಾರವಾಗಲಿದೆ. ಕ್ಷೇತ್ರದ ಯುವಕರಲ್ಲಿ ಕೌಶಲ ಅಭಿವೃದ್ಧಿಗೆ ಸ್ಕಿಲ್ ಡೆವಲಪಮೆಂಟ್ ಸೆಂಟರ್ ಸ್ಥಾಪಿಸುವ ಉದ್ದೇಶವಿದೆ. ಭ್ರಷ್ಟಾಚಾರ ಬೇರು ಸಮೇತ ಕಿತ್ತೊಗೆದು ಪಾರದರ್ಶಕ ಆಡಳಿತಕ್ಕೆ ಶ್ರಮಿಸಲಾಗುವುದು. ಕ್ಷೇತ್ರದ ಸಮಗ್ರ ವಿಕಾಸಕ್ಕೆ ವಿಶೇಷ ನೀಲಿನಕ್ಷೆ ಸಿದ್ಧಪಡಿಸಲಾಗುವುದು. ಮುಂದೊಂದು ದಿವಸ ಕ್ಷೇತ್ರದಲ್ಲಿ ಭ್ರಷ್ಟಾಚಾರ ಇಲ್ಲದೇ ಚುನಾವಣೆ ನಡೆಸಿ ತೋರಿಸುವ ಗುರಿಯಿದೆ ಎಂದು ಶರಣಗೌಡ ಕಂದಕೂರ ಯುವಕರ ಸಾಲು ಸಾಲು ಪ್ರಶ್ನೆಗೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts